Realtime blog statisticsweb statistics
udupibits.in
Breaking News
ಉಡುಪಿ: ಜಿಲ್ಲೆಯ 25 ಮಂದಿ ಪೊಲೀಸ್ ವಾಹನ ಚಾಲಕ ಸಿಬ್ಬಂದಿಗಳ ಪರಸ್ಪರ ವರ್ಗಾವಣೆ.

ಉಡುಪಿ ಕುಟುಂಬ ಕಲ್ಯಾಣಾಧಿಕಾರಿ ಡಾ// ರೋಹಿಣಿ ಸಹಿತ 32 ಮಂದಿಯ ವರ್ಗಾವಣೆ

ಉಡುಪಿ: ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ// ರೋಹಿಣಿ ಅವರನ್ನು ಉಡುಪಿಯಿಂದ ವರ್ಗಾಯಿಸಲಾಗಿದೆ.

ಕಳೆದ ಕೆಲವು ವರ್ಷಗಳಿಂದ ಉಡುಪಿಯಲ್ಲಿ ಕುಟುಂಬ ಕಲ್ಯಾಣಾಧಿಕಾರಿಯಾಗಿದ್ದ ರೋಹಿಣಿ ಅವರನ್ನು ಇದೀಗ ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿರುವ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ತರಬೇತಿ ಕೇಂದ್ರದ ಪ್ರಾಂಶುಪಾಲರನ್ನಾಗಿ ನಿಯುಕ್ತಿಗೊಳಿಸಿ ವರ್ಗಾಯಿಸಲಾಗಿದೆ.

ಮಂಗನ ಕಾಯಿಲೆಗೆ ಸಂಬಂಧಿಸಿದಂತೆ ಆರೋಗ್ಯ ಸಚಿವರ ಸೂಚನೆಯನ್ನು ಪಾಲಿಸಲು ಹಿಂದೇಟು ಹಾಕಿರುವುದಕ್ಕೆ ಡಾ.ರೋಹಿಣಿಯವರನ್ನು ಉಡುಪಿಯಿಂದ ಮೊದಲು ಬಳ್ಳಾರಿಗೆ ವರ್ಗಾಯಿಸಲಾಗಿತ್ತು, ಬಳಿಕ ಬಳ್ಳಾರಿಯ ಬದಲು ಕಾರವಾರಕ್ಕೆ ನಿಯುಕ್ತಿಗೊಳಿಸಲಾಯಿತು ಎಂದು ತಿಳಿದುಬಂದಿದೆ.

ಡಾ. ರೋಹಿಣಿ ಜೊತೆಗೆ ರಾಜ್ಯದ 32 ಮಂದಿ ಇಲಾಖಾ ಅಧಿಕಾರಿಗಳನ್ನೂ ವರ್ಗಾಯಿಸಲಾಗಿದೆ. ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕು ಮಲ್ಲಾಡಿಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ//ಕೆ.ಪಿ.ಜಗದೀಶ್ ಅವರನ್ನು ತಾಳಿಕಟ್ಟೆ ಕೇಂದ್ರಕ್ಕೆ, ಹೊಳಲ್ಕೆರೆಯ ಚರ್ಮರೋಗ ತಜ್ಞರಾದ ಡಾ// ಎಚ್.ಮಂಜುನಾಥ್ವ ಅವರನ್ನು ಶಿವಮೊಗ್ಗದ ಮೆಗ್ಗಾನ್ ಭೋದನಾ ಜಿಲ್ಲಾ ಆಸ್ಪತ್ರೆಯ ಖಾಲಿ ಹುದ್ದೆಗೆ, ಚಾಮರಾಜನಗರ ಜಿಲ್ಲೆ ಬೇಗೂರು ಸಮುದಾಯ ಆರೋಗ್ಯ ಕೇಂದ್ರದ ಹಿರಿಯ ದಂತ ಆರೋಗ್ಯಾಧಿಕಾರಿ ಡಾ//ಎಸ್.ಡಿ. ವೀಣಾಕುಮಾರಿ ಅವರನ್ನು ಮೈಸೂರು ಜಿಲ್ಲಾ ಆಸ್ಪತ್ರೆಯ ಖಾಲಿ ಹುದ್ದೆಗೆ, ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕು ಕಾರಟಗಿ ಸಮುದಾಯ ಆರೋಗ್ಯ ಕೇಂದ್ರದ ದಂತ ಆರೋಗ್ಯಾಧಿಕಾರಿ ಡಾ// ಶೃತಿ ಎಸ್. ಲಕ್ಕುಂಡಿ ಅವರನ್ನು ಬೆಂಗಳೂರು ಬಿಡದಿ ಸಮುದಾಯ ಆರೋಗ್ಯ ಕೇಂದ್ರದ ದಂತ ಆರೋಗ್ಯಾಧಿಕಾರಿಯನ್ನಾಗಿಯೂ, ಇಲ್ಲಿನ ದಂತ ಆರೋಗ್ಯಾಧಿಕಾರಿ ಡಾ// ಸಾವಿತ್ರಿ ಕುಂಟಿ ಇವರನ್ನು ಕಾರಟಗಿ ಸಮುದಾಯ ಆರೋಗ್ಯ ಕೇಂದ್ರದ ದಂತ ಆರೋಗ್ಯಾಧಿಕಾರಿಯನ್ನಾಗಿಯೂ ವರ್ಗಾಯಿಸಲಾಗಿದೆ.

Leave a Reply

Your email address will not be published. Required fields are marked *