Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಕುಕ್ಕೆ ಕ್ಷೇತ್ರದ ಚಾರಿತ್ರಿಕ ಹಿನ್ನೆಲೆ- ಭಾಗ 23

* ಡಾ.ಮ.ಸು.ಅಚ್ಚುತ ಶರ್ಮಾ

ಶ್ರೀ ಶೃಂಗೇರಿ ಶಾಖಾ ಮಠ

# ಈ ಶಾಖಾ ಮಠವು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಹೊರ ಅಂಗಣದ ಈಶಾನ್ಯ ಮೂಡುದಿಕ್ಕಿನಲ್ಲಿದೆ. ಈ ಮಠವನ್ನು ಈ ಕ್ಷೇತ್ರದಲ್ಲಿ ಶೃಂಗೇರಿ ಮಠವೆಂದೇ ಕರೆಯುತ್ತಾರೆ. ಇದು ಇರುವ ಸ್ಥಳದ ಸರ್ವೇ ನಂಬ್ರ ೮೨/೧೦ ಆಗಿದೆ. ಇದು ಅನಾದಿಯಿಂದ ಶೃಂಗೇರಿ ಮಠಕ್ಕೆ ಸೇರಿದ್ದಾಗಿದೆ.

ಈ ಮಠಕ್ಕೆ ಸುತ್ತು ಪೌಳಿಗಳಿದ್ದು ಮಧ್ಯದಲ್ಲಿ ಶ್ರೀ ಚಂದ್ರಮೌಳೇಶ್ವರ ದೇವರ ಗುಡಿ ಪಡು ಮುಖ ಮಾಡಿ ಇದೆ. ಈಗ ಮಠದ ವಿನಿಯೋಗಾದಿಗಳು ಶ್ರೀ ಸುಬ್ರಹ್ಮಣ್ಯ ದೇವರ ಆಡಳಿತೆಯವರಿಂದಲೇ ನಡೆದು ಬರುತ್ತದೆ. ಇದರಿಂದ ಈ ಮಠಕ್ಕೂ, ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೂ ಬಹಳ ಅನಾದಿಯಿಂದಲೇ ಸಂಪರ್ಕವಿತ್ತೆಂದು ನಿಶ್ಚಯಿಸಬಹುದಾಗಿದೆ. ಈ ಶಾಖಾ ಮಠದ ವಿಚಾರದಲ್ಲಿ ಬರೆಯುವಾಗ ಶ್ರೀ ಆದಿ ಶಂಕರರು ಮತ್ತು ಅವರ ಶೃಂಗೇರಿ ಮಠದ ಸ್ವಲ್ಪ ವಿವರಣೆಯು ಇಲ್ಲಿ ಪ್ರಸ್ತಾಪಿಸಲ್ಪಟ್ಟಿದೆ.

ಒಂದು ಕಾಲದಲ್ಲಿ ಈ ಭರತ ಖಂಡದಲ್ಲಿ ಹಿಂದುಗಳೊಳಗೆ ಶೈವರು, ವೈಷ್ಣವರು, ಶಾಕ್ತೇಯರು, ದಿವಾಕರವಾದಿಗಳು ಮತ್ತು ಗಣಪತ್ಯರು ಎಂಬೀತ್ಯಾದಿ ಅನೇಕ ಭೇದಗಳು ಏರ್ಪಟ್ಟು ಪರಸ್ಪರ ಜಗಳಗಳು ಉದ್ಭವಿಸಿದ್ದವು. ಇದರಿಂದಾಗಿ ಹೆಚ್ಚಿನ ಜನರು ಹಿಂದೂ ಧರ್ಮವನ್ನು ಬಿಟ್ಟು ಜೈನ ಮತ್ತು ಬೌದ್ಧ ಮತಕ್ಕೆ ಸೇರಿದುದರಿಂದ ಈ ದೇಶದಲ್ಲಿ ವೇದ ಧರ್ಮವಾದ ಹಿಂದೂ ಸನಾತನ ಧರ್ಮವೇ ನಶಿಸುತ್ತಿರುವ ಸಂದಿಗ್ಧ ಸಮಯದಲ್ಲಿ ಧರ್ಮ ರಕ್ಷಣೆಗಾಗಿ ಪರಮ ಶಿವನು ಕೇರಳದಲ್ಲಿ ನಂಬೂದರಿ ಬ್ರಾಹ್ಮಣರಾದ ಶಿವ ಗುರುವಿಗೆ ಆರ್ಯಾಂಬೆ ಎಂಬ ಧರ್ಮ ಪತ್ನಿಯ ಗರ್ಭದಲ್ಲಿ ಶಂಕರನೆಂಬ ಹೆಸರಿನಿಂದ ಅವತರಿಸಿದನು.

ಶಂಕರನು ಬಾಲ್ಯದಲ್ಲೆ ಸನ್ಯಾಸ ಧೀಕ್ಷೆ ವಹಿಸಿ ತನ್ನ ಎಳೆ ಪ್ರಾಯದಲ್ಲೇ ಶಟ್ಯಾಸ್ತ್ರ ಪಾರಂಗತನಾಗಿ ಶ್ರೀ ಶಂಕರಾಚಾರ್ಯರೆಂಬ ಹೆಸರಿನಿಂದ ದೇಶದಲ್ಲಿ ತುಂಬಿದ ಕುಮತಗಳನ್ನು ತನ್ನ ಅಮೋಘ ಪಾಂಡಿತ್ಯದಿಂದ ಖಂಡಿಸಿದರು. ಅವರು ತನ್ನ ಅಗಾಧ ತತ್ವ ಜ್ಙಾನದಿಂದ ಜನತೆಗೆ ಕರ್ಮಯೋಗ, ಭಕ್ತಿಯೋಗಗಳು, ಜ್ಞಾನಯೋಗದ ಸೋಪಾನಗಳೆಂದೂ, ‘ನಹಿ ಜ್ಞಾನೇನ ಸದೃಶಂ ಪವಿತ್ರ ಮಿಹವಿದ್ಯತೆ’ ಎಂಬ ಗೀತೋಕ್ತಿಯಂತೆ ಅವ್ಯಕ್ತನಾದ ಪರಮಾತ್ಮನನ್ನು ತಿಳಿಯಲು ಜ್ಞಾನವೇ ಸಾಧನವೆಂದೂ ಅಂತಹ ಪರಮಾತ್ಮನು ‘ಏಕಮೇವಅದ್ವಿತೀಯಂ’ ಎರಡಾಗಿರದೆ ಒಬ್ಬನೇ ಆಗಿದ್ದಾನೆಂದೂ, ಶಿವ, ವಿಷ್ಣು, ಗಣಪತಿ, ದುರ್ಗಾ ಇತ್ಯಾದಿ ದೇವತೆಗಳಲ್ಲಿ ಅಭೇದ ಭಾವನೆಯನ್ನು ಇಟ್ಟುಕೊಳ್ಳುವಂತೆಯೂ, ಜನರು ಹಿಂಸಾ ವೃತ್ತಿಯನ್ನು ಬಿಡುವಂತೆಯೂ, ತನ್ನ ಬೋಧನೆಯಿಂದ ತೋರಿಸಿಕೊಟ್ಟು ಜನರೊಳಗೆ ಐಕಮತ್ಯವನ್ನು ಉಂಟುಮಾಡಿದ್ದರು.

ಆ ಸಂದರ್ಭದಲ್ಲಿ ಅವರ ಅವತಾರವಾಗದೆ ಇರುತ್ತಿದ್ದರೆ ನಾವೆಲ್ಲರೂ ಜೈನರಾಗಿಯೋ, ಬೌದ್ಧರಾಗಿಯೋ ಅಥವ ಆಮೇಲೆ ನಮ್ಮ ದೇಶಕ್ಕೆ ಬಂದ ಮುಸಲ್ಮಾನ್ ವಾ, ಕ್ರೈಸ್ತರಾಗಿಯೋ ಇರಬೇಕಿತ್ತು. ನಮ್ಮ ಸನಾತನ ಧರ್ಮದ ಸನಾನತೆಯು ಅವರು ಉಪದೇಶಿಸಿದ ಅಭೇದವನ್ನು ಸಾರುವ ಅದ್ವೈತ ತತ್ವದಿಂದಲೇ ಉಳಿಯಿತು.

ಮುಂದುವರಿಯುವುದು

Leave a Reply

Your email address will not be published. Required fields are marked *