Realtime blog statisticsweb statistics
udupibits.in
Breaking News
ಉಡುಪಿ: ಜಿಲ್ಲೆಯ 25 ಮಂದಿ ಪೊಲೀಸ್ ವಾಹನ ಚಾಲಕ ಸಿಬ್ಬಂದಿಗಳ ಪರಸ್ಪರ ವರ್ಗಾವಣೆ.

ಮೂಳೂರು ಘಟನೆ: ಶಿರ್ವ ಪಿಎಸ್ಐ ಅಬ್ದುಲ್ ಖಾದರ್ ವಿರುದ್ಧ ವೃಥಾರೋಪ

ಉಡುಪಿ: ಮೂಳೂರು ಸಾಯಿರಾಧಾ ಹೆರಿಟೇಜ್ ನಲ್ಲಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಮತ್ತು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರು ಪ್ರಕೃತಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಸಂದರ್ಭ ಮಾಧ್ಯಮಗಳ ಚಿತ್ರೀಕರಣಕ್ಕೆ ಅವಕಾಶ ನೀಡಬಾರದು ಎಂದು ಪೊಲೀಸ್ ಇಲಾಖೆಗೆ ಸರಕಾರ ಆದೇಶ ನೀಡಿದ್ದು ಮತ್ತು ಭದ್ರತೆ ಹಿನ್ನೆಲೆಯಲ್ಲಿ ಕಾಪು ಸಿಪಿಐ ಶಾಂತಾರಾಮ್ ನೇತೃತ್ವದಲ್ಲಿ ಶಿರ್ವ, ಕಾಪು ಮತ್ತು ಪಡುಬಿದ್ರಿ ಠಾಣೆಯ ಪೊಲೀಸ್ ಉಪ ನಿರೀಕ್ಷಕರು ಮತ್ತು ಸಿಬಂದಿಗಳು ಹಗಲು-ರಾತ್ರಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಈ ನಡುವೆ ಮೇ 1ರಂದು ಮಧ್ಯಾಹ್ನ ಸಾಯಿರಾಧಾ ಹೆರಿಟೇಜ್ ಮುಂದೆ ದೃಶ್ಯ ಮಾಧ್ಯಮ ಪ್ರತಿನಿಧಿಗಳು ಮತ್ತು ಪೊಲೀಸರ ನಡುವೆ ವೀಡಿಯೊ ಚೀತ್ರೀಕರಣಕ್ಕೆ ಸಂಬಂಧಿಸಿ ಮಾತಿನ ಚಕಮಕಿ ನಡೆದಿದ್ದು, ಶಿರ್ವ ಪಿಎಸ್ಐ  ಅಬ್ದುಲ್  ಖಾದರ್ ಅವರು ಚಿತ್ರೀಕರಣ ಮಾಡುತ್ತಿದ್ದ ಕ್ಯಾಮರಾಮ್ಯಾನ್ ನನ್ನು ತಡೆದು ದೂರಕ್ಕೆ ಕಳಿಸಿದ್ದಾರೆ. 

 ಹಲವು ಬಾರಿ ಮನವಿ ಮಾಡಿದರೂ ಕೇಳದ ಕ್ಯಾಮರಾಮ್ಯಾನ್ ನನ್ನು ದೂರ ಕಳಿಸಿದ ಅಬ್ದುಲ್ ಖಾದರ್ ಅವರ ವಿರುದ್ಧ

 ಸುದ್ದಿ ವಾಹಿನಿಯೊಂದು ಸುದ್ದಿ ಪ್ರಸಾರ ಮಾಡಿದ್ದು ಅವರು ಅಸಂಬದ್ಧ ಪದ ಪ್ರಯೋಗ ಮಾಡಿದ್ದಾರೆ ಎಂದು ಆರೋಪಿಸಿದೆ. ಆದರೆ ವೀಡಿಯೊದಲ್ಲಿ ಈ ಪದವನ್ನು ಅಬ್ದುಲ್ ಖಾದರ್ ಹೇಳಿರುವುದು ಕಂಡು ಬರುವುದಿಲ್ಲ. ಖಾದರ್ ವಿರುದ್ಧ ಸುಳ್ಳು ಆರೋಪ ಹೊರಿಸಿ ಅವರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ಮತ್ತು ಮಾನಹಾನಿ ಮಾಡಲಾಗುತ್ತಿದೆ. 

 

 

Leave a Reply

Your email address will not be published. Required fields are marked *