Realtime blog statisticsweb statistics
udupibits.in
Breaking News
ಉಡುಪಿ: ಜಿಲ್ಲೆಯ 25 ಮಂದಿ ಪೊಲೀಸ್ ವಾಹನ ಚಾಲಕ ಸಿಬ್ಬಂದಿಗಳ ಪರಸ್ಪರ ವರ್ಗಾವಣೆ.

ಪುತ್ತೂರು ಕ್ಷೇತ್ರದ ಚಾರಿತ್ರಿಕ ಹತ್ತು ಚೋದ್ಯಗಳು ಮತ್ತು ಪೊಳಲಿ ಕ್ಷೇತ್ರ- ಭಾಗ 15

* ಡಾ.ಮ.ಸು.ಅಚ್ಚುತ ಶರ್ಮಾ

ಹತ್ತು ಚೋದ್ಯಗಳ ವಿವರ

೧. ಕೈಯಲ್ಲಿ ಅರ್ಚಿಸುತ್ತಿದ್ದ ಶಿವಲಿಂಗವನ್ನು ನೆಲದಲ್ಲಿ ಇರಿಸಿ ಪೂಜೆ ಮಾಡಿದ ನಂತರ ಅದು ಭೂಗತವಾದುದರಿಂದ ತೆಗೆಯಲು ಸಾಧ್ಯವಾಗದೆ ಅದೇ ಶಿವಲಿಂಗ ಮಹಾಲಿಂಗವೆಂಬ ಹೆಸರಿನಿಮದ ಪ್ರತಿಷ್ಟಿಸಲ್ಪಟ್ಟಿತು. ಶಿವಲಿಂಗವನ್ನು ನೆಟ್ಟವ (ಪ್ರತಿಷ್ಟಿಸಿದವ) ನಾದುದರಿಂದ ನಟ್ಟೋಜಿ ಎಂಬ ಪರಂಪರೆಯೂ ಒಂದು ಚೋದ್ಯ.

೨. ಉಪ್ಪಿನಂಗಡಿ ಹತ್ತಿರ ಇರುವ ಶ್ವೇತನಪುರ ವ, ಬೊಳ್ಳಾರು ಎಂಬಲ್ಲಿನ ಜಿನವಂಶದವರಾದ ಕೊಟ್ಟಾರಿಗಳವರ ಕಂಬಳಗದ್ದೆಯಲ್ಲಿ ಒಂದು ಚಿನ್ನದ ತೆನೆಯುಳ್ಳ ಬತ್ತದ ಕದಿರು ಬೆಳೆದಿತ್ತು. ಅವರು ಆ ಕದಿರು ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಬದಿಗೆ ಮಾಲಿಕೊಂಡಿದ್ದುದರಿಂದ ಅದನ್ನು ಅಲ್ಲಿಯ ಕೊಟ್ಟಾರಿಗಳು ಮಹಾಲಿಂಗೇಶ್ವರನಿಗೆ ಅರ್ಪಿಸಿದರು. ಮಾತ್ರವಲ್ಲದೆ ಅದರ ನೆನಪಿಗಾಗಿ ಅದೇ ಬೊಳ್ಳಾರಿನಿಂದ ಪ್ರತಿ ಸೋಮವಾರ ಒಂದು ಕುಡ್ತೆ ಹಾಲು ಮಹಾಲಿಂಗೇಶ್ವರನಿಗೆ ಒಪ್ಪಿಸುವ ಕ್ರಮವು ಈಗಲೂ ನಡೆಯುತ್ತಿರುವುದು ಒಂದು ಚೋದ್ಯವಾಗಿದೆ.

೩. ದೇವಸ್ಥಾನದ ಪಡುದಿಕ್ಕಿನಲ್ಲಿ ತೋಡಿಸಿ ಮಾಡಿದ ಕೆರೆಯಲ್ಲಿ ನೀರು ಬಾರದೆ ಇದ್ದುದರಿಂದ ಅದಕ್ಕಾಗಿ ವರುಣನ ಪೂಜೆಗಾಗಿ ಮಾಡಿಸಿದ ಸಹಸ್ರ ಬ್ರಾಹ್ಮಣರ ಸಂತರ್ಪಣೆ ನಡೆಸಿದಾಗ ನೀರು ಬಂದುದರಿಂದ ಊಟಕ್ಕೆ ಇಟ್ಟ ಕದಳಿ ಎಲೆಗಳು ಅದರೊಳಗಿದ್ದ ಅನ್ನವು ಒಟ್ಟಾಗಿ ಅದು ಮುತ್ತಿನ ಚಿಪ್ಪು ಆಗಿ ಕೆರೆಯಲ್ಲಿ ಮುತ್ತು ಆದುದು ಒಂದು ಚೋದ್ಯ.

೪. ದೇವರ ಸೇವೆ ಮಾಡುತ್ತಿದ್ದ ಭಂಡಾರಿಯ ಪತ್ನಿಗೆ ಎದೆಯಲ್ಲಿ ೩ ಮೊಲೆ ಹುಟ್ಟಿದ್ದು ಒಂದು ಚೋದ್ಯ.

೫. ನಿತ್ಯ ಪೂಜೆ ಮಾಡುವ ಅರ್ಚಕರು ಪಶ್ಚಿಮದ ಸಣ್ಣ ಬಾಗಿಲಿನಿಂದ ಬಂದು ಮೊಕ್ತೇಸರರನ್ನು ಮೂರು ಸಲ ಕರೆಯುವುದು ಒಂದು ಚೋದ್ಯ.

ಮುಂದುವರಿಯುವುದು

Leave a Reply

Your email address will not be published. Required fields are marked *