Realtime blog statisticsweb statistics
udupibits.in
Breaking News
ಉಡುಪಿ: ಕನಿಷ್ಠ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ನಗರಸಭೆ, ಜಿಲ್ಲಾಡಳಿತ, ರಾಜ್ಯ-ಕೇಂದ್ರ ಸರಕಾರ ಸಂಪೂರ್ಣ ವಿಫಲ !

ಪುತ್ತೂರು ಕ್ಷೇತ್ರದ ಚಾರಿತ್ರಿಕ ಹತ್ತು ಚೋದ್ಯಗಳು ಮತ್ತು ಪೊಳಲಿ ಕ್ಷೇತ್ರ- ಭಾಗ 4

  • ಡಾ. ಮ.ಸು. ಅಚ್ಚುತ ಶರ್ಮಾ

# ಈ ನೆಟ್ಟೋಜಿ ಮನೆತನದವರು ಪಂಚ ದ್ರಾವಿಡರಲ್ಲಿ ಸೇರಿದ ಸ್ಮಾರ್ತರಾದ ಸ್ಥಾನಿಕ ತುಳು ಬ್ರಾಹ್ಮಣರು. ಇವರು ಶ್ರೀ ಶೃಂಗೇರಿ ಜಗದ್ಗುರುಗಳ ಶಿಷ್ಯ ವರ್ಗಕ್ಕೆ ಸೇರಿದವರು. ಈ ದೇವಳದ ಆಡಳಿತವು ಸಾಧಾರಣ 1916ರ ವರೇಗೆ ಈ ಮನೆತನದವರ ಮುಖ್ಯ ಆಡಳಿತೆಯಲ್ಲಿತ್ತು. ಈ ದೇವಳದಲ್ಲಿ ಅಷ್ಟರ ವರೇಗೆ ಸ್ಮಾರ್ತರಾದ ದ್ರಾವಿಡ ಬ್ರಾಹ್ಮಣರಿಗೆ ಮಾತ್ರ ಸಂತರ್ಪಣೆ ನಡೆಯುತ್ತಿತ್ತು. ಕಾರಣವೇನೆಂದರೆ ಈ ದೇವಸ್ಥಾನದ ಅಡಿಸ್ಥಳವಲ್ಲದೆ ಸುತ್ತು ಮುತ್ತಲಿನ ಹೆಚ್ಚಿನ ಸ್ಥಳಗಳು ನಟ್ಟೋಜಿ ಮನೆತನದ ಮೂಲವರ್ಗದ್ದಾಗಿಯೇ ಇತ್ತು.

ಇದರಲ್ಲಿ ಸ್ವಲ್ಪ ಅಂಶವು ಜೈನ ಮತಸ್ಥರಾದ ಬಲ್ಲಾಳರ ಪೈಕಿ ಬ್ರಹ್ಮಯ್ಯ ಶೆಟ್ಟರದು. ಇತ್ತೆಂದೂ ಹಳೇ ಚಿಟ್ಟೆಗಳನ್ನು ಪರಿಶೀಲಿಸಿದರೆ ತಿಳಿದುಬರುತ್ತವೆ. ಅಲ್ಲದೇ ಈಗಲೂ ಕೆಲವಂಶಗಳು ನಟ್ಟೋಜರ ಸ್ವಾಧೀನದಲ್ಲಿರುವುದನ್ನು ಕಾಣಬಹುದು. ಅದೂ ಅಲ್ಲದೆ ಈ ಸುತ್ತ ಮುತ್ತಲಿನ ಸ್ವಲ್ಪ ದೂರದ ಸ್ಥಳಗಳಾದ ಬಪ್ಪಳಿಗೆ, ಅರ್ಬೀ, ಬೊಳುವಾರು ಹೊಸಮನೆ, ಹಾರಾಡಿ, ತಾಳೆಪ್ಪಾಡಿ, ಕೊಂಬೆಟ್ಟು, ತೆಂಕಿಲ ಇತ್ಯಾದಿ ಅಲ್ಲದೆ ಇನ್ನೂ ಸ್ವಲ್ಪ ದೂರವಿರುವ ಕೊಡಿಪಾಡಿ, ಶ್ಯಾರ, ಕುಂಜಾರು, ಕುಂಟ್ಯಾನ, ಸಕಲೇಶ್ವರ, ಕೋಲ್ಪೆ, ಇತ್ಯಾದಿಗಳಲ್ಲೂ ಇವರ ಮತದವರೆ ಹೆಚ್ಚಿನವರು ಇದ್ದುದರಿಂದ ಈ ದೇವಸ್ಥಾನದಲ್ಲಿ ಇವರ ಮತದವರಿಗೆ ಸಂತರ್ಪಣೆಯು ನಡೆದು ಬಂದಿರಲು ಕಾರಣವಾಗಿದೆ ಎಂದು ಇಲ್ಲಿಯ ಸನ್ನಿವೇಶಗಳಿಂದ ತಿಳಿದುಬರುತ್ತದೆ.

ಕ್ರಿ. ಶ. 1916ರ ಸಮಯದಲ್ಲಿ ಪುತ್ತೂರಿನಲ್ಲಿ ಮ್ಯಾಜಿಸ್ಟ್ರೇಟರಾಗಿದ್ದವರು ಮಾಧ್ವ ಮತದವರಾದ ಎಕ್ಕಾರು ರಾಮಕೃಷ್ಣ ರಾಯರು. ಆಗ ನಟ್ಟೋಜಿ ಮನೆತನದ ಮುಖ್ಯಸ್ಥರಿಗೂ ಅವರಿಗೂ ಆಂತರಿಕ ಕಲಹ ಉಂಟಾದುದರ ಪರಿಣಾಮವಾಗಿ ಆಗ ಪುತ್ತೂರು ದೇವಸ್ಥಾನದ ವಿಚಾರದಲ್ಲಿ ನಡೆದ ಆಡಳಿತೆ ಸಮ್ಮಂಧದ ವ್ಯಾಜ್ಯಗಳಲ್ಲಿ ನಟ್ಟೋಜರಿಗೆ ಸೋಲು ಬಂದು ದೇವಳದ ಆಡಳಿತೆಯನ್ನು ಅವರು ಬಿಡಬೇಕಾಯಿತು.

ಮುಂದುವರಿಯುವುದು

Leave a Reply

Your email address will not be published. Required fields are marked *