Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಹಿರಿಯ ಸಮಾಜವಾದಿ, ನ್ಯಾಯವಾದಿ, ಲೇಖಕ ಎಂ.ಜೆ.ಹೆಗ್ಡೆ ಮುಂಬೈ ಅವರಿಗೆ ‘ಉಡುಪಿಬಿಟ್ಸ್ ಶತಮಾನದ ಶಕ್ತಿ’ ಗೌರವಾರ್ಪಣೆ

ಉಡುಪಿ: ಹಿಂದೆ ಸಕ್ರೀಯವಾಗಿದ್ದ ಸಮಾಜವಾದಿ ಪಾರ್ಟಿಗಳ ಮತ್ತು ಚಳುವಳಿಯ ಅವನತಿಗೆ ಇವುಗಳಲ್ಲಿನ ಮುಂಚೂಣಿ ನಾಯಕರೇ ಕಾರಣ. ಪ್ರಸ್ತುತ ರಾಜಕಾರಣವೇ ಹೊಲಸಾಗಿದೆ. ಸತ್ಯ ವಿಚಾರಗಳನ್ನು ಹೇಳುವವರ ಸಂಖ್ಯೆ ಕಡಿಮೆಯಾಗಿದೆ. ಹೇಳುವವರು ಹೇಳಿದರೂ ಕೇಳುವವರು ಮತ್ತು ನಂಬುವವರು ಇಲ್ಲದಂತ ಪರಿಸ್ಥಿತಿ ಸೃಷ್ಟಿಸಲಾಗಿದೆ. ದೇಶದ ರಾಜಕೀಯದ ಬಗ್ಗೆ ಯೋಚಿಸುವಾಗ ವಿಷಾದವಾಗುತ್ತದೆ ಎಂದು ಹಿರಿಯ ಸಮಾಜವಾದಿ ಹೋರಾಟಗಾರ, ಮುಂಬೈ ಹೈಕೋರ್ಟ್ ನ್ಯಾಯವಾದಿ, ಮುಂಬೈ ಮಹಾನಗರಪಾಲಿಕೆಯ ಮಾಜಿ ಸದಸ್ಯ, ಲೇಖಕ ಎಂ. ಜೆ. ಹೆಗ್ಡೆ (ಮೂಡ್ಲಕಟ್ಟೆ ಜಗನ್ನಾಥ) ಅವರು ಹೇಳಿದರು.

ಉಡುಪಿಬಿಟ್ಸ್ ಡಾಟ್ ಇನ್ ಜಾಲತಾಣ ಸಂಸ್ಥೆಯು ಕೊಡಮಾಡಿದ ”ಉಡುಪಿಬಿಟ್ಸ್ ಶತಮಾನದ ಶಕ್ತಿ” ಗೌರವಾರ್ಪಣೆ ಸ್ವೀಕರಿಸಿ ಅವರು ಮಾತನಾಡುತ್ತಿದ್ದರು.

ಮುಂಬೈ ಹೈಕೋರ್ಟ್‌ನ ಹಿರಿಯ ನ್ಯಾಯವಾದಿ, ಮುಂಬೈ ಮಹಾನಗರಪಾಲಿಕೆಯ ಮಾಜಿ ಸದಸ್ಯ, ಹಿರಿಯ ಸಮಾಜವಾದಿ ಹೋರಾಟಗಾರ, ಕಾರ್ಮಿಕ ಮುಂದಾಳು, ಲೇಖಕರಾದ ಎಂ. ಜೆ. ಹೆಗ್ಡೆ ಅವರಿಗೆ ಖ್ಯಾತ ಮನೋವೈದ್ಯರಾದ ಡಾ. ಪಿ. ವಿ. ಭಂಡಾರಿಯವರು ಶತಮಾನದ ಶಕ್ತಿ ಗೌರವಾರ್ಪಣೆಯನ್ನು ಸಲ್ಲಿಸಿದರು.

ಪತ್ರಕರ್ತ, ಸಾಮಾಜಿಕ ಕಾರ್ಯಕರ್ತ ಅಶ್ವಿನ್ ಲಾರೆನ್ಸ್ ಮೂಡುಬೆಳ್ಳೆ ಸ್ವಾಗತಿಸಿದರು. ಉಡುಪಿಬಿಟ್ಸ್ ಡಾಟ್ ಇನ್ ಸಂಪಾದಕ ಶ್ರೀರಾಮ ದಿವಾಣ ವಂದಿಸಿದರು.

Leave a Reply

Your email address will not be published. Required fields are marked *