Realtime blog statisticsweb statistics
udupibits.in
Breaking News
ಉಡುಪಿ: ಕನಿಷ್ಠ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ನಗರಸಭೆ, ಜಿಲ್ಲಾಡಳಿತ, ರಾಜ್ಯ-ಕೇಂದ್ರ ಸರಕಾರ ಸಂಪೂರ್ಣ ವಿಫಲ !

ಪುತ್ತೂರು ಕ್ಷೇತ್ರದ ಚಾರಿತ್ರಿಕ ಹತ್ತು ಚೋದ್ಯಗಳು ಮತ್ತು ಪೊಳಲಿ ಕ್ಷೇತ್ರ- ಭಾಗ 3

ಡಾ.ಮ.ಸು.ಅಚ್ಚುತ ಶರ್ಮಾ

# ಕ್ರಿ.ಶ.೧೮೩೮ರಲ್ಲಿ ‘ಕಲ್ಯಾಣಪ್ಪನ ಕಾಟುಕಾಯಿ’ ಎಂಬ ಬ್ರಿಟಿಷ ವಿರೋಧಿ ಸ್ವಾತಂತ್ರ ಚಳವಳದ ದಂಗೆಯಲ್ಲಿ ಜಿಲ್ಲೆಯ ಸ್ಥಾನಿಕ ದ್ರಾವಿಡ ಬ್ರಾಹ್ಮಣ ವರ್ಗಕ್ಕೆ ಸೇರಿದ ಆಗಿನ ಕೊಡಗಿನ ದಿವಾನ್ ಅಜ್ಜಾವರ ಲಕ್ಷ್ಮೀನಾರಾಯಣಯ್ಯ ಮತ್ತು ಅವರ ಪರಿವಾರದವರೂ ಅವರ ಮತಕ್ಕೆ ಸೇರಿದ ಶ್ಯಾನುಭಾಗರುಗಳೂ, ಅವರೊಂದಿಗೆ ಗೌಡರು ಬಿಲ್ಲವರು, ಜೈನ ಮತಸ್ಥರೂ ಇನ್ನಿತರರೂ ಸೇರಿ ನಡೆದ ದಂಗೆಯ ಪರಿಣಾಮವಾಗಿ ಈ ಮತದವರಲ್ಲಿ ಮುಖ್ಯವಾಗಿ ಈ ಬ್ರಾಹ್ಮಣ ವರ್ಗದವರು ಆಗಿನ ಸರಕಾರಕ್ಕೆ ವಿರೋಧಯಾಗಿ ವರ್ತಿಸಿದರೆಂಬ ಅಪಾದನೆಯಿಂದ ಅವರು ತಮಗೆ ಸಮ್ಮಂಧಪಟ್ಟ ಹೆಚ್ಚಿನ ದೇವಾಲಯಗಳ ಆಡಳಿತವನ್ನು ಈ ಮಾಧ್ವ ವೈಷ್ಣವರ ಪ್ರೇರಣೆಯಿಂದ ಕಳಕೊಂಡರೆಂದು ತಿಳಿದುಬರುತ್ತದೆ.

ಅಂದಿನಿಂದ ಇವರ ಕೈಯಲ್ಲಿದ್ದ ದೇವಳದ ಪೂಜೆಯೂ, ಆಡಳಿತವೂ ಹೆಚ್ಚಿನ ಕಡೆಗಳಲ್ಲಿ ಬಿಟ್ಟುಹೋಯಿತು. ಆದರೂ ಈಗಲೂ ಕೆಲವು ತಸದೀಕು ಇರುವ ಸುಬ್ರಹ್ಮಣ್ಯದ ಹತ್ತಿರ ಇರುವ ಪುರಾತನ ಬಳ್ಪ ರಾಜರಾಜೇಶ್ವರಿ ದೇವಸ್ಥಾನ, ಸುಳ್ಯದ ಹತ್ತಿರವಿರುವ ತುದಿಯಡ್ಕ ಸದಾಶಿವ ದೇವಸ್ಥಾನ, ಕಾರ್ಕಳ ತಾಲೂಕಿನಲ್ಲಿರುವ ಕೊಕ್ಕರಾಡಿ ಸುಬ್ರಹ್ಮಣ್ಯ ದೇವಸ್ಥಾನ, ಪುತ್ತೂರು ತಾಲೂಕಿನಲ್ಲಿರುವ ಬಟ್ರಪಾಡಿ ವಿಷ್ಣುಮೂರ್ತಿ ದೇವಸ್ಥಾನ, ನೆಟ್ಲ ಮಠ ಯಾನೆ ದೇವಸ್ಥಾನ, ಕಜೆಕಾರು ವಿನಾಯಕ ಮತ್ತು ಶಣ್ಮುಖ ದೇವಸ್ಥಾನ, ಬಂಗಾಡಿ ಕೂಡಿಬೆಟ್ಟು ಪಂಚಲಿಂಗ ದೇವಸ್ಥಾನ ಇತ್ಯಾದಿ ದೇವಾಲಯಗಳು ಇವರ ಆಡಳಿತೆಯಲ್ಲಿ ಮತ್ತು ಪೂಜೆಯಲ್ಲಿವೆ ಎಂದು ತಿಳಿದುಬರುತ್ತವೆ.

ಶ್ರೀ ಕುಕ್ಕೆ ಸುಬ್ರಹ್ಮಣ್ಯದ ಆಡಳಿತೆಯು ಕ್ರಿ. ಶ. 1845ರ ನಂತರವೇ ಅಲ್ಲಿಯ ಸ್ಥಾನಿಕ ಹೆಬ್ಬಾರರ ಕೈಯಿಂದ ಅಲ್ಲಿಯ ಮಾಧ್ವ ಮಠದ ಸ್ವಾಮಿಗಳಿಗೆ ಆಗಿನ ಕಲೆಕ್ಟರ್ ಬ್ಲಾಯರ್ ರವರ ಸನದಿನಿಂದ ಸಿಕ್ಕಿದ್ದೆಂದು ತಿಳಿದುಬರುತ್ತದೆ.

ಪರಮಾತಮನು ಅವಿಕಾರಿಯೂ, ಅವಿನಾಶಿಯೂ ಆಗಿರುವುದರಿಂದ  ರೂಪನಾಮಗಳು ಅವನಿಗೆ ಕಲ್ಪಿತವಾಗಿವೆ. ಆದರೂ ನಾವು ಪ್ರಾಪಂಚಿಕ ಸತ್ತೆಯಲ್ಲಿರುವಾಗ ಆಯಾಯ ಅಭಿಮಾನಿ ದೇವತೆಗಳನ್ನು ಆಯಾಯ ಆಗಮೋಕ್ತ ಪ್ರಕಾರ ಆಯಾಯ ಅಭಿಮಾನಿಗಳು ಅರ್ಚಿಸುವುದು ಧರ್ಮಸಮ್ಮತ. ಸರಕರವು ಒಂದೇ ಆಗಿದ್ದರೂ ನ್ಯಾಯಾಂಗದವರು ಆಡಳಿತೆ ವರ್ಗದಲ್ಲೂ ಆಡಳಿತೆ ವರ್ಗವು ನ್ಯಾಯಾಂಗದಲ್ಲೂ ಕೆಲ್ಸ ಮಾಡಿದರೆ ಸರಿಯಾದೀತೇ ? ಸರ್ವ ವ್ಯಾಪಕನಾದ ಪರಮಾತ್ಮನು ಒಬ್ಬನೇ ಆದರೂ ಅವನ ಅಂಶವಾದ ಶಿವ, ವಿಷ್ಣು, ದುರ್ಗಾ ಇತ್ಯಾದಿ ದೇವತೆಗಳಿಗೆ ಆಯಾಯ ಆಗಮೋಕ್ತ ಪ್ರಕಾರ ಸಮಯವರಿತು ಅರ್ಚನೆ ಸಲ್ಲಿಸಿದರೇನೆ ಅಲ್ಲಿಯ ಮಹಿಮೆಯು ಹೆಚ್ಚುವುದಲ್ಲದೆ, ಹಣದ ಆಶೆಗಾಗಿ ತಮಗೆ ಸಂಮಂಧಪಡದ ದೇವಳಗಳಲ್ಲಿ ಅರಿವಿಲ್ಲದೆ ಜನರಿಗೆ ತಾವು ಅರ್ಚಕರೆಂದು ತೋರಿಸಿಕೊಂಡು ವಿಧಿ ತಪ್ಪಿ ಯದ್ವಾ ತದ್ವಾ ಮಾಡಿ ಜನರನ್ನು ನಂಬಿಸಿ ಕರ್ತವ್ಯ ಮಾಡುವುದು ದೇವಳದ ಪ್ರತಿಷ್ಠೆಗೆ ಕುಂದು ತಂದಂತ್ತಾಗುತ್ತದೆ.

ಆದುದರಿಂದ ಈ ವಿಷಯಗಳನ್ನೂ ಸರಕಾರದಿಂದ ನೇಮಿಸಲ್ಪಟ್ಟ ಧರ್ಮದರ್ಶಿಗಳು ಆಯಾಯ ದೇವಳಗಳ ಈ ರೀತಿಯ ಕುಂದು ಕೊರತೆಗಳನ್ನೂ ಸರಕಾರದ ಗಮನಕ್ಕೆ ತಂದು, ಆಯಾಯ ದೇವತೆಗಳಿಗೆ ಆಯಾಯ ಆಗಮೋಕ್ತ ಪ್ರಕಾರ ಅರ್ಚನೆಯನ್ನು ಮಾಡಿಸುವ ವ್ಯವಸ್ಥೆ ಮಾಡಿಸುವುದು ಅವಶ್ಯವಾಗಿದೆ. ಅಲ್ಲದೆ ಸರಕಾರದವರು ಧರ್ಮದರ್ಶಿಗಳನ್ನು ನೇಮಿಸುವಾಗ ಆಯಾಯ ದೇವತೆಗಳ ಹಿತಚಿಂತಕರಾದ ಅವುಗಳ ಭಜಕರನ್ನೇ ನೇಮಿಸುವಂತೆ ಮಾಡಬೇಕು.

ಮುಂದುವರಿಯುವುದು

Leave a Reply

Your email address will not be published. Required fields are marked *