Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಪುತ್ತೂರು ಕ್ಷೇತ್ರದ ಚಾರಿತ್ರಿಕ ಹತ್ತು ಚೋದ್ಯಗಳು ಮತ್ತು ಪೊಳಲಿ ಕ್ಷೇತ್ರ- ಭಾಗ 16

* ಡಾ.ಮ.ಸು.ಅಚ್ಚುತ ಶರ್ಮಾ

6. ಎಡೆಮನೆ ಯಾ ಎಡೆ ಗಾಳಿಯಲ್ಲಿ ಬೆಳಗ್ಗಿನ ಕಾಲದಲ್ಲಿ ಭೇರಿಯನ್ನು ಭಡ ಭಡ ಎಂದು ಹೊಡೆಯುವುದೆಂದು ಚೋದ್ಯ.

7. ನಗರ ಸಂಸ್ಥಾನದ ಮಹಾರಾಜ್ಞಿಯೊಬ್ಬಳು ಬಂದು ದೇವರ ದರ್ಶನ ಮಾಡಿದಾಗ ದೇವರ ಭಕ್ತಿಯಿಂದ ತನ್ನ ಕೈಯಲ್ಲಿದ್ದ ಪಚ್ಚೆ ಕಲ್ಲಿನಿಂದ ಮಾಡಲ್ಪಟ್ಟ ರತ್ನದ ಕಡಗವನ್ನು ಅರ್ಪಿಸಿದ್ದರಿಂದ ಆ ಕಡಗವು ದೇವಳದಲ್ಲಿ ಇರುವುದು ಒಂದು ಚೋದ್ಯ.

8. ಈಶ್ವರ ವಾಹವನಾದ ವೃಷಭ ಒಂದು ಗದ್ದೆಯಲ್ಲಿ ಭತ್ತದ ತೆನೆ ತಿಂದುದಕ್ಕಾಗಿ ಒಬ್ಬ ಘಾತುಕನು ಅದರ ಕಾಲನ್ನು ಕತ್ತಿಯಿಮದ ಕಡಿದುದರಿಂದ ಕಾಲು ತುಂಡಾಗಿ ಅಲ್ಲಿಯೆ ಬಿತ್ತು. ದೇಶದಲ್ಲಿ ಕಲಿ ಬಂದುದರಿಂದ ಈ ರೀತಿ ಆಯಿತೆಂದು ಆ ವೃಷಭನು ಕಲ್ಲಾಗಿ ದೇವರ ಸನ್ನಿಧಿಯಲ್ಲಿ ಇರುವುದು ಒಂದು ಚೋದ್ಯ.

9. ಮಹೋತ್ಸವವಾದ ಮರುದಿನ ಅವಭೃತ ಸ್ನಾನಕ್ಕೆ ಶ್ರೀ ಮಹಾಲಿಂಗೇಶ್ವರನು ತನ್ನ ದೇವಾಲಯದಿಂದ ಉತ್ಸವ ಉತ್ಸವ ಸವಾರಿ 9 ಮೈಲು ದೂರವಿರುವ ವೀರ ಮಾಂಗಿಲವೆಂಬಲ್ಲಿರುವ ಕುಮಾರಧಾರಾ ನದಿಯಲ್ಲಿ ಮಂಗಲ ಸ್ನಾನ ತೀರಿಸಿಕೊಂಡು ಬಹಳ ವೇಗದಿಂದ ಪುನಃ ತನ್ನ ಸ್ಥಾನಕ್ಕೆ ಸೇರುವುದು ಒಂದು ಚೋದ್ಯ.

ಇಷ್ಟು ದೂರಬರಲು ಕಾರಣವೇನೆಂದರೆ ತಾರಕಾಸುರನನ್ನು ಸಂಹರಿಸಿದ ಶ್ರೀ ಸುಬ್ರಹ್ಮಣ್ಯೇಶ್ವರನಿಗೆ ಸಹ್ಯ ಪರ್ವತದಲ್ಲಿ ದೇವತೆಗಳೂ ಮಹರ್ಷಿಗಳೂ ಕೂಡಿ ಶಿರಸ್ಸಿಗೆ ಧಾರಾಭಿಷೇಕ ಮಾಡಿದ ತೀರ್ಥವೇ ನದಿಯಾಗಿ ಹೊರಟು ಬಂದದ್ದರಿಂದ ಆ ಪರ್ವತಕ್ಕೆ ಕುಮಾರ ಪರ್ವತವೆಂದು ಅಲ್ಲಿಂದ ಹೊರಟ ತೀರ್ಥದಿಂದ ಉಂಟಾದ ನದಿಗೆ ಕುಮಾರಧಾರ ಎಂಬ ಹೆಸರು ಬಂದದ್ದಾಗಿ ಈ ಕಾರಣದಿಂದ ಪುತ್ತೂರಿನ ಮಹಾಲಿಂಗೇಶ್ವರ ದೇವರು ತನ್ನ ಅವಭೃತವನ್ನು ಅಲ್ಲಿ ಇಟ್ಟುಕೊಂಡದ್ದಾಗಿದೆ.

10. ಕೆರೆಯ ಪೂರ್ವ ಬದಿಯಲ್ಲಿರುವ ಅಶ್ವತ್ಥಕಟ್ಟೆಯ ಬುಡದಲ್ಲಿ ಸರ್ಪವು ವಾಸಿಸುವುದೂ ಅದೇ ವೃಕ್ಷದ ಮೇಲೆ ಕೊಂಬೆಯಲ್ಲಿ ಗರುಡ ಪಕ್ಷಿ ವಾಸಿಸುವುದೂ (ಕುತ್ತಿಗೆ ಬಿಳಿ ಇರುವ ಗಿಡುಗದ ನಿವಾಸವು) ಅಲ್ಲಿ ಬಹಳ ಹಳೇ ವೃಕ್ಷವು ಬಿದ್ದು ಹೋದರೂ ಪುನಃ ಅದು ಬೆಳೆಯುತ್ತಿರುವುದು ಒಂದು ಚೋದ್ಯವಾಗಿದೆ.

ಈ ಪ್ರಕಾರ ಈ ಪುತ್ತೂರಲ್ಲಿ ಸ್ತುತ್ಯವಾದ ಹತ್ತು ಚೋದ್ಯಗಳು ನಡೆದು ಬಂದುದರಿಂದ ಹತ್ತೂರು ಕೊಟ್ಟರೂ ಪುತ್ತೂರು ಬಿಡೆ ಎಂಬ ನಾಣ್ಣುಡಿಗೆ ಜನತೆಯು ಬೆಂಬಲ ಕೊಟ್ಟಿತು ಎಂದು ತಿಳಿಯಬೇಕಾಗುತ್ತದೆ.

ಮುಗಿಯಿತು

Leave a Reply

Your email address will not be published. Required fields are marked *