Realtime blog statisticsweb statistics
udupibits.in
Breaking News
ಉಡುಪಿ: ಜಿಲ್ಲೆಯ 25 ಮಂದಿ ಪೊಲೀಸ್ ವಾಹನ ಚಾಲಕ ಸಿಬ್ಬಂದಿಗಳ ಪರಸ್ಪರ ವರ್ಗಾವಣೆ.

ಕುಕ್ಕೆ ಕ್ಷೇತ್ರದ ಚಾರಿತ್ರಿಕ ಹಿನ್ನೆಲೆ ಮತ್ತು ಸ್ಥಾನಚ್ಯುತಿಹೊಂದಿ ಗುಪ್ತವಾಗಿರಿಸಿದ ಸಿದ್ಧಿವಿನಾಯಕ ದೇವರು- ಭಾಗ 7

* ಡಾ/ಮ.ಸು.ಅಚ್ಚುತ ಶರ್ಮಾ

# ಅನೇಕರು ಮಕ್ಕಳಾಗದೆ ಇದ್ದವರು ಇಲ್ಲಿ ನಾಗ ಪ್ರತಿಷ್ಟೆಯನ್ನು ಮಾಡಿಸಿ ಭಜನೆಗೆ ಕುಳಿತುಕೊಳ್ಳುವುದರಿಂದ ಸುಪುತ್ರರನ್ನು ಪಡೆದಿದದ್ದಾರೆ. ಮೈಸೂರು ಮಹಾರಾಜರೇ ತನಗೆ ಪುತ್ರೋತ್ಸವವಾದುದಕ್ಕೆ ದೇವರಿಗೆ ಹಾಲು ನೈವೇದ್ಯಕ್ಕೆ ಚಿನ್ನದ ದೊಡ್ಡ ಬಟ್ಟಲೊಂದನ್ನು ಸೇವೆ ಸಲ್ಲಿಸಿರುವುದನ್ನು ದೇವಳದಲ್ಲಿ ಈಗಲೂ ನೋಡಬಹುದು. ಹುಟ್ಟಿದ ಮಕ್ಕಳು ಸಾಯುವುದನ್ನು ತಡೆಯಲು ಚಿನ್ನದ, ವ ಬೆಳ್ಳಿಯ ತೊಟ್ಟಿಲ ಮಗು ಮಾಡಿ ಸಏವೆ ಸಲ್ಲಿಸುತ್ತಾರೆ. ಈ ರೀತಿ ಅನೇಕ ತರದ ಬೆಳ್ಳಿಯ, ಚಿನ್ನದ ಹರಿಕೆಗಳು ಹರಿಕೆಗಳು ತುಂಬಾ ಇಲ್ಲಿ ಬಂದು ಬೀಳುವುದು ಇಲ್ಲಿಯ ಮಹಿಮೆಯ ದ್ಯೋತಕವಾಗಿದೆ. ಇಷ್ಟು ಸುಪ್ರಸಿದ್ಧ ಮಹಿಮೆಯುಳ್ಳ ಕ್ಷೇತ್ರವು ನಮ್ಮ ಜಿಲ್ಲೆಯಲ್ಲಿ, ವ ನಮ್ಮ ದಕ್ಷಿಣ ಭಾರತದಲ್ಲೇ ಇದು ಒಂದು ಅಲ್ಲದೆ ಬೇರೆ ಇಲ್ಲ ಎಂದು ಹೇಳಿದರೂ ಅತಿಶಯೋಕ್ತಿಯಾಗಲಾರದು.

ಒಂದು ಕ್ಷೇತ್ರದ ಮಹಿಮೆಯು ಅಲ್ಲಿಯ ಸದಾಚಾರ ಮತ್ತು ಆಯಾಯ ದೇವತೆಗಳಿಗೆಆಯಾಯ ಆಗಮೋಕ್ತ ಪ್ರಕಾರ ಸಕಾಲದಲ್ಲಿ ನಡೆಯುತ್ತಿರುವ ನಿತ್ಯ ನೈಮಿತ್ತಿಕ ಪೂಜಾ ವಿನಿಯೋಗಾದಿಗಳನ್ನು ಹೊಂದಿಕೊಂಡಿದೆ ಎಂದು ತಿಳಿಯಬೇಕು. ಇದು ಸರಿಯಾಗಿ ಇಲ್ಲದಿದ್ದರೆ ಆ ದೇವಳಕ್ಕೆ ಮೌಢ್ಯ ಬಂದಂತೆ ಸರಿ.

ಈ ದೇವಳದ ಆಡಳಿತೆಯು 1845ನೇ ಇಸವಿಯಲ್ಲಿ ಅಲ್ಲಿಯ ಸ್ಮಾರ್ತ ಬ್ರಾಹ್ಮಣ ಹೆಬ್ಬಾರರ ಆಡಳಿತೆಯಿಂದ ತಪ್ಪಿ ಅಲ್ಲಿಯ ಮಾಧ್ವ ವೈಷ್ಣವ ಸ್ವಾಮಿಗಳ ಆಡಳಿತೆಗೆ ಆ ಕಾಲದ ಜಿಲ್ಲೆಯ ಕಲೆಕ್ಟರ್ ಬ್ಲಾಯರ್ ರವರ ಸನದಿನಿಂದ ಬಂತು. ಮಾಧ್ವ ಸ್ವಾಮಿಗಳು ಶೈವ ಮತ್ತು ಸ್ಮಾರ್ತ ತತ್ವಕ್ಕೆ ವಿರೋಧಿಗಳಾಗಿದ್ದು ದೇವಳದಲ್ಲಿ ಶೈವಾಗಮ ಪ್ರಕಾರ ನಡೆಯುತ್ತಿದ್ದ ಪೂಜಾ ಕ್ರಮಗಳನ್ನು ನಿಲ್ಲಿಸಿ ವೈಷ್ಣವ (ವೈಖಾನಸ) ಆಗಮಕ್ಕೆ ಪರಿವರ್ತಿಸಿ ಸುಬ್ರಹ್ಮಣ್ಯನ ಹತ್ತಿರ ಸಾಲಿಗ್ರಾಮಗಳನ್ನು ಇಟ್ಟು ಪೂಜಿಸುವಂತೆ ಮಾಡಿ ದೇವಳದ ಮಹಿಮೆಗೆ ಮೌಢ್ಯವನ್ನು ತಂದಿರಿಸಿದರು. ಇವರ ಕಾಲದಲ್ಲಿ ದೇವಳದಲ್ಲಿ ವಂಚನೆ, ಕಳವು, ಸುಲಿಗೆ ಇತ್ಯಾದಿಗಳು ಆರಂಭವಾಗಿ ಅನಾಚಾರವು ಹೆಚ್ಚಾಯಿತು.

ಈ ಮಾಧ್ವ ಸವಾಮಿಗಳು ಈ ದೇವಳಕ್ಕೆ ವರ್ಷಂಪ್ರತಿ ಸರಕಾರದಿಂದ ಸಿಕ್ಕುತ್ತಿದ್ದ ರೂಪಾಯಿ 4,400 ತಸದೀಕು ಮತ್ತು ಇತರ ಉತ್ಪತ್ತಿಗೆ ಮರುಳಾಗಿ ದೇವಳದ ಆಡಳಿತೆಯನ್ನು ವಹಿಸಿಕೊಂಡು ದೇವಳದ ಸೊತ್ತನ್ನು ದುರುಪಯೋಗಪಡಿಸುತ್ತಿದ್ದುದು ಮಾತ್ರವಲ್ಲದೆ ಶ್ರೀ ಸುಬ್ರಹ್ಮಣ್ಯ ದೇವರ ಗುಡಿಯನ್ನೇ ತಮ್ಮ ಮಠದ ನರಸಿಂಹ ದೇವರ ಗುಡಿಯನ್ನಾಗಿ ಪರಿವರ್ತಿಸಲು ಪ್ರಯತ್ನಿಸಿದ್ದು ಅಲ್ಲಿಯ ಸನ್ನಿವೇಶ ಮತ್ತು ರಿಕಾರ್ಡುಗಳಿಂದ ಗೊತ್ತಾಗುತ್ತದೆ. ಆದರೆ ಅವರಿಗೆ ಅದು ಸಾಧ್ಯವಾಗದೇ ಹೋದುದರಿಂದ ಅದರ ಬದಲಿಗೆ ದೇವಳದ ಒಳ ಅಂಗಣದ ಅಗ್ನೇಯ ಮೂಲೆಯಲ್ಲಿದ್ದ ಗುಡಿಯಿಂದ ಶ್ರೀ ಸುಬ್ರಹ್ಮಣ್ಯ ದೇವರ ಪರಿವಾರ ದೇವರಾದ ಶ್ರೀ ಸಿದ್ಧಿವಿನಾಯಕ ವಿಗ್ರಹವನ್ನು ಪದಚ್ಯುತಿಗೊಳಿಸಿ ತಮ್ಮ ಸ್ವಂತ ಮಠದ ನರಸಿಂಹ ದೇವರನ್ನು ಆ ಗುಡಿಯಲ್ಲಿ ಇರಿಸಿ ಆ ಗುಡಿಯನ್ನು ತಮ್ಮದನ್ನಾಗಿ ಮಾಡಿಕೊಂಡರೆಂದು ತಿಳಿದುಬರುತ್ತದೆ.

ಮುಂದುವರಿಯುವುದು

Leave a Reply

Your email address will not be published. Required fields are marked *