Realtime blog statisticsweb statistics
udupibits.in
Breaking News
ಉಡುಪಿ: ಜಿಲ್ಲೆಯ 25 ಮಂದಿ ಪೊಲೀಸ್ ವಾಹನ ಚಾಲಕ ಸಿಬ್ಬಂದಿಗಳ ಪರಸ್ಪರ ವರ್ಗಾವಣೆ.

ಕುಕ್ಕೆ ಕ್ಷೇತ್ರದ ಚಾರಿತ್ರಿ ಹಿನ್ನೆಲೆ- ಭಾಗ 8

* ಡಾ.ಮ.ಸು.ಅಚ್ಚುತ ಶರ್ಮಾ

# ಆದರೆ ಕ್ಷೇತ್ರದ ಮಹಿಮೆಯಿಂದ ಅನ್ಯಾಯವೆಸಗಿದ ಅವರಿಗೆ ಆಗಿಂದಾಗಲೇ ತಕ್ಕಮ ಪ್ರತಿಫಲವು ಸಿಕ್ಕಿ ಅವರು ದೇವಳದ ಆಡಳಿತೆಯಿಂದ ವಿರಹಿತ ಮಾಡಲ್ಪಟ್ಟರು. ಇದರ ವಿವರವನ್ನು ”ಶ್ರೀ ಸುಬ್ರಹ್ಮಣ್ಯ ಮಠ, ಅದರ ಮಾಧ್ವ ಸ್ವಾಮಿಗಳು ಮತ್ತು ಇದರಿಂದಾಗಿ ದೇವಳಕ್ಕೆ ಒದಗಿದ ಸಂಕಷ್ಟಗಳು” ಎಂಬ ಶಿರ್ಷಿಕೆಯ ವಿವರಣೆಯಲ್ಲಿ ಓದಬಹುದು.

ದೇವಳದ ಆಡಳಿತೆಯು ಮಾಧ್ವ ಸ್ವಾಮಿಗಳಿಂದ ತಪ್ಪಿದರೂ ಅವರ ಕಾಲದಲ್ಲಿ ಸುಬ್ರಹ್ಮಣ್ಯನ ಅರ್ಚಕರಾಗಿ ನೇಮಕಗೊಂಡ ಅವರ ಮಾಧ್ವ ಮತಸ್ಥರೇ ಆದ ಆಸ್ರಣ್ಣರು ಇಂದಿನ ವರೇಗೂ ಅರ್ಚಕರಾಗಿ ಇರುವುದರಿಂದ ದೇವಳದಲ್ಲಿ ಶೈವಾಗಮೋಕ್ತ ಪೂಜಾ ಕ್ರಮಗಳು ಇನ್ನೂ ಏರ್ಪಟ್ಟಿಲ್ಲ. ಇದು ಸರಿಯಾಗಬೇಕಾದರೆ ರಾಜಾಶ್ರಯವು ಬೇಕು. ನಮ್ಮ ದೇಶದಲ್ಲಿ ಹಿಂದೂ ಧರ್ಮದ ತತ್ವಗಳಿಗೆ ಸರಕಾರದ ಬೆಂಬಲವಿಲ್ಲದ್ದರಿಂದ ಧರ್ಮ ಸಮ್ಮತವಾದ ಪೂಜಾ ಕ್ರಮಗಳು ದೇವಳದಲ್ಲಿ ಬರುವುದು ಕಷ್ಟಸಾಧ್ಯವಾಗಿದೆ.

ಆದರೂ ಕಾಲಕ್ರಮೇಣ ದೇವಳದಲ್ಲಿ ಆ ಸ್ಥಳದ ಮಹಿಮೆಯಿಂದ ಪೂಜಾ ಕ್ರಮಗಳು ಪುನರ್ವ್ಯವಸ್ಥೆಗೊಳಿಸಲ್ಪಟ್ಟು ಸರಿಯಾಗಬಹುದೆಂದು ಈಗಿನ ಸನ್ನಿವೇಶಗಳಿಂದ ತೋರಿಬರುತ್ತದೆ. ಇದಕ್ಕೆ ಉದಾಹರಣೆಯಾಗಿ ಪದಚ್ಯುತಿಗೊಳಿಸಲ್ಪಟ್ಟ ವಿನಾಯಕ ದೇವರ ಗುಡಿ ವಿಚಾರದಲ್ಲಿ 1958ರಲ್ಲಿ ಆರಂಭವಾದ ವ್ಯಾಜ್ಯಗಳು ಅಪೀಲ್ ನಲ್ಲಿ ಈಗ ನಮ್ಮ ಜಿಲ್ಲೆಯ ನ್ಯಾಯಾಧೀಶರಲ್ಲಿ ಇರುವುದು ನಿದರ್ಶನವಾಗಿದೆ.

ಮುಂದುವರಿಯುವುದು

Leave a Reply

Your email address will not be published. Required fields are marked *