Realtime blog statisticsweb statistics
udupibits.in
Breaking News
ಉಡುಪಿ: ಜಿಲ್ಲೆಯ 25 ಮಂದಿ ಪೊಲೀಸ್ ವಾಹನ ಚಾಲಕ ಸಿಬ್ಬಂದಿಗಳ ಪರಸ್ಪರ ವರ್ಗಾವಣೆ.

9ನೇ ವರ್ಷದ ಅಧ್ಯಾತ್ಮಿಕ ನಡಿಗೆ: ಉಡುಪಿ ಶ್ರೀಕೃಷ್ಣ ಮುಖ್ಯಪ್ರಾಣನ ಸನ್ನಿಧಾನದಿಂದ ಶಿರೂರು ಮುಖ್ಯಪ್ರಾಣನ ಸನ್ನಿದಾನಕ್ಕೆ ಭಾವಪೂರ್ಣ ಸಮಾಪನ

ಉಡುಪಿ: ಉಡುಪಿ ಶ್ರೀಕೃಷ್ಣ ಮುಖ್ಯಪ್ರಾಣನ ಸನ್ನಿಧಾನದಿಂದ ಶಿರೂರು ಮೂಲ ಮಠದ ಮುಖ್ಯಪ್ರಾಣನ ಸನ್ನಿಧಾನಕ್ಕೆ ಒಂಭತ್ತನೇ ವರ್ಷದ ‘ಅಧ್ಯಾತ್ಮಿಕ ನಡಿಗೆ’ ಯು ಎಪ್ರಿಲ್ 19ರಂದು ಮುಂಜಾನೆ ಭಾವಪೂರ್ಣವಾಗಿ ನಡೆಯಿತು.

 

ಮುಂಜಾನೆ ನಾಲ್ಕು ಗಂಟೆಗೆ ಉಡುಪಿ ಶ್ರೀಕೃಷ್ಣ ಮುಖ್ಯಪ್ರಾಣನ ಸನ್ನಿಧಾನದಿಂದ ನಡಿಗೆ ಆರಂಭಗೊಂಡಿತು. ಮಣಿಪಾಲ, ಪರ್ಕಳ, ಹಿರಿಯಡ್ಕವಾಗಿ ಶಿರೂರು ಮೂಲ ಮಠದ ಮುಖ್ಯಪ್ರಾಣನ ಸನ್ನಿಧಾನದಲ್ಲಿ ನಡಿಗೆ ಸಮಾಪನಗೊಂಡಿತು. ಹಿರಿಯ ನಾಗರಿಕರು, ಮಕ್ಕಳು, ಮಹಿಳೆಯರು ನಡಿಗೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.

ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ವಿಭಾಗ ಮುಖ್ಯಸ್ಥರಾದ ಡಾ. ರವಿರಾಜ ಆಚಾರ್ಯ, ಉದ್ಯಮಿಗಳೂ, ಧಾರ್ಮಿಕ ಮುಂದಾಳುಗಳೂ ಆದ ನಾಗಭೂಷಣ ಶೇಟ್, ಸುಹಾಸ್ ಕಿಣಿ, ವಾದಿರಾಜ ಆಚಾರ್ಯ, ರೊನಾಲ್ಡ್ ಫೆರ್ನಾಂಡಿಸ್ ಮೊದಲಾದವರು ನೇತೃತ್ವ ವಹಿಸಿದ್ದರು. ಪಾದಯಾತ್ರಿಗಳಿಗೆ ಪ್ರತೀ ಐದು ಕಿಲೋ ಮಿಟರ್ ಗೊಮ್ಮೆಯಂತೆ ಹಣ್ಣು ಹಂಪಲು ಮತ್ತು ತಂಪುಪಾನೀಯದ ವ್ಯವಸ್ಥೆ ಮಾಡಲಾಗಿತ್ತು.

ಸೋದೆ ವಾದಿರಾಜ ಮಠದ ಪೀಠಾಧಿಪತಿ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರು ಅಶಿರ್ವಚನವಿತ್ತು ಫಲ ಮಂತ್ರಾಕ್ಷತೆ ನೀಡಿದರು. ಮಧ್ವೇಶ ತಂತ್ರಿಯವರು ನಿರ್ವಹಿಸಿದರು.

ಒಂಭತ್ತು ವರ್ಷಗಳ ಹಿಂದೆ ಡಾ. ರವಿರಾಜ ಆಚಾರ್ಯ ಹಾಗೂ ಬಳಗದವರು ‘ಅಧ್ಯಾತ್ಮಿಕ ನಡಿಗೆ’ ಕಾರ್ಯಕ್ರಮವನ್ನು ಆರಂಭಿಸಿದ್ದರು.

Leave a Reply

Your email address will not be published. Required fields are marked *