Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಕುಕ್ಕೆ ಕ್ಷೇತ್ರದ ಚಾರಿತ್ರಿಕ ಹಿನ್ನೆಲೆ- ಭಾಗ 15

* ಡಾ.ಮ.ಸು.ಅಚ್ಚುತ ಶರ್ಮಾ

# ”There is a small shrine to God Narasimha where wirship is offered by Madhwa priests paid by madhwa Matt anthorities. This seems to have been introduceed in the time of madhwacharya who was unable to make an impression on the predominently sgaivite character of the temple firmly established by thet time. In Udipi, on the other hand, though originally a shiva temple, the predominance has entirely gone to Shre Krishna Temple established by madhwacharya. Indeed the name of Udipi is a nameof shiva as Chandra moulishwara”.

ತಾತ್ಪರ್ಯ: ”ದೇವಸ್ಥಾನದ ಒಳಗೆ ಸಣ್ಣ ನರಸಿಂಹ ಗುಡಿಯೊಂದು ಇದೆಯೆಂದೂ, ಅದರಲ್ಲಿ ಮಾಧ್ವ ಸ್ವಾಮಿಗಳು ಪೂಜೆ ಮಾಡುತ್ತಾರೆಂದೂ, ಇದರ ಖರ್ಚು ವಗೈರೆ ಮಾಧ್ವ ಮಠವೇ ನೋಡಿಕೊಳ್ಳುತ್ತದೆ ಎಂದೂ, ಈ ಶಿವ ಸಂಬಂಧವಾದ ದೇವಾಲಯದ ಒಳಗೆ ಈ ಮಾಧ್ವ ಮಠವು ಮಧ್ವಾಚಾರ್ಯರ ನಂತರ ಬಂದಿರಬೇಕೆಂದೂ, ಇಲ್ಲಿ ಶ್ರೀ ಸುಬ್ರಹ್ಮಣ್ಯೇಶ್ವರನಿಗಿಂತಲೂ, ಶ್ರೀ ನರಸಿಂಹನನ್ನೇ ಪ್ರಧಾನ ದೇವತೆಯಾಗಿ ಪರಿವರ್ತಿಸಲು ಮಾಧ್ವರು ಪ್ರಯತ್ನಿಸಿ ಸಫಲವಾಗದೆ ಒಂದು ಗುಡಿಯನ್ನು ಮಾತ್ರ ತನ್ನದನ್ನಾಗಿ ಮಾಡಿಕೊಂಡಿರಬೇಕೆಂದೂ ತಿಳಿಸಿರುತ್ತಾರೆ.

ಅಲ್ಲದೆ ಅದರ ಬದಲು ಉಡುಪಿಯಲ್ಲಿ ಮಧ್ವಾಚಾರ್ಯರು ಅಲ್ಲಿಯ ಅನಂತೇಶ್ವರ ಚಂದ್ರಮೌಳೀಶ್ವರ ದೇವಸ್ಥಾನಗಳೆಂಬ ಶೈವಾಲಯಗಳ ಪೂರ್ಣ ಪ್ರಶಸ್ತಿಯನ್ನು ತೆಗೆದು ತನ್ನ ಕೃಷ್ಣನಿಗೇನೇ ಪ್ರಶಸ್ತಿ ಬರುವಂತೆ ಮಾಡಿದ ಪ್ರಯತ್ನವು ಸಫಲವಾಯಿತೆಂದೂ ತಿಳಿಸಿರುವರು. ಹಾಗಿದ್ದರೂ ”ಉಡುಪಿ” ಎಂಬ ಚಂದ್ರಮೌಳೀಶ್ವರನಾದ ಶಿವನ ಹೆಸರು ಹಾಗೆಯೇ ಉಳಿದಿದೆ”. ಎಂದು ಉಲ್ಲೇಖಿಸಿ ಮಾಧ್ವ ಸ್ವಾಮಿಗಳ ದೇವಾಲಯದಲ್ಲಿ ಮಾಡಿದ ಅಕ್ರಮಗಳನ್ನು ವಿವರಿಸಿರುತ್ತಾರೆ.

ಮೊದಲಿನ ಸ್ವಾಮಿಗಳ ಈ ಪ್ರಯತ್ನವು ವಿಫಲಗೊಂಡ ನಂತರ ಅವರ ನಂತರದ ಸ್ವಾಮಿಗಳು ಸಾಧಾರಣ 1880-82ರಲ್ಲಿ ಅಲ್ಲಿಯ ಸ್ಥಳೀಯ ಸ್ಮಾರ್ತ ಬ್ರಾಹ್ಮಣ ಮಣೆಗಾರರನ್ನು ಹೊರಹಾಕಿ ಶ್ರೀ ಸುಬ್ರಹ್ಮಣ್ಯ ದೇವರ ಬಲಭಾಗದಲ್ಲಿದ್ದ ಸುಬ್ರಹ್ಮಣ್ಯನ ಪರಿವಾರ ದೇವರಾದ ಶ್ರೀ ಸಿದ್ಧಿ ವಿನಾಯಕನ ಗುಡಿಯಿಂದ ಆ ವಿಗ್ರಹವನ್ನು ಸ್ಥಾನಚ್ಯುತಿಗೊಳಿಸಿ ಆ ಗುಡಿಯನ್ನು ತಮ್ಮ ನರಸಿಂಹ ಗುಡಿಯನ್ನಾಗಿ ಮಾಡಿಕೊಂಡ ವಿಚಾರವನ್ನು ಇದರೊಂದಿಗೆ ಇರುವ ಸ್ಥಾನಚ್ಯುತಿಗೊಳಿಸಲ್ಪಟ್ಟ ಸಿದ್ಧಿ ವಿನಾಯಕ ದೇವರ ವಿಚಾರದಲ್ಲಿ ಬರೆದ ವಿವರಣೆಯಲ್ಲಿ ಓದಬಹುದು.

ಶ್ರೀ ಸುಬ್ರಹ್ಮಣ್ಯ ದೇವರಿಗೆ ಸಂಬಂಧಪಟ್ಟ ಶೈವಾಗಮೋಕ್ತ ಪೂಜೆ ನಡೆಯುವುದಿಲ್ಲ. ಪೂಜೆ ಮತ್ತು ತಂತ್ರ ನಡೆಸುವವರು ವೈಷ್ಣವ ಮಾಧ್ವ ಶಿವಳ್ಳಿ ಬ್ರಾಹ್ಮಣರು. ಇವರು ಶ್ರೀ ಸುಬ್ರಹ್ಮಣ್ಯ ದೇವರ ಹತ್ತಿರ ಸಾಲಿಗ್ರಾಮಗಳನ್ನು ಇಟ್ಟು ವೈಷ್ಣವ (ವೈಖಾನಸ) ಆಗಮ ಪ್ರಕಾರ ನಾವು ಪೂಜೆ ಮಾಡುವುದೆಂದು ಹೇಳುತ್ತಾರೆ.

ಪೂಜಾ ಕಾಲದಲ್ಲಿ ಮಂತ್ರೋಚ್ಛಾರಣೆ ಮಾಡುವ ಕ್ರಮ ತೀರಾ ಕಮ್ಮಿ. ಮಂತ್ರಗಳನ್ನು ಉಚ್ಛರಿಸುವುದಿಲ್ಲವೇಕೆ ? ಎಂದು ಕೇಳಿದರೆ ಇಲ್ಲಿ ಮೌನ ಪೂಜಾ ಪದ್ಧತಿ ಎಂದು ಹೇಳಿ ತಪ್ಪಿಸಿಕೊಳ್ಳುತ್ತಾರೆ. ಶ್ರೀ ಸುಬ್ರಹ್ಮಣ್ಯನಿಗೆ ಪ್ರಿಯವಾದ ವಿಭೂತಿ ಮತ್ತು ಬಿಲ್ವಪತ್ರೆಗಳನ್ನು ಉಪಯೋಗಿಸುವುದಿಲ್ಲ. ಭಕ್ತಾಧಿಗಳಿಗೆ ತುಳಸಿ, ಗಂಧ ಪ್ರಸಾದವನ್ನೇ ಕೊಡುವುದಾಗಿದೆ. ಇಲ್ಲಿ ಮಹಾಪೂಜಾ ನಂತರ ಶಂಖತೀಥಱ ಪ್ರೋಕ್ಷಣೆ ಮಾಡುವುದು ವೈಷ್ಣವ ಪದ್ಧತಿ. ಈ ಎಲ್ಲಾ ಕೃತ್ರಿಮ ಮದ್ಧತಿ ಪೂಜೆಯು ಈ ದೇವಳದ ಆಡಳಿತೆಯು ಮಾಧ್ವ ಸ್ವಾಮೀಗಳಿಗೆ ಬಂದ ನಂತರವೇ ಬಂದದ್ದಾಗಿದೆ ಎಂದು ತಿಳಿದುಬರುತ್ತದೆ.

ಮುಂದುವರಿಯುವುದು

Leave a Reply

Your email address will not be published. Required fields are marked *