Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಪುತ್ತೂರು ಕ್ಷೇತ್ರದ ಚಾರಿತ್ರಿಕ ಹತ್ತು ಚೋದ್ಯಗಳು ಮತ್ತು ಪೊಳಲಿ ಕ್ಷೇತ್ರ- ಭಾಗ 9

* ಡಾ.ಮ.ಸು.ಅಚ್ಚುತ ಶರ್ಮಾ

# ಇಲ್ಲಿಯ ಈ ಲಿಂಗರೂಪಿ ಶ್ರೀ ಮಹಾಲಿಂಗೇಶ್ವರ ದೇವರ ಲಿಂಗ ಪ್ರತಿಷ್ಠೆಯು ಯಾವಾಗ ಯಾರಿಂದ ಹೇಗೆ ಎಂಬ ಸಂಕ್ಷಿಪ್ತ ಚರಿತ್ರೆಯು ಇದರೊಂದಿಗೆ ಪ್ರಕಟಿಸಲ್ಪಟ್ಟ 61 ಸಾಂಗತ್ಯ ರೂಪದ ಪದ್ಯಗಳಿಂದ ವ್ಯಕ್ತವಾಗುತ್ತದೆ. ಈ ಮಹಾಲಿಂಗೇಶ್ವರನ ಪ್ರಿಷ್ಠಾಪಕರು ನಟ್ಟೋಜಿ ಮನೆತನದ ಮೂಲ ಪುರುಷರು. ಆದಿಯಲ್ಲಿ ಅವರು ಪೊಳಲಿ ಮತ್ತು ಹತ್ತಿರವಿರುವ ಚೇರ ಎಂಬಲ್ಲಿ ಇದ್ದವರೆಂದು ತಿಳಿದುಬರುತ್ತದೆ.

ನಟ್ಟೋಜಿ ಅಂದರೆ ನಟ್ಟವನು-ಪ್ರತಿಷ್ಠಿಸಿದವನು ಅಥವಾ ಸ್ಥಾನವನ್ನು ಕೊಟ್ಟವನು; ಮೂಲ ಪುರುಷನು ಎಂದು ಅರ್ಥವಾಗುತ್ತದೆ. ಇದೇ ರೀತಿ ಬಳ್ಪ ಗ್ರಾಮದಲ್ಲಿರುವ ರಾಜರಾಜೇಶ್ವರಿ ದೇವಳದ ಅರ್ಚಕ ಮತ್ತು ಅಧಿಕಾರಿಗೆ ಮೊರೋಜ ಎಂಬ ಹೆಸರಿದೆ. ಅಲ್ಲಿ ಮೋರ ಅಂದರೆ ಮೈಯೂರ (ನವಿಲು) ವಾಹನನ ಅಂದರೆ ಶ್ರೀ ಸುಬ್ರಹ್ಮಣ್ಯ ದೇವರ ಸ್ಥಾಪಕನು, ಓಜ ಅಂದರೆ ಆಚಾರ್ಯ ವ ಅರ್ಚಕನೆಂದು ಅರ್ಥ ಬರುತ್ತದೆ. ಇದೇ ಬಳ್ಪದ ಮೊರೋಜ ಸಾಧಾರಣ 1834ರ ವರೇಗೆ ಬಳ್ಪದಿಂದ ಸಾಧಾರಣ 9-10 ಮೈಲು ದೂರವಿರುವ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಅರ್ಚಕರಾಗಿದ್ದರು ಎಂದು ತಿಳಿದುಬರುತ್ತದೆ.

ಇದೇ ಮೊರೋಜ ಮತಸ್ಥರಾದ ಸ್ಮಾರ್ತ ಬ್ರಾಹ್ಮಣರು ಈಗಲೂ ಶ್ರೀ ಸುಬ್ರಹ್ಮಣ್ಯ ದೇವರ ಒಳ ದೇವಕಾರ್ಯವನ್ನು ಮಾಡುತ್ತಿದ್ದಾರೆ. ಮೊರಜಹಿತ್ತಿಲು ಎಂಬ ಹೆಸರುಳ್ಳ ಸ್ಥಳದಲ್ಲೇ ವಾಸ ಮಾಡುತ್ತಿರುವರು. ಮೊರೋಜಹಿತ್ಲು ಎಂದು ಹೆಸರು ಇರುವುದರಿಂದ ಶ್ರೀ ಸುಬ್ರಹ್ಮಣ್ಯದ ಅರ್ಚಕರು ಆ ಸ್ಥಳದಲ್ಲೇ ಇದ್ದರೆಂದು ತಿಳಿಯಬಹುದಾಗಿದೆ.ಶ್ರೀ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಇರುವ ಮಾಧ್ವರ ಮಠದ ಅಡಿ ಸ್ಥಳವು ಮುಂಚೆ ಪುತ್ತೂರು ನಟ್ಟೋಜಿ ಮನೆತನಕ್ಕೆ ಇತ್ತು ಎಂದು ತಿಳಿದುಬರುತ್ತದೆ.

ಅನಾದಿಯಲ್ಲಿ ಈ ನಟ್ಟೋಜಿ ಮನೆತನವು ಪೊಳಲಿ ಮತ್ತು ಪೊಳಲಿ ಹತ್ತಿರ ಇರುವ ಚೇರ ಎಂಬಲ್ಲಿತ್ತು. ಈ ನಟ್ಟೋಜಿ ಮನೆತನದ ಮೂಲ ದೇವರು ರಾಜರಾಜೇಶ್ವರಿ ಅಮ್ಮನವರು. ಅವರ ಕುಟುಂಬದವರೇ ಪೊಳಲಿ ದೇವಾಲಯದಲ್ಲಿ ದೇವಿಯನ್ನು ಪೂಜಿಸಲು ಬಂದವರಿಗೆಲ್ಲಾ ದಾನ ಧರ್ಮ ಮಾಡುತ್ತಾ, ಬಹಳ ಹೆಸರನ್ನು ಗಳಿಸಿದವರಾಗಿದ್ದರು.

ಮುಂದುವರಿಯುವುದು

Leave a Reply

Your email address will not be published. Required fields are marked *