Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಶ್ರೀ ಪುತ್ತೂರು ಕ್ಷೇತ್ರದ ನೈಜ ಚಿತ್ರ, ಚಾರಿತ್ರಿಕ ಹತ್ತು ಚೋದ್ಯಗಳು ಮತ್ತು ಪೊಳಲಿ ಕ್ಷೇತ್ರ

* ಡಾ.ಮ.ಸು.ಅಚ್ಚುತ ಶರ್ಮಾ, ಮಂಗಳೂರು

# ವಂದೇ ವಿಘ್ನ ವಿನಾಶಾಯ ಶಾಂತಂ ಸಿದ್ಧಿವಿನಾಯಕಂ
ನಂದಿ ಭೃಂಗಿ ಸಮೋಪೇತಂ ಪಾರ್ವತೀ ಪ್ರಿಯನಂದನಂ
ವಂದೇ ಶಂಭು ಮುಮಾಪತಿಂ ಸುರಗುರುಂ ವಂದೇ ಜಗತ್ಕಾರಣಂ
ವಂದೇ ಪನ್ನಗ ಭೂಷಣಂ ಮೃಗಧರಂ ವಂದೇ ಪಶೂನಾಂಪತಿಂ
ವಂದೇ ಸೂರ್ಯ ಶಶಾಂಕ ವಹ್ನಿ ನಯನಂ ವಂದೇ ಮುಕುಂದಪ್ರಿಯಂ
ವಂದೇ ಭಕ್ತ ಜನಾಶ್ರಯಂ ಚ ವರದಂ ವಂದೇ ಶಿವಂ ಶಂಕರಂ

ಈ ಪುತ್ತೂರು ವಾ ಮೌಕ್ತಿಕಪುರವು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನಲ್ಲಿದೆ. ಇಲ್ಲಿಯ ಶ್ರೀ ಮಹಾಲಿಂಗೇಶ್ವರ ದೇವರ ಸರೋವರದಂತಿರುವ ಕೆರೆಯಲ್ಲಿ ಪೂರ್ವದಲ್ಲಿ ಮುತ್ತು ಹುಟ್ಟಿರುವುದೆಂಬ ಪ್ರತೀತಿಯಿಂದ ಇಲ್ಲಿಗೆ ಮೌಕ್ತಿಕಪುರ ಅಂದರೆ ಮುತ್ತಿನಪುರವೆಂಬ ಹೆಸರುಬಂದಿದೆ ಎಂದು ಅರ್ಥವಾಗುತ್ತದೆ. ಇಲ್ಲಿ ಪ್ರಧಾನ ದೇವರಾದ ಮಹಾಲಿಂಗೇಶ್ವರ ದೇವಾಲಯವು ಮೇಲಿನ ಕೆರೆಯ ಮೂಡುಬದಿಯಲ್ಲಿ ಮೂಡುಮುಖವಾಗಿದೆ.

ಇಲ್ಲಿಂದ ಸಾಧಾರಣ ಎಂಟು ಮೈಲು ದೂರದಲ್ಲಿರುವ ಶ್ರೀ ಸಹಸ್ರಲಿಂಗೇಶ್ವರನ ಕ್ಷೇತ್ರವಾದ ಉಪ್ಪಿನಂಗಡಿಯಲ್ಲಿ ಮೊತ್ತಮೊದಲು ತಾಲೂಕು ಕಚೇರಿ ಮೊದಲಾದ ಸರಕಾರಿ ಕಟ್ಟೋಣಗಳು ಇದ್ದುದರಿಂದ ಆಗ ಉಪ್ಪಿನಂಗಡಿ ತಾಲೂಕಿಗೆ ಈ ಪಟ್ಟಣವು ಸೇರಿತ್ತು. ಕ್ರಮೇಣ ಆ ಕಚೇರಿಗಳು ಪುತ್ತೂರಿಗೆ ವರ್ಗಾಯಿಸಲ್ಪಟ್ಟುದರಿಂದ ಈ ಪುತ್ತೂರಲ್ಲಿ ವ್ಯಾಪಾರೋದ್ಯೋಗಗಳು ಹೆಚ್ಚಾಗಿ ಜನಸಂಖ್ಯೆ ಏರುತ್ತಾ ಬಂತು. ಈಗ ಹೈಸ್ಕೂಲುಗಳು, ಮೊದಲ ತರಗತಿಯ ಕಾಲೇಜುಗಳು, ಆಸ್ಪತ್ರೆಗಳು, ಅನೇಕ ಬೇಂಕ್‌ಗಳು, ಸಿನಿಮಾ ಮಂದಿರ, ಅಲ್ಲದೆ, ಪ್ರತಿ ಸೋಮವಾರ ಇಲ್ಲಿಯ ಕೋರ್ಟಿನ ಕೆಳಗೆ ಇರುವ ಮಾರ್ಕೆಟ್‌ನಲ್ಲಿ ಜರಗುವ ಸಂತೆಯಿಂದಲೂ ಜನಸಂಖ್ಯೆಯು ಮತ್ತಷ್ಟು ಏರುತ್ತಾ ಬಂದು ಈಗ ದೊಡ್ಡ ಪಟ್ಟಣವಾಗಿ ಪರಿಣಮಿಸಿದೆ.

ಈ ಮಹಾಲಿಂಗೇಶ್ವರ ದೇವರ ಲಿಂಗದ ಪ್ರತಿಷ್ಠಾಪಕರಾದ ನಟ್ಟೋಜಿ ಮನೆತನದ ಮೂಲಪುರುಷರು ಆದಿಯಲ್ಲಿ ಪೊಳಲಿಯಲ್ಲಿ ಇದ್ದವರೆಂದೂ, ಅಲ್ಲಿಂದ ಹೊರಟ ಮೂರು ಜನ ಅಣ್ಣ ತಮ್ಮಂದಿರು ಕಾಶೀಯಾತ್ರೆ ಮುಗಿಸಿ ಬರುವಾಗ ತಾವು ತಂದ ಶಿವಲಿಂಗಗಳೆರಡರಲ್ಲಿ ಒಬ್ಬನು ಒಂದನ್ನು ವಿಟ್ಲದರಸನ ಸಹಾಯದಿಂದ ಶ್ರೀ ಪಂಚಲಿಂಗೇಶ್ವರನೆಂಬ ಹೆಸರಿನಿಂದ ವಿಟ್ಲದಲ್ಲಿ ಪ್ರತಿಷ್ಠಿಸಿ ತಾನು ಚೇರ ವಾಶ್ಯಾರ ಎಂದು ಹೇಳಲ್ಪಡುವ ಸ್ಥಳದಲ್ಲಿ ವಾಸಿಸಿದನೆಂದೂ ತಿಳಿದುಬರುತ್ತದೆ.

ಅವರಲ್ಲೊಬ್ಬನು ಪುತ್ತೂರಿಗೆ ಬಂದು ತಾನು ತನ್ನ ನಿತ್ಯ ಶಿವಪೂಜೆ ಮಾಡಿ ವಾಪಾಸು ತನ್ನ ಪೆಟ್ಟಿಗೆಗೆ ಶಿವಲಿಂಗವನ್ನು ಹಾಕಲು ಪ್ರಯತ್ನಿಸಿದಾಗ ಆ ಲಿಂಗವು ತೆಗೆಯಲು ಬಾರದೆ ಅಲ್ಲಿಯೇ ನೆಲೆಯಾಗಿ ನಿಂತದ್ದರಿಂದ ಅಲ್ಲಿಯ ಆಗಿನ ಬಂಗ ಅರಸನ ಸಹಾಯದಿಂದ ಮಹಾಲಿಂಗೇಶ್ವರನಿಗೆ ದೇವಸ್ಥಾನವೊಂದನ್ನು ಕಟ್ಟಿಸಿ ಆ ದೇವರ ಅನುಜ್ಞೆಯ ಮೇರೆಗೆ ತಾನು ದೇವಸ್ಥಾನದ ಪಡುದಿಕ್ಕಿನಲ್ಲಿ ತನ್ನ ಮನೆಯನ್ನು ಕಟ್ಟಿಸಿಕೊಂಡು ವಾಸಿಸಿದನೆಂದೂ ತಿಳಿದುಬರುತ್ತದೆ. (ಪುತ್ತೂರಿನ ಮುಂದಿನ ಚರಿತ್ರೆಯನ್ನು ಆ ಪದ್ಯಗಳ ವಿವರಣೆಯಿಂದ ತಿಳಿದುಕೊಳ್ಳಬಹುದು. ಇದರಲ್ಲಿ ಒಂದಾದ “ತಾತನ ತಾತನ ತಾತನಾಗಿರುವನ………..” ಎಂಬ ಪದ್ಯದಿಂದ ಈ ಕೃತಿಯನ್ನು ರಚಿಸಿದವರು ಸುಬ್ರಾಯರೆಂಬ ಹೆಸರುಳ್ಳವನೆಂದು ತಿಳಿಯಬಹುದು.

ಮುಂದುವರಿಯುವುದು

Leave a Reply

Your email address will not be published. Required fields are marked *