Realtime blog statisticsweb statistics
udupibits.in
Breaking News
ಉಡುಪಿ: ಜಿಲ್ಲೆಯ 25 ಮಂದಿ ಪೊಲೀಸ್ ವಾಹನ ಚಾಲಕ ಸಿಬ್ಬಂದಿಗಳ ಪರಸ್ಪರ ವರ್ಗಾವಣೆ.

ಸಾಹಿತ್ಯದಿಂದ ಜೀವನೋತ್ಸಾಹ: ಡಾ.ಕಾಸರಗೋಡು ಅಶೋಕ್ ಕುಮಾರ್

ಉಡುಪಿ: ಸಾಹಿತ್ಯ ರಚನೆಯಿಂದ, ಸಾಹಿತ್ಯದ ಪ್ರೀತಿಯಿಂದ ಆತ್ಮಸಂತೋಷ ಮತ್ತು ಜೀವನೋತ್ಸಾಹ ಲಭಿಸುತ್ತದೆ. ಜೀವನೋತ್ಸಾಹದಿಂದ ಖಿನ್ನತೆ ಹತ್ತಿರ ಸುಳಿಯುವುದಿಲ್ಲ ಎಂದು ಹಿರಿಯ ಕವಿ, ಪತ್ತೆದಾರಿ ಕಾದಂಬರಿಕಾರ, ನಟ ಡಾ. ಕಾಸರಗೋಡು ಅಶೋಕ್ ಕುಮಾರ್ ಅವರು ಹೇಳಿದರು.

ಉಡುಪಿ ಬೀಡಿನಗುಡ್ಡೆಯ ಪ್ರಕಾಶ್ ಪೂಜಾರಿಯವರ ಮನೆಯಂಗಳದ ‘ಬೆನಗಲ್ ನರಸಿಂಗ್ ರಾವ್ ಸಭಾಂಗಣ’ದಲ್ಲಿ ಇತ್ತೀಚೆಗೆ ನಡೆದ ‘ಜನಪರ ಚಿಂತನ ವೇದಿಕೆ’ಯ ಫೆಬ್ರವರಿಯ ‘ತಿಂಗಳ ಬೆಳಕು’ ಕಾರ್ಯಕ್ರಮದಲ್ಲಿ ‘ಸಾಹಿತ್ಯಾಭಿರುಚಿ’ ವಿಷಯದಲ್ಲಿ ಉಪನ್ಯಾಸ ನೀಡಿ ಅವರು ಮಾತನಾಡುತ್ತಿದ್ದರು.

ಡಾ.ಕೆ.ಶಿವರಾಮ ಕಾರಂತ, ದಿನಕರ ದೇಸಾಯಿ, ಗಣಪತಿ ದಿವಾಣ, ಶಿಂಗಣ್ಣ, ನಾಡಿಗ್, ಡುಂಡಿರಾಜ್ ಮೊದಲಾದವರ ಸಾಹಿತ್ಯವನ್ನು ನೆನಪಿಸಿಕೊಂಡ ಕಾಸರಗೋಡು ಅಶೋಕ್ ಕುಮಾರ್ ಅವರು, ಸಾಹಿತ್ಯ ರಚಿಸುವ ಮೂಲಕ ಸಾಹಿತಿ ಎನಿಸಿಕೊಂಡವರು ಸತ್ತ ಬಳಕಿವೂ ಬಕುಕಿರುತ್ತಾರೆ. ಪ್ರತೀ ಮಕ್ಕಳಲ್ಲಿ ಸಾಹಿತ್ಯದಲ್ಲಿ ಒಲವಿರುತ್ತದೆ. ಆದರೆ ಅದನ್ನು ಬೆಳೆಸುವ ಕೆಲಸ ಸೂಕ್ತ ರೀತಿಯಲ್ಲಿ ಆಗುತ್ತಿಲ್ಲ. ಮಕ್ಕಳಲ್ಲಿ ಸಾಹಿತ್ಯಾಭಿರುಚಿಯನ್ನು ಬೆಳೆಸುವ ಕೆಲಸವನ್ನು ಹೆತ್ತವರು ಹಾಗೂ ಶಿಕ್ಷಕರು ಮಾಡಬೇಕು ಎಂದು ತಿಳಿಸಿದರು.

ಸುಮಾ ಜಿ. ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಆದರ್ಶ ಕಟಪಾಡಿ ಹಾಗೂ ಭಾರತಿ ಅವರು ಅಭಿಪ್ರಾಯಗಳನ್ನು ಮಂಡಿಸಿದರು. ಕಾರ್ಯಕ್ರಮಕ್ಕೆ ಮೊದಲು ನಡೆಸಿದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಕಾಸರಗೋಡು ಅಶೋಕ್ ಕುಮಾರ್ ಅವರು ಬಹುಮಾನಗಳನ್ನು ವಿತರಿಸಿದರು. ಶ್ರೀರಾಮ ದಿವಾಣ ಅವರು ದಿ. ಗಣಪತಿ ದಿವಾಣ ಅವರ ‘ಕುಕ್ಕುದ ಮರೊ’ ತುಳು ಕವಿತೆಯನ್ನು ವಾಚಿಸಿದರು. ಪ್ರಕಾಶ್ ಪೂಜಾರಿ ಸ್ವಾಗತಿಸಿ, ವಂದಿಸಿದರು.

 

Leave a Reply

Your email address will not be published. Required fields are marked *