Realtime blog statisticsweb statistics
udupibits.in
Breaking News
ಉಡುಪಿ: ಕನಿಷ್ಠ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ನಗರಸಭೆ, ಜಿಲ್ಲಾಡಳಿತ, ರಾಜ್ಯ-ಕೇಂದ್ರ ಸರಕಾರ ಸಂಪೂರ್ಣ ವಿಫಲ !

ಕುಕ್ಕೆ ಕ್ಷೇತ್ರದ ಚಾರಿತ್ರಿಕ ಹಿನ್ನೆಲೆ- ಭಾಗ 20

* ಡಾ.ಮ.ಸು.ಅಚ್ಚುತ ಶರ್ಮಾ

# ಕುಕ್ಕೇಲಿಂಗ ಪದಕ್ಕೆ ಅನೇಕರು ಅನೇಕ ತರದ ಅರ್ಥ ಕಲ್ಪಿಸಿ ಈ ಮೊದಲಿನ ಕ್ಷೇತ್ರ ವರ್ಣನೆಗಳಲ್ಲಿ ಬರೆದಿರುತ್ತಾರೆ. ಈ ದೇವಳವು ಲಿಂಗ ಪೂಜೆಯನ್ನು ನಿಶೇಧಿಸುವ ಮಾಧ್ವರ ಆಡಳಿತೆಗೆ ಬಂದ ನಂತರ ಕುಕ್ಕೆ ಲಿಂಗವೆಂದರೆ ಕುಕ್ಕೆ ಕೌಚಿ ಹಾಕಿ ಅಡಗಿಸಿಟ್ಟ ಲಿಂಗಗಳೆಂದು ಅಪಾರ್ಥ ಕಲ್ಪಿಸಿರುವುದು ನಿಂದಾಸ್ಪದವಾಗಿದೆ.

ಕೆಲವರು ಕುಕ್ಕೆ ಲಿಂಗವೆಂದರೆ ಗುಹೆ ದ್ವಾರದಲ್ಲಿ ಪ್ರತಿಷ್ಟಿಸಿರುವ ಲಿಂಗವೆಂದೂ ಹೇಳಿರುವುದು ಇಲ್ಲಿ ಅಷ್ಟು ಸಮಂಜಸವಾಗಿ ಕಂಡುಬರುವುದಿಲ್ಲ. ನನ್ನ ಅಭಿಪ್ರಾಯ ಪ್ರಕಾರವೂ, ಇಲ್ಲಿಯ ಸನ್ನಿವೇಶಗಳಿಂದಲೂ ಶಬ್ದ ಮಣಿದರ್ಪಣ, ಕಿಟೆಲ್ ಡಿಕ್ಷೆನರಿಯಲ್ಲೂ ‘ಕುಕ್ಕೆ’ ಪದಕ್ಕೆ ‘ಕುಕ್ಷಿ’ ಎಂಬ ಸಂಸ್ಕೃತ ಶಬ್ದದ ತದ್ಬವವೆಂದೂ ಹೇಳಿದ ಪ್ರಕಾರವೂ, ”ಕುಕ್ಕೆ” ಎಂಬ ಪದಕ್ಕೆ ಹೊಟ್ಟೆ ( ) ಎಂದು ಅರ್ಥವಾಗುತ್ತದೆ.

”ಕುಕ್ಕೆ ಪಟ್ಟಣ”ವೆಂಬ ಮುಂಚಿನ ಹೆಸರಿಗೆ ಹೊಟ್ಟೆ ತುಂಬಿಸುವ ಪಟ್ಟಣವೆಂದೂ, ಕುಕ್ಕೆ ಲಿಂಗವೆಂದರೆ ಜನರ ಹೊಟ್ಟೆ ತುಂಬಿಸುವ ದೇವರೆಂದೂ ತಿಳಿಯಬಹುದಾಗಿದೆ.ಈ ಮೇಲೆ ಹೇಳಿದ ಜನರ ಅಂಬೋಣದಂತೆ ”ಕೊಪ್ಪರಿಗನ್ನ ಉಂಡೆವು”, ”ಅನ್ನದಾತ ಸುಬ್ಬಪ್ಪ” ಎಂಬ ಪದಗಳಿಗೂ ಅನ್ವರ್ಥ ಸರಿಬೀಳುತ್ತದೆ. ಇದರಿಂದಲೇ ಇಲ್ಲಿ ಅನ್ನದಾನವೂ, ಮಡೆ, ಮಡೆ ಸ್ನಾನವೂ ಹೆಚ್ಚು ಪ್ರಶಸ್ತಿ ಆಗಿದೆ.

ಅದೂ ಅಲ್ಲದೆ ಇನ್ನೊಂದು ದೃಷ್ಟಾಂತವಾಗಿ ಇಲ್ಲಿಯ ಶಾಲಿವಾಹನ ಶಕ 1587ರ ತಾಂಬ್ರ ಶಾಸನ ಒಂದರಲ್ಲಿ ”ಅನೇಕ ವರಪ್ರದ ನಿತ್ಯಾನ್ನದಾನ ವಿನೋದಿ ಕುಕ್ಕೆಲಿಂಗ ಬಿರುದಾಂತ ಸುಬ್ರಹ್ಮಣ್ಯೇಶ್ವರನಿಗೆ ಎಂದು ಉಲ್ಲೇಖಿಸಿ ಇರುವುದರಿಂದಲೂ, ಇಲ್ಲಿಯ ದೇವರಿಗೆ ”ಅನ್ನದಾನ ಸುಬ್ಬಪ್ಪ” ಎಂಬ ಬಿರುದು ಇರುವುದು ಕೂಡಾ ನೋಡುವಾಗ ಇಲ್ಲಿ ಅನಾದಿ ಕಾಲದಿಂದಲೂ ಅನ್ನದಾನವು ಬಹಳ ವಿಶೇಷವಾಗಿತ್ತು ಎಂದು ತಿಳಿಯಬೇಕಾಗುತ್ತದೆ.

ಮುಂದುವರಿಯುವುದು

Leave a Reply

Your email address will not be published. Required fields are marked *