Realtime blog statisticsweb statistics
udupibits.in
Breaking News
ಉಡುಪಿ: ಕನಿಷ್ಠ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ನಗರಸಭೆ, ಜಿಲ್ಲಾಡಳಿತ, ರಾಜ್ಯ-ಕೇಂದ್ರ ಸರಕಾರ ಸಂಪೂರ್ಣ ವಿಫಲ !

ಕುಕ್ಕೆ ಕ್ಷೇತ್ರದ ಚಾರಿತ್ರಿಕ ಹಿನ್ನೆಲೆ- ಭಾಗ 3

  • ಡಾ.ಮ.ಸು.ಅಚ್ಚುತ ಶರ್ಮಾ

# ಈಗಿನ ಸುಬ್ರಹ್ಮಣ್ಯ ಕ್ಷೇತ್ರವು ಇರುವ ಗ್ರಾಮಕ್ಕೆ ಈಗ ಸುಬ್ರಹ್ಮಣ್ಯ ಗ್ರಾಮವೆಂದು ಹೆಸರಿದ್ದರೂ ಮೊತ್ತಮೊದಲು ಇದಕ್ಕೆ ”ಕಸ್ಬಾ ಕುಕ್ಕೆ ಗ್ರಾಮ” ಎಂದು ಕರೆಯುತ್ತಿದ್ದರು. ಈಗ ಈ ಗ್ರಾಮ ಸೇರಿ 32 ಗ್ರಾಮಗಳ ಗುಂಪಿಗೆ ಸುಬ್ರಹ್ಮಣ್ಯ ಸೀಮೆ ಎಂಬುದಾಗಿ ಹೆಸರಿತ್ತು.

ಆ 32 ಗ್ರಾಮಗಳು ಯಾವುವೆಂದರೆ: ಕಸ್ಬಾ ಕುಕ್ಕೆ, ಸಂಕೇತ ಕುಕ್ಕೆ (ಇಂಜಾತಿಯ ಬಲ್ಲಾಳ ರಾಯನ ಬೀಡು ಇರುವ ಸ್ಥಳ), ಕಸ್ಬಾಕಿದು, ಕುಳಗುಂದ (ಈಗ ಜಾನುವಾರು ಸಂತೆ ಆಗುವ ಸ್ಥಳ ಮತ್ತು ಬಲ್ಲಾಳರಾಯನ ಬೀಡು ಇದ್ದ ಸ್ಥಳ), ಬಾಗೆಮಲೆ, ಆಯಿನಕಿದು, ಬಿಳಿನೆಲೆ, ಕೊಂಬಾರು, ಸಿರಿಬಾಗಿಲು, ರೆಂಜಿಲಾಡಿ, ನೂಜಿಬಾಳ್ತಿಲ, ಕುಟ್ರುಪಾಡಿ, ಏನೆಕಲ್ಲು, ಹರಿಹರ ಪಳ್ಳತ್ತಡ್ಕ, ಕಳ್ಮೆಕಾರು, ನೇರಂಕಿ, ಪುತ್ತಿಗೆ, ಕೋಣಾಜೆ, ದರ್ಭೆತಡ್ಕ, ನೆಕ್ಕಿಲಾಡಿ, ಬಂಟ್ರ, ಸಂಕೇತ ಕೇಪು, ಸಂಕೇತ ಮಟ್ಟಂಪಾಡಿ, ಕುತ್ಕುಂಜ, ಕಸ್ಬಾಮೀನಂಪಾಡಿ, ಸಂಕೇತ ಮೀನಂಪಾಡಿ, ಎಳಿಯೂರು, ಕೋಡಿಂಬಳ, ಕಡಬ, ಸಂಕೇತ ಕಡಬ, ಮಲೆಐತ್ತೂರು, ಬಾಳಗೋಡು.

ಈ 32 ಗ್ರಾಮಗಳು ಸುಬ್ರಹ್ಮಣ್ಯ ಸೀಮೆ ಎಂಬ ಹೆಸರು ಪಡಕೊಂಡು ಬಲ್ಲಾಳ ರಾಯನ ಕೈಕೆಳಗೆ ಇತ್ತು. ಇವರು ಜೈನ ಮತಸ್ಥರು. ಈ ಬಲ್ಲಾಳರಾಯನ ಕಡೆಯವರಲ್ಲಿ ಒಂದು ಮನೆಯು ಈಗಲೂ ರೆಂಜಿಲಾಡಿ ಗ್ರಾಮದಲ್ಲಿದೆ. ಮೇಲೆ ಹೇಳಲ್ಪಟ್ಟ ಗ್ರಾಮಗಳು ಈಗ ಸ್ವಲ್ಪ ವ್ಯತ್ಯಾಸವಾಗಿ ಕೆಲವು ಗ್ರಾಮಗಳು ಒಂದಕ್ಕೊಂದು ಸೇರಿವೆ. ಮುಂಚಿನ ಕಸ್ಬಾಕುಕ್ಕೆ, ಸಂಕೇತಕುಕ್ಕೆ ಮತ್ತು ಕುಳುಗುಂದವೆಂಬ ಈ ಮೂರು ಗ್ರಾಮಗಳೂ ಒಟ್ಟು ಸೇರಿ ಈಗ ಸುಬ್ರಹ್ಮಣ್ಯ ಗ್ರಾಮವೆಂದು ಕರೆಯಲ್ಪಡುತ್ತದೆ.

ಮುಂದುವರಿಯುವುದು

Leave a Reply

Your email address will not be published. Required fields are marked *