Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಕುಕ್ಕೆ ಕ್ಷೇತ್ರದ ಚಾರಿತ್ರಿಕ ಹಿನ್ನೆಲೆ- ಭಾಗ 21

* ಡಾ.ಮ.ಸು.ಅಚ್ಚುತ ಶರ್ಮಾ

# ಶ್ರೀ ಶಂಕರ ಭಗವತ್ಪಾದರು ರಚಿಸಿದ ಶ್ರೀ ಸುಬ್ರಹ್ಮಣ್ಯ ಭುಜಂಗ ಪ್ರಯಾತ ಸ್ತೋತ್ರದಲ್ಲಿ ‘ಲಪನ್ದೇವ ಸೇನೇಶ ಭೂತೇಶ ಶೇಷಸ್ಪರೂಪಾನಿ ಭೂ ಕಾರ್ತಿಕೇಯಾನ್ನದಾತಃ’ ಎಂಬಲ್ಲಿ ಅನ್ನದಾತನೆಂತಲೂ, 15ನೇ ಶ್ಲೋಕದಲ್ಲಿ ‘ಭಜೆ ಕುಕ್ಕೆ ಲಿಂಗಂ’, 30ನೇ ಶ್ಲೋಕದಲ್ಲಿ ‘ನಮಃ ಕುಕ್ಕೆ ಲಿಂಗಾಯ ತಸ್ಮೈ ನಮಸ್ತೆ” ಎಂದು ಉಲ್ಲೇಖಿಸಿದುದನ್ನು ಕಾಣುವಾಗ ಆದಿ ಶಂಕರಾಚಾರ್ಯರ ಕಾಲದ ಹಿಂದೆಯೇ ಈ ಕ್ಷೇತ್ರವು ಅನ್ನದಾನಕ್ಕೆ ಪ್ರಸಿದ್ಧ ಪಟ್ಟ ಸ್ಥಳವಾಗಿತ್ತೆಂದು ವ್ಯಕ್ತವಾಗುತ್ತದೆ.

ಅದೂ ಅಲ್ಲದೆ ಈ ಕ್ಷೇತ್ರವು ಅನ್ನದಾನಕ್ಕೆ ಪ್ರಸಿದ್ಧ ಪಟ್ಟ ಸ್ಥಳವೆಂದು ವಿಷದೀಕರಿಸಲು ಇಲ್ಲಿ ಅಕ್ಷಯ ಪಾತ್ರವೆಂಬ ಒಂದು ಚಿನ್ನದ ಹೆಡೆಯುಳ್ಳ ಒಂದು ಸಟ್ಟುಗ ಇದೆ. ಇದನ್ನು ನಿತ್ಯದಲ್ಲೂ ಮಹಾ ಸಂತರ್ಪಣೆ ಕಾಲದಲ್ಲೂ ದೇವಳದ ಮಣೆಗಾರನು ವಿಧಿಯುಕ್ತವಾಗಿ ಪೂಜಿಸಿ ಅದಕ್ಕೆ 10 ಹಾನೆ ಅಕ್ಕಿ (ಹಾನೆ ಅಂದರೆ 1 ಸೇರಿಗೆ ಸ್ವಲ್ಪ ಕಮ್ಮಿ) ನೈವೇದ್ಯ ಮಾಡುವ ಪದ್ಧತಿ ಇತ್ತು.

ಸಾಧಾರಣ 1882ರ ವರೇಗೆ ಇಲ್ಲಿಯ ಮಣೆಗಾರರು ಸ್ಥಳೀಯ ಸ್ಮಾರ್ತ ಬ್ರಾಹ್ಮಣರಾಗಿದ್ದರು. ಆ ಹತ್ತು ಹಾನೆ ಅಕ್ಕಿಯ ನೈವೇದ್ಯವು ದೇವಸ್ಥಾನದ ಮೂಲ ಪುರುಷರಾದ ಅಲ್ಲಿಯ ಸ್ಮಾರ್ತ ಸ್ಥಾನಿಕ ಬ್ರಾಹ್ಮಣರಿಗೆ ಸಲ್ಲುತ್ತಿತ್ತು. 1882ರಲ್ಲಿ ದೇವಸ್ಥಾನದ ಆಡಳಿತೆ ವ್ಯಾಸತೀರ್ಥ ಸ್ವಾಮೀಯವರಿಗೆ ಬಂದ ನಂತರ ಸ್ಥಳೀಯ ಸ್ಮಾರ್ತ ಬ್ರಾಹ್ಮಣರಿಗೆ ಇದ್ದ ಮಣೆಗಾರ (ಮೆನೇಜರ್) ತನವು ನಿಂತುಹೋಯಿತು.

ಮೇಲೆ ಹೇಳಿದ 10 ಹಾನೆ ಅಕ್ಕಿ ನೈವೇದ್ಯವಲ್ಲದೆ ಮತ್ತು 30 ಹಾನೆ ಅಕ್ಕಿ ನೈವೇದ್ಯವು ದೇವರಿಗೆ ಆಗುತ್ತಿತ್ತು. ಅದರಿಂದ ಹೊರಗಿಂದ ಬಂದವರಿಗೂ ಸಂತರ್ಪಣೆ ಆಗುತ್ತಿತ್ತು. ಅಂತೂ ಆ ಸಮಯದಲ್ಲಿ ನಿತ್ಯ 40 ಹಾನೆ ಅಕ್ಕಿಯ ನೈವೇದ್ಯದ ಸಂತರ್ಪಣೆ ನಡೆಯುತ್ತಿತ್ತೆಂದು ತಿಳಿದುಬರುತ್ತದೆ.

ಮುಂದುವರಿಯುವುದು

Leave a Reply

Your email address will not be published. Required fields are marked *