Realtime blog statisticsweb statistics
udupibits.in
Breaking News
ಉಡುಪಿ: ಜಿಲ್ಲೆಯ 25 ಮಂದಿ ಪೊಲೀಸ್ ವಾಹನ ಚಾಲಕ ಸಿಬ್ಬಂದಿಗಳ ಪರಸ್ಪರ ವರ್ಗಾವಣೆ.

ಕುಕ್ಕೆ ಕ್ಷೇತ್ರದ ಚಾರಿತ್ರಿಕ ಹಿನ್ನೆಲೆ- ಭಾಗ 14

* ಡಾ.ಮ.ಸು.ಅಚ್ಚುತ ಶರ್ಮಾ

# ಈ ಸುಬ್ರಹ್ಮಣ್ಯ ದೇವರ ಗುಡಿಯ ಮುಖ ಮಂಟಪಕ್ಕೆ ಬಸವನ ಮಂಟಪ ಎಂಬ ಹೆಸರಿತ್ತೆಂದು ಹಳೆ ದಾಖಲೆಗಳಿಂದ ತಿಳಿದುಬರುತ್ತದೆ. ಇದರಿಂದಾಗಿ ಒಳಗಿನ ಅಹಿಪೇಶ್ವರ (ವಾಸುಕಿ) ಲಿಂಗಕ್ಕೆ ಎದುರಿನಲ್ಲಿ ಬಸವನ ವಿಗ್ರಹವು ಇದ್ದಿರಬೇಕು. ಈ ಬಸವನ ವಿಗ್ರಹವು ಕೂಡ ಭಿನ್ನಬಂದು ಈ ಸುಬ್ರಹ್ಮಣ್ಯನ ಗರ್ಭಗುಡಿಯ ಎಡೆನಾಳಿಯಲ್ಲಿ ಬಿದ್ದಿರುತ್ತದೆ.

ಈ ಸುಬ್ರಹ್ಮಣ್ಯ ಗುಡಿಯ ಒಳ ಮಂಟಪದ ದ್ವಾರದ ಸುತ್ತಲೂ ಹಿತ್ತಾಳೆಯಿಂದ ಮಾಡಿಸಿದ ನರಸಿಂಹನ ಮುಖವನ್ನು ಮಡಾಯಿಸಿದ್ದು ಕಾಣುತ್ತದೆ. ಇದರಿಂದಾಗಿ ಈ ಗುಡಿಯನ್ನೇ ತಮ್ಮ ನರಸಿಂಹ ದೇವರ ಗುಡಿಯನ್ನಾಗಿ ಮಾರ್ಪಡಿಸಬೇಕೆಂಬ ದುರಾಗ್ರಹವು ಆಗ ದೇವಳದ ಆಡಳಿತೆಯನ್ನು ವಹಿಸಿಕೊಂಡ ಆಗಿನ ಮಾಧ್ವ ಸ್ವಾಮಿಗಳಿಗೆ ಇತ್ತೆಂದು ಊಹಿಸಬೇಕಾಗುತ್ತದೆ.

ಆದರೆ ಲಿಂಗವನ್ನೂ ಬಸವನನ್ನೂ ಭಿನ್ನಪಡಿಸಿ ಹೊರ ಹಾಕಿದ ಸ್ವಾಮಿಗಳಿಗೆ ಶ್ರೀ ಸುಬ್ರಹ್ಮಣ್ಯನ ಗುಡಿಯನ್ನೆ ನರಸಿಂಹ ಗುಡಿಯನ್ನಾಗಿ ಮಾರ್ಪಡಿಸುವುದು ಅಸಾಧ್ಯವಾಗುತ್ತಿರಲಿಲ್ಲ. ಆದರೆ ಕ್ಷೇತ್ರದ ಮಹಿಮೆಯಿಂದಾಗಿ ಏನೋ ಅವರಿಗೆ ಅವಾಂತರಗಳು ಬಂದು ಅವರ ದುರಾಗ್ರಹಕ್ಕೆ ಆತಂಕವು ಬಂದಿರಬಹುದು, ಇದರಿಂದಾಗಿ ಸುಬ್ರಹ್ಮಣ್ಯ ಕ್ಷೇತ್ರವನ್ನೇ ನರಸಿಂಹ ಕ್ಷೇತ್ರವನ್ನಾಗಿ ಮಾಡುವ ಅವರ ಪ್ರಯತ್ನವು ಬಿದ್ದು ಹೋದುದರಿಂದ ಈಗ ಸುಬ್ರಹ್ಮಣ್ಯ ಕ್ಷೇತ್ರವು ಶ್ರೀ ಸುಬ್ರಹ್ಮಣ್ಯ ಕ್ಷೇತ್ರವಾಗಿಯೇ ಉಳಿಯಿತು.

ಈ ವಿಷಯದಲ್ಲಿ ತಾ. 24.2.1940ರಲ್ಲಿ ಮದ್ರಾಸ್ ಹಿಂದೂ ರಿಲೀಜಿಯಸ್ ಎಂಡೋಮೆಂಟ್ ಕಮೀಷನರ್ ಶ್ರೀ ಸಿ. ಉಮೇಶ್ವರ ರಾವ್ ಯಂ.ಎ., ಬಿ.ಎಲ್. ರವರು ಈ ದೇವಸ್ಥಾನವನ್ನು ಸಂದರ್ಶಿಸಿ ಇಲ್ಲಿಯ ಸ್ಥಿತಿಗತಿಗಳನ್ನು ನೋಡಿ ಇನ್ಸ್ ಪೆಕ್ಷನ್ ರಿಪೋರ್ಟನಲ್ಲಿಬರೆದ ವಿಷಯಗಳು ಗಮನಾರ್ಹವಾಗಿದೆ.

ಮುಂದುವರಿಯುವುದು

Leave a Reply

Your email address will not be published. Required fields are marked *