Realtime blog statisticsweb statistics
udupibits.in
Breaking News
ಉಡುಪಿ: ಕನಿಷ್ಠ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ನಗರಸಭೆ, ಜಿಲ್ಲಾಡಳಿತ, ರಾಜ್ಯ-ಕೇಂದ್ರ ಸರಕಾರ ಸಂಪೂರ್ಣ ವಿಫಲ !

ಪುತ್ತೂರು ಕ್ಷೇತ್ರದ ಚಾರಿತ್ರಿಕ ಹತ್ತು ಚೋದ್ಯಗಳು ಮತ್ತು ಪೊಳಲಿ ಕ್ಷೇತ್ರ-ಭಾಗ 2

# ಈ ಮಹಾಲಿಂಗೇಶ್ವರ ದೇವಸ್ಥಾನವು ಮೂಡು ಮುಖವಾಗಿ ನಾಲ್ಕು ಗೋಪುರಗಳಿಂದಲೂ ಹೊರ ಮತ್ತು ಒಳ ಅಂಗಣಗಳಿಂದ ಕೂಡಿದ್ದು ವಿಶಾಲವಾದ ಸ್ಥಳದಲ್ಲಿ ಕಟ್ಟಲ್ಪಟ್ಟು ಪ್ರೇಕ್ಷಕರಿಗೆ ಆಕರ್ಷಣೀಯವಾಗಿದೆ. ಇದು ಶಿವಾಲಯವಾದರೂ ಇಲ್ಲಿ ಈಗ ಪೂಜೆ ಮಾಡುವವರು ಮಾಧ್ವ ವೈಷ್ಣವರು. ಇಲ್ಲಿ ಈಶ್ವರನಿಗೆ ಶೈವಾಗಮ ಪ್ರಕಾರವಾಗಿ ಪೂಜೆ ನಡೆಯುವುದಿಲ್ಲ. ಅದರ ಬದಲಿಗೆ ಅರ್ಚಕರು ಶಿವಲಿಂಗದ ಹತ್ತಿರ ಶಾಲಿಗ್ರಾಮಗಳನ್ನಿಟ್ಟು ಪೂಜಿಸಿ ಹೊರಗಿನಿಂದ ಬಂದ ಭಕ್ತಾಧಿಗಳಿಗೆ ಶಿವಪ್ರಸಾದವೆಂದು ತುಳಸೀ ಗಂಧವನ್ನು ಕೊಟ್ಟು ಜನರನ್ನು ಕಳುಹಿಸುತ್ತಾರೆ. ಶಿವನಿಗೆ ಪ್ರಿಯವಾದ ಬಿಲ್ವಪತ್ರೆ ವಾ ವಿಭೂತಿ ಪ್ರಸಾದಗಳನ್ನು ಕೊಡುವ ಕ್ರಮವಿಲ್ಲ. ಈ ವಾಡಿಕೆಯು ಸಾಧಾರಣ ಮಾಧ್ವರು ಈ ದೇವಸ್ಥಾನಕ್ಕೆ ಪ್ರವೇಶಿಸಿದ ನಂತರವೇ ಬಂದದ್ದಾಗಿದೆ.

ಈ ದೇವಳದಲ್ಲಿ ವರ್ಷಂಪ್ರತಿ ಮಹೋತ್ಸವವು ಸೌರ ಯುಗಾದಿ ಸಮಯದಲ್ಲಿ ಜರಗುವುದು. ಮಹೋತ್ಸವಕ್ಕೆ ಮೊದಲು ಹತ್ತಿರದಲ್ಲಿರುವ ‘ಇಲ್ನಾಡುಂ’ ಎಂಬ ಉಳ್ಳಾಳ್ತಿಯ ದೈವಾಲಯದಿಂದ ಇಲ್ಲಿಗೆ ಭಂಡಾರವು ವಾದ್ಯಘೋಷಗಳಿಂದ ವೈಭವಪೂರಿತವಾಗಿ ಬರುವುದು ವಾಡಿಕೆ. ಇಲ್ಲಿ ಅವಭೃತ ಸ್ನಾನದ ದಿವಸ ಇಲ್ಲಿಯ ದೇವರು ಸಾಧಾರಣ 6, 7 ಮೈಲು ದೂರವಿರುವ ಬೀರಮಂಗಿಲ ಎಂಬಲ್ಲಿ ಕುಮಾರಧಾರಾ ನದಿಯಲ್ಲಿ ಸ್ನಾನ ಮಾಡುವುದು ಪದ್ಧತಿಯಾಗಿದೆ.

ಈ ದೇವಳದಂತೆ ದಕ್ಷಿಣ ಕನ್ನಡದಲ್ಲಿ ಒಳ್ಳೆ ಉತ್ಪತ್ತಿಯಿರುವ ಪ್ರಸಿದ್ಧ ಶಿವಸಮ್ಮಂಧ ದೇವಾಲಯಗಳಾದ ಶ್ರೀ ಕುಕ್ಕೆ ಸುಬ್ರಹ್ಮಣ್ಯ, ಧರ್ಮಸ್ಥಳ, ಉಡುಪಿಯ ಅನಂತೇಶ್ವರ ಚಂದ್ರಮೌಳೀಶ್ವರ, ಮಂಗಳೂರು ಶರಭೇಶ್ವರ, ಕುಡುಪು ಸುಬ್ರಹ್ಮಣ್ಯ, ಕಟೀಲು ಮತ್ತು ಬಪ್ಪನಾಡು ದುರ್ಗಾಪರಮೇಶ್ವರಿ ಮತ್ತು ಕದ್ರಿ ಮಂಜುನಾಥ ಇತ್ಯಾದಿ ಅನೇಕ ಶೈವ ದೇವಾಲಯಗಳಲ್ಲಿ ಈ ಮಾಧ್ವ ವೈಷ್ಣವರ ಪ್ರವೇಶದ ನಂತರ ಅವುಗಳು ತಮ್ಮ ಆಗಮೋಕ್ತ ಪೂಜೆಯನ್ನು ಕಳಕೊಂಡು ಶಿವನಿಗೆ ಪ್ರಿಯವಾದ ಬಿಲ್ವಪತ್ರೆ ವಿಭೂತಿ ಪ್ರಸಾದಗಳಿಲ್ಲದೆ ಕ್ರಮ ತಪ್ಪಿದಂತಹ ಪೂಜೆಯಲ್ಲಿದೆ.

(1968ರಲ್ಲಿ ಪ್ರಕಟವಾದ ‘ಶ್ರೀ ಪುತ್ತೂರು ಕ್ಷೇತ್ರದ ನೈಜ ಚಿತ್ರ, ಚಾರಿತ್ರಿಕ ಹತ್ತು ಚೋದ್ಯಗಳು ಮತ್ತು ಪೊಳಲಿ ಕ್ಷೇತ್ರ’ ಎಂಬ ಪುಸ್ತಕದಿಂದ)

ಮುಂದುವರಿಯುವುದು

Leave a Reply

Your email address will not be published. Required fields are marked *