Realtime blog statisticsweb statistics
udupibits.in
Breaking News
ಮಂಗಳೂರು: ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣರಿಂದ ಹೇಳಿಕೆ- ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆರೋಪ

ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರದ ಚಾರಿತ್ರಿಕ ಹಿನ್ನೆಲೆ ಮತ್ತು ಸ್ಥಾನಚ್ಯುತಿಹೊಂದಿ ಗುಪ್ತವಾಗಿರಿಸಿದ ಸಿದ್ಧಿವಿನಾಯಕ ದೇವರು: ಸೂಕ್ಷ್ಮ ಪರಿಚಯ

* ಡಾ/ ಮ. ಸು. ಅಚ್ಚುತ ಶರ್ಮಾ, ಮಂಗಳೂರು (ಕುಕ್ಕೆ ಕ್ಷೇತ್ರದ ಮಾಜಿ ಧರ್ಮದರ್ಶಿಗಳು)

# ಶ್ರೀ ಗಣೇಶಾಯ ನಮಃ/ ಶ್ರೀ ಸುಬ್ರಹ್ಮಣ್ಯೇಶ್ವಾರಯ ನಮಃ//
ಧ್ಯಾಯೆತ್ಸಿಂಹಗತಂ ವಿನಾಯಕ ಮಮುಂ ದಿಗ್ಬಾಹು ಮಾದ್ಯೆಯಗೇ/
ತ್ರೆತಾಯಾಂತು ಮಯೂರ ವಾಹನ ಮಮುಂ ಷಡ್ಬಾಹುಕಂ ಸಿದ್ಧಿದಂ
ದ್ವಾಪರೇತು ಗಜಾನನಂ ಯುಗಭುಜಂ ರಕ್ತಾಂಗ ರಾಗೋಜ್ವಲಂ/
ತುರ್ಯೇತು ದ್ವಭುಜಂ ಸಿತಾಂಗ ರುಚಿರಂ ಸರ್ವಾರ್ಥದಂ ಸರ್ವದಾ//
ಶಡಾನನಂ ಕುಂಕುಮ ರಕ್ತವರ್ಣಂ/ ಮಹಾಮತಿಂ ದಿವ್ಯ ಮಯೂರ ವಾಹನಂ//
ರುದ್ರಸ್ಯಸೂನುಂ ಸುರ ಸೈನ್ಯನಾಥಂ/ ಗುಹಂ ಸದಾ ಶರಣಮಹಂ ಪ್ರಪದ್ಯೆ//

ಈ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರವು ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಶೈವ ಕ್ಷೇತ್ರಗಳಾದ ಕೊಲ್ಲೂರು, ಉಡುಪಿ, ಧರ್ಮಸ್ಥಳ ಇತ್ಯಾದಿಗಳಂತೆ ಪ್ರಾಮುಖ್ಯವಾದ ಶೈವ ಕ್ಷೇತ್ರವಾಗಿದೆ.

ಇದು ದಕ್ಷಿಣ ಭಾರತದ ಪಡು ಕರಾವಳಿಯಲ್ಲಿರುವ ದಕ್ಷಿಣ ಕನ್ನಡ ಜಿಲ್ಲೆಯ ಈಗಿನ ಸುಳ್ಯ ತಾಲೂಕಿನಲ್ಲಿದೆ. ಇದು ಜಿಲ್ಲೆಯ ಅತಿ ಪೂರ್ವ ದಿಕ್ಕಿನಲ್ಲಿರುವ ಪಶ್ಚಿಮ ಘಟ್ಟಗಳ ತಪ್ಪಲಲ್ಲಿ ಕುಮಾರ ಪರ್ವತದ ಬುಡದಲ್ಲಿ ಸುಬ್ರಹ್ಮಣ್ಯ ಎಂಬ ಹೆಸರುಳ್ಳ ಗ್ರಾಮದಲ್ಲಿ ಮೆರೆಯುತ್ತಿದೆ. ಈ ಕ್ಷೇತ್ರದಲ್ಲಿ ಶ್ರೀ ಸುಬ್ರಹ್ಮಣ್ಯೇಶ್ವರನನ್ನು ನಾಗರೂಪದಿಂದ ಆರಾಧಿಸುತ್ತಾರೆ. ಹೆಚ್ಚೆಂದರೆ ಅಖಿಲ ಭಾರತದಲ್ಲಿ ಶ್ರೀ ಸುಬ್ರಹ್ಮಣ್ಯನನ್ನು ಈಗ ನಾಗ ರೂಪದಿಂದ ಆರಾಧಿಸುವುದು ಇದು ಒಂದೇ ಕ್ಷೇತ್ರದಲ್ಲಿ ಎಂದು ಹೇಳಲೂಬಹುದು.

ಈ ಕ್ಷೇತ್ರವು ಸಮುದ್ರ ಮಟ್ಟದಿಂದ ಸಾಧಾರಣ ೫೬೨೬ ಅಡಿ ಎತ್ತರವುಳ್ಳ ಕುಮಾರ ಪರ್ವತಕ್ಕೆ ತಾಗಿ ಇರುವ ಪುಷ್ಪಗಿರಿ ಎಂದು ಕರೆಯಲ್ಪಡುವ ಬೆಟ್ಟದ ತಪ್ಪಲಲ್ಲಿ ಇರುವುದರಿಂದ ಇದನ್ನು ಒಂದು ಕಾಲದಲ್ಲಿ ಪುಷ್ಪಗಿರಿ ಎಂದೂ ಕರೆಯುತ್ತಿದ್ದರು. ಈ ಕ್ಷೇತ್ರಕ್ಕೆ ಮೂಡು ಈಶಾನ್ಯ ಭಾಗದಲ್ಲಿ ಕೊಡಗು ಮತ್ತು ಮೈಸೂರು ಪ್ರಾಂತ್ಯಗಳು ಇವೆ. ಈ ಕ್ಷೇತ್ರದ ಅಕ್ಷಾಂಶ ರೇಖಾಂಶಗಳು 12 ಡಿಗ್ರಿ – 41 ಎನ್ ಮತ್ತು 75 ಡಿಗ್ರಿ. 36′ ಎಲ್ ಆಗಿದೆ. ಇದು ಭಾರತದಲ್ಲೇ ಪ್ರಸಿದ್ಧವಾದ ಶೈವ ಕ್ಷೇತ್ರವಾಗಿದೆ.

ಈ ಕ್ಷೇತ್ರವು ಮೈಸೂರು ಶ್ರೀ ಮುಮ್ಮಡಿ ಕೃಷ್ಣರಾಜ ವಡೆಯರ್ ವಿರಚಿತ “ತತ್ವನಿಧಿ” ಎಂಬ ಪುಸ್ತಕದ ಲಲಿತಾಗಮ ಸಟಲದಲ್ಲಿ ನಿರೂಪಿಸಿದ ಪ್ರಕಾರ ಭರತ ಖಂಡಸ್ಥ ೧೦೮ ಶೈವ ಕ್ಷೇತ್ರಗಳಲ್ಲಿ ಒಂದಾಗಿದ್ದು ದಿವ್ಯ ಲಿಂಗಗಳ ಪೈಕಿ ”ಅಹಿಪೇಶ್ವರ ಲಿಂಗ” ವಾಸುಕಿ ಲಿಂಗವು ಇಲ್ಲಿ ಮುಖ್ಯವಾಗಿ ಇರಬೇಕಾಗಿತ್ತು. ಆದರೆ ಈಗ ಗರ್ಭಗೃಹದ ಒಂಲಗೆ ಲಿಂಗವೇ ಕಾಣುವುದಿಲ್ಲ.

(ಮುಂದುವರಿಯುವುದು)

Leave a Reply

Your email address will not be published. Required fields are marked *