Realtime blog statisticsweb statistics
udupibits.in
Breaking News
ಉಡುಪಿ: ಜಿಲ್ಲೆಯ 25 ಮಂದಿ ಪೊಲೀಸ್ ವಾಹನ ಚಾಲಕ ಸಿಬ್ಬಂದಿಗಳ ಪರಸ್ಪರ ವರ್ಗಾವಣೆ.

ಪುತ್ತೂರು ಕ್ಷೇತ್ರದ ಚಾರಿತ್ರಿಕ ಹತ್ತು ಚೋದ್ಯಗಳು ಮತ್ತು ಪೊಳಲಿ ಕ್ಷೇತ್ರ- ಭಾಗ 14

* ಡಾ.ಮ.ಸು.ಅಚ್ಚುತ ಶರ್ಮಾ

# ಕಾಲಾಂತರದಲ್ಲಿ ದೈವಚಿತ್ತ ಪ್ರಕಾರ ಬಲ್ಲಾಳರಾಯನ ವಂಶವು ಕ್ಷೀಣವಾಗುತ್ತಾ ಬಂತು. ರಾಜನ ಕುಟುಂಬದೊಳಗೆ ವ್ಯತ್ಯಾಸ ಉಂಟಾಗಿ ವರು ಆ ಸ್ಥಳವನ್ನೇ ಬಿಟ್ಟು ಬೇರೆ ಗ್ರಾಮಗಳಿಗೆ ಹೋಗಬೇಕಾಗಿ ಬಂತು. ಆಮೇಲೆ ದೇವರ ಕಾರ್ಯ ಭಾಗದ ಸಮಸ್ತ ಅಧಿಕಾರಿಗಳೂ ನಟ್ಟೋಜಿ ವಂಶಸ್ಥರಲ್ಲೆ ನೆಲೆಗೊಂಡು ಆ ವಂಶದ ಪರಂಪರೆಯಲ್ಲಿ ಕೀರ್ತಿಶೇಷರಾದ ನಟ್ಟೋಜಿ ಕೃಷ್ಣಯ್ಯನವರ ಧರ್ಮಾಧಿಕಾರದಲ್ಲಿ ದೇವಸ್ಥಾನವು ಜೀರ್ಣೋದ್ಧಾರ ಮಾಡಲ್ಪಟ್ಟು ಉನ್ನತವಾದ ಶಿಖರ ಕಲಶಗಳಿಂದ ನವೀಕರಿಸಲ್ಪಟ್ಟು ಸಾಧಾರಣ 1878ರಲ್ಲಿ ಅಂದರೆ ಧಾತು ಸಂವತ್ಸರದ ಮೀನ ಮಾಸದಲ್ಲಿ ದೇವಳದ ಬ್ರಹ್ಮಕಲಶ ಮಾಡಲ್ಪಟ್ಟಿತು.

ಆಮೇಲೆ ದೇವಳದ ಉಪದೇವರಾಗಿರುವ ಬಲ್ನಾಡು ದೈವಗಳ ಸ್ಥಾನದ ಕಟ್ಟೋಣಗಳೂ, ಬೆಟ್ಟೆ ಶ್ರೀ ವಿನಾಯಕ ದೇವಸ್ಥಾನವೂ ಜೀರ್ಣೋದ್ಧಾರ ಮಾಡಲ್ಪಟ್ಟು ಬ್ರಹ್ಮಕಲಶ ಇತ್ಯಾದಿ ಅನೇಕ ಶ್ರೇಯಸ್ಕರ ಕೆಲಸಗಳು ಮಾಡಲ್ಪಟ್ಟವು.

ಶ್ರೀ ಕೃಷ್ಣಯ್ಯನವರ ನಂತರ ಪರಂಪರೆಯ ಸುಪುತ್ರರಾದ ನಟ್ಟೋಜಿ ಶಿವರಾಯರ ವರೇಗೆ ಅಂದರೆ 1916ರ ವರೇಗೆ ಅದೇ ಕರ್ತವ್ಯವನ್ನು ನಿಷ್ಟೆಯಿಂದ ನಡೆಯಿಸಿಕೊಂಡುಬಂದರು. ಆಮೇಲೆ ದೇವಳದ ಪೂಜಾದಿಗಳು ಆಡಳಿತೆಯೂ ಇವರಿಂದ ತಪ್ಪಿತು. ಇದರ ಕಾರಣಗಳನ್ನು ಇದರ ಪ್ರಥಮ ವಿವರಣೆಯಲ್ಲಿ ಕೊಟ್ಟಿರುತ್ತೇನೆ.

ಈ ಕ್ಷೇತ್ರದ ಮಹಿಮೆ ಮತ್ತು ಇತಿಹಾಸ ಕೂಡ ಅತ್ಯಾಶ್ಚರ್ಯಕರವಾದದ್ದು. ಇವು ಈ ಕ್ಷೇತ್ರದಲ್ಲಿ ನಡೆದ ಹತ್ತು ಚೋದ್ಯಗಳಿಂದ ವ್ಯಕ್ತವಾಗುತ್ತದೆ.

ಮುಂದುವರಿಯುವುದು

Leave a Reply

Your email address will not be published. Required fields are marked *