Realtime blog statisticsweb statistics
udupibits.in
Breaking News
ಉಡುಪಿ: ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಹಾಗೂ ಬಿಜೆಪಿ ಬೆಂಬಲಿಸಿ ವರದಿ ಪ್ರಕಟಿಸಿದ ಉದಯವಾಣಿ ವಿರುದ್ಧ ಶ್ರೀರಾಮ ದಿವಾಣರಿಂದ ಚುನಾವಣಾ ಆಯೋಗಕ್ಕೆ ದೂರು

ಪುತ್ತೂರು ಕ್ಷೇತ್ರದ ಚಾರಿತ್ರಿಕ ಹತ್ತು ಚೋದ್ಯಗಳು ಮತ್ತು ಪೊಳಲಿ ಕ್ಷೇತ್ರ- ಭಾಗ 13

* ಡಾ.ಮ.ಸು.ಅಚ್ಚುತ ಶರ್ಮಾ

# ನಟ್ಟೋಜಿಯು ತನ್ನ ವರ್ಗ ಸ್ಥಳದಿಂದ ದೇವಸ್ಥಾನಕ್ಕೂ ರಾಜಾಂಗಣ ಬೀದಿ ಮುಂತಾದುವುಗಳಿಗೂ ಸ್ಥಳಕೊಟ್ಟು ರಥೋತ್ಸವದ ತೇರು ಎಳೆಯುವುದಕ್ಕೆ ತನ್ನ ಗದ್ದೆಯಲ್ಲೆ ಅನುಗೊಳಿಸಿಯು, ಇನ್ನೊಂದು ತಿಮಾರು ಗದ್ದೆಯಲ್ಲಿ ಅಂಕಯಾನೆ ಕವಾಯಿತು ಸೇವೆಯನ್ನು ಕೈಕೊಳ್ಳುವುದಕ್ಕೂ, ದೇವರಿಗೆ ಕುಳಿತುಕೊಳ್ಳುವ ಕಟ್ಟೆಯನ್ನು, ದೇವರ ಭಂಡಾರ ನಿಧಿ ನಿಕ್ಷೇಪಕ್ಕೆ ಇರಿಸುವ ಸ್ಥಳವೆಂದು ಭಂಗಾರು ಕಾಯೇರ್ ಕಟ್ಟೆಯೆಂಬ ಕಟ್ಟೆಯನ್ನು ಮಾಡಿಸಿ ಉತ್ಸವ ಕಾಲಗಳಲ್ಲಿ ಕುಳಿತುಕೊಳ್ಳಲು ಏರ್ಪಡಿಸಿದ್ದಲ್ಲದೆ, ಉತ್ಸವದ ಕಾಲದಲ್ಲಿ ಸವಾರಿ ವಿಶ್ರಾಂತಿಗಾಗಿ ಬೊಳುವಾರಿನಲ್ಲು, ಸಾಲ್ಮರದಲ್ಲೂ, ತಾಳಿಪ್ಪಾಡಿ ಎಂಬಲ್ಲೂ ಅಶ್ವತ್ಥ ಮರದ ಅಡಿಯಲ್ಲೂ ಒಂದು ಕಟ್ಟೆಯನ್ನು ಏರ್ಪಡಿಸಿದ್ದರು.

ಆ ಮೇಲೆ ದೈವ ದೇವರ ಅಭಯ ಪ್ರಕಾರ ಉಳ್ಳಾಳ್ತಿ ಯಾನೆ ದೇವಿಯ ಸ್ಥಾನವು ಇಲ್ಲಿಂದ ವರ್ಗಾಯಿಸಲ್ಪಟ್ಟು ಬಲ್ನಾಡು ಎಂಬಲ್ಲಿ ಸ್ಥಾಪಿಸಲ್ಪಟ್ಟಿತು. ಮತ್ತು ಸ್ಥಾನವು ಇಲ್ಲಿ ಇರುತ್ತಿದ್ದ ಜ್ಞಾಪಕಾರ್ಥವಾಗಿ ದೇವಳದಲ್ಲಿ ನಿತ್ಯದ ಬಲಿ ಹೊರಡುವುದಕ್ಕೆ ಆ ದೇವಿಯನ್ನು ಪರಿಚಾರಕನು ಧ್ವನಿಯ ಮೂಲಕವೂ ಶಾಂತಿಕಾರನು ನಿರೂಪಣೆ ಮೂಲಕವೂ ಆಹ್ವಾನ ಮಾಡಿಕೊಂಡು ಉತ್ಸವ ಬಲಿ ಹೊರಡಬೇಕೆಂದು ವರ್ಷಾವಧಿ ಜಾತ್ರೆಗೆ ಬಲನಾಡಿನಿಂದ ಭಂಡಾರಯುಕ್ತವಾಗಿ ಧರ್ಮಾಧಿಕಾರಿಗಳೊಂದಿಗೆ ಸವಾರಿ ಚಿತ್ತೈಸುವುದು. ಚಿತ್ತೈಸುವಾಗ ದರ್ಶನ ಪಾತ್ರಿಗಳು ಸಮೇತ ಧನುರ್ಭಾಣ, ಬಾಳು ಭಂಡಾರ, ಕಿರ್‍ಪಾಳು ದಂಡಿಗೆ, ಛತ್ರ ಪತಾಕೆ, ದೀವಟಿಗೆ ಮೊದಲಾದ ಬಿರುದು ಬಾವಲಿಗಳಿಂದ ದೇವಿಯ ಭಂಡಾರವು ರಾಜಾಂಗಣಕ್ಕೆ ಬಂದು ಮಹಾಲಿಂಗೇಶ್ವರನ ಉತ್ಸವ ಸಮಾರಂಭವನ್ನು ಕನ್ಯಾ ದಾತೃತ್ವದ ದಿಬ್ಬಣವು ಬಂದಂತೆ ಉತ್ಸವದೊಂದಿಗೆ ಕೂಡಿಕೊಳ್ಳುವುದು ಬಹಳ ಕಲ್ಯಾಣಕರವಾಗಿದೆ.

ಪ್ರತಿ ವರ್ಷದಲ್ಲು ವಿಷು ಸಂಕ್ರಮಣ ಮೊದಲ್ಗೊಂಡು ಐದು ದಿನಗಳ ವರೇಗೆ ಆಗುತ್ತಿದ್ದ ಉತ್ಸವ ಮೆರವಣಿಗೆಗಳು ಮತ್ತು ಮಹಾ ರಥೋತ್ಸವಗಳು ಜರಗಿದ ನಂತರ ಅವಭೃತ ಸ್ನಾನಕ್ಕಾಗಿ ಪುತ್ತೂರಿನಿಂದ 9 ಮೈಲು ದೂರದಲ್ಲಿರುವ ಕುಮಾರಧಾರಾ ನದಿಯಲ್ಲಿ ಬಹಳ ವೈಭವದಿಂದ ತನ್ನ ವೀರ ಕಂಕಣಗಳನ್ನು ವಿಸರ್ಜಿಸಿ ಮಂಗಲ ಸ್ನಾನ ಮಡುವ ಕ್ರಮವಾಗಿದೆ. ಇದರಿಂದಲೆ ಆ ಸ್ಥಳಕ್ಕೆ ವೀರಮಂಗಿಲವೆಂಬ ಹೆಸರಾಯಿತು.

ಶ್ರೀ ಮಹಾಲಿಂಗೇಶ್ವರನು ಅಲ್ಲಿ ಮಂಗಳ ಸ್ನಾನ ಮಡಿ ಶ್ರಮಾ ಪರಿಹರಿಸಿಕೊಂಡು ಮನಃಶಾಂತಿಯನ್ನು ಹೊಂದಿಕೊಂಡುದರಿಂದ ಅಲ್ಲಿಗೆ ಶಾಂತಿಗೋಡು ಗ್ರಾಮವೆಂದು ಹೆಸರಾಯಿತು. ಅವಭೃತ ಸ್ನಾನ ಮುಗಿಸಿ ಅಲ್ಲಿಮದ ಉತ್ಸವದ ಸವಾರಿಯು ದೇವಾಲಯಕ್ಕೆ ಚಿತ್ತೈಸಿ ಧ್ವಜ ಅವರೋಹಣವಾಗುವುದು. ಮರುದಿನ ಧರ್ಮಾಧಿಕಾರಿಗಳೂ, ಭಜಕರಿಗೂ ಅಭಯಪ್ರದವಾದ ಮಂತ್ರಾಕ್ಷತೆಗಳು ಸಿಕ್ಕುವ ಶುಭ ದಿನವಾಗಿದೆ.

ಮುಂದುವರಿಯುವುದು

Leave a Reply

Your email address will not be published. Required fields are marked *