Realtime blog statisticsweb statistics
udupibits.in
Breaking News
ಮಂಗಳೂರು: ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣರಿಂದ ಹೇಳಿಕೆ- ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆರೋಪ

ಕುಕ್ಕೆ ಕ್ಷೇತ್ರದ ಚಾರಿತ್ರಿಕ ಹಿನ್ನೆಲೆ- ಭಾಗ 6

* ಡಾ.ಮ.ಸು. ಅಚ್ಚುತ ಶರ್ಮಾ

# ಕುಷ್ಟ ರೋಗಿಗಳು ಕುಮಾರಧಾರ ನದಿಯಲ್ಲಿ ಸ್ನಾನ ಮಾಡಿ ಅದರ ಮೃತ್ತಿಕೆಯಿಂದಲೇ ಮೈತೊಳೆದು ದೇವರ ಮೂಲ ಮೃತ್ತಿಕಾ ಪ್ರಸಾದವನ್ನು ಬಿಡದೆ ಮೂರು ವರ್ಷ ಸೇವಿಸುತ್ತಾ ಬೀದಿ ಮಡೆಸ್ನಾನ ಮಡೇ ಮಡೆ ಸ್ನಾನ (ಎಂಜಲಿನಲ್ಲಿ ಹೊರಳಾಡುವುದು)ವನ್ನು ಮಾಡಿದರೆ ರೋಗವು ನಿವೃತ್ತಿಯಾಗುತ್ತದೆ ಎಂದು ಇಲ್ಲಿಯ ಐತಿಹ್ಯ. ಆ ಪ್ರಕಾರ ಅನೇಕರು ಹರಿಕೆ ಹೊತ್ತು ಮೇಲೆ ಹೇಳಿದಂತೆ ಹರಿಕೆಯನ್ನು ನಡೆಸಿದ್ದರಿಂದ ಮೇಲೆ ಹೇಳಿದ ರೋಗದಿಂದ ಗುಣಮುಖ ಹೊಂದುತ್ತಾರೆಂದು ತಿಳಿದುಬಂದಿದೆ. ಅಲ್ಲದೇ ಈಗಲೂ ಅನೇಕ ಭಕ್ತರು ಇಲ್ಲಿ ಮಡೆ ಮಡೆಸ್ನಾನ, ಬೀದಿ ಮಡೆಸ್ನಾನ ಅಂಗ ಪ್ರದಕ್ಷಿಣೆ ಇತ್ಯಾದಿಗಳನ್ನು ಪ್ರತಿ ವರ್ಷ ಮಾಡುವುದನ್ನು ಇಲ್ಲಿಯ ಚಂಪಾ ಷಷ್ಠಿ ಮಹೋತ್ಸವ ಸಮಯ ನೋಡಬಹುದು. ಈಗ ಕೆಲವು ವರ್ಷಗಳಿಂದ ಈ ರೀತಿಯ ಹರಕೆ ಹೊತ್ತು ಬೀದಿ ಮಡೆಸ್ನಾನ ಮಾಡುವುದು ತೀರಾ ವಿರಳವಾಗಿದೆ.

ಭೀಮನು ತನ್ನ ಅಣ್ಣನಾದ ಧರ್ಮರಾಜನು ನಡೆಸಿದ ರಾಜಸೂಯ ಯಾಗದ ಶುದ್ಧಿಗೋಸ್ಕರ ಹಿಮಾಲಯದಿಂದ ಕರೆದುಕೊಂಡು ಬಂದ ಪುರುಷಾ ಮೃಗವು ಇಲ್ಲಿಗೆ ಬಂದಿರುವುದೆಂಬ ಐತಿಹ್ಯದಿಂದ ಇಲ್ಲಿ ಬಂದ ಭಕ್ತಾದಿಗಳು ಜಾತಿ ಭೇದವನ್ನು, ಮೈಡಿ ಮೈಲಿಗೆಗಳನ್ನು ಎಂಜಲು ಎಂಬ ಭಾವನೆಯನ್ನೂ ಬಿಡಬೇಕೆಂಬುದನ್ನು ತೋರಿಸುವುದಕ್ಕೆಯೇ ಇಲ್ಲಿಯ ದೊಡ್ಡ ಹರಕೆ ಎಂದರೆ ಮೇಲೆ ಹೇಳಿದ ಮಡೆ ಮಡೆಸ್ನಾನ ಮತ್ತು ಬೀದಿ ಮಡೆಸ್ನಾನ- ಬೀದಿ ಮಡೆಸ್ನಾನವೆಂದರೆ ದೇವರಲ್ಲಿ ಪ್ರಾರ್ಥನೆ ಮಾಡಿ ಕುಮಾರಾಧಾರಾ ನದಿಯ ಮತ್ಸ್ಯತೀರ್ಥದಲ್ಲಿ ಸ್ನಾನಮಡಿ ಅಲ್ಲಿಂದ ಹೊರಳಡಲು ಆರಂಭಿಸಿದರೆ ಎಲ್ಲಿಯೂ ಏಳದೆ ಸಾಧಾರಣ ಒಂದೂವರೆ ಯಾ ಎರಡು ಮೈಲು ದೂರ ಬೀದಿಯಲ್ಲಿಯೇ ಹೊರಳಾಡಿಕೊಂಡು ದೇವಳದ ಹೊರ ಅಂಗಣಕ್ಕೆ ಬಿದ್ದು ಅಲ್ಲಿ ಒಂದು ಪ್ರದಕ್ಷಿಣೆ ಮಾಡಿ ಹಾಗೆಯೇ ಹೊರಳಾಡಿಕೊಂಡು ದೇವರ ಎದುರಲ್ಲಿ ಹರಿಯುವ ದರ್ಪಣ ತೀರ್ಥದಲ್ಲಿ ಬಿದ್ದು ಸನಾನ ಮಾಡಿ ಎದ್ದು ಬಂದು ದೇವರ ಸೇವೆಯನ್ನು ಕೈಕೊಳ್ಳುವುದಾಗಿದೆ.

ಮಡೆ ಮಡೆಸ್ನಾನವೆಂದರೆ ಮಹೋತ್ಸವದ ಸಮಯ ಚೌತಿ ಪಂಚಮಿ ಷಷ್ಟಿ ದಿವಸ ಬ್ರಾಹ್ಮಣ ಸಂತರ್ಪಣೆ ಆದೊಡನೆ ಹರಿಕೆ ಹೊತ್ತವರು ಸಂತರ್ಪಣೆ ನಡೆದ ಎಂಜಲಲ್ಲಿ ಹೊರಳಡಿ ಒಂದು ಸುತ್ತು ಬಂದು ಕನ್ನಡಿ ಹೊಳೆ ವರೇಗೆ ಹೋಗಿ ಅಲ್ಲಿ ಸ್ನಾನ ಮಾಡಿ ಬರುವುದು. ಅಂಗ ಪ್ರದಕ್ಷಿಣೆ ಅಂದರೆ ದೇವಳದ ಒಳ ಮತ್ತು ಹೊರ ಅಂಗಣದ ೮ ಮೂಲೆಗಳಲ್ಲಿ ಸ್ವಲ್ಪ ಸ್ವಲ್ಪ ಹೊರಳಡಿ ಕನ್ನಡಿ ಹೊಳೆಯಲ್ಲಿ ಸ್ನಾನ ಮಾಡಿ ದೇವರ ಸೇವೆ ಮಾಡುವುದು.

ಮುಂದುವರಿಯುವುದು

Leave a Reply

Your email address will not be published. Required fields are marked *