Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಕುಕ್ಕೆ ಕ್ಷೇತ್ರದ ಚಾರಿತ್ರಿಕ ಹಿನ್ನೆಲೆ- ಭಾಗ 24

* ಡಾ. ಮ. ಸು. ಅಚ್ಚುತ ಶರ್ಮಾ

# ಆದಿ ಶಂಕರರು ಸುಬ್ರಹ್ಮಣ್ಯ ಕ್ಷೇತ್ರವನ್ನು ಸಂದರ್ಶಿಸಿ ಅಲ್ಲಿಯ ಸ್ಥಳೀಯ ಮತ್ತು ಹೊರಗಿನಿಂದ ಬಂದ ಹಿರಣ್ಯಗರ್ಭವಾದಿ, ದಿವಾಕರವಾದಿ ಮೊದಲಾದ ಬ್ರಾಹ್ಮಣರನ್ನು ವಾದದಲ್ಲಿ ಗೆದ್ದು ಅವರನ್ನೆಲ್ಲಾ ತನ್ನ ಶಿಷ್ಯರನ್ನಾಗಿ ಮಾಡಿಕೊಂಡರೆಂದೂ ಶ್ರೀ ವಿದ್ಯಾರಣ್ಯ ವಿರಚಿತ ಶ್ರೀ ಶಂಕರ ವಿಜಯದ ಧನಪತಿ ಸೂರಿ ವಿರಚಿತ ”ಡಿಂಡಿಮಾಖ್ಯ” ಟೀಕೆಯ ಪುಟ ಸಂಖ್ಯೆ ೫೪೪ರಲ್ಲಿ ವ್ಯಕ್ತವಾಗುತ್ತದೆ. ಅಲ್ಲದೆ ಆನಂದಗಿರಿ ವಿರಚಿತ ಶ್ರೀ ಶಂಕರ ವಿಜಯದಲ್ಲೂ ಅದೇ ವಿವರಣೆಯನ್ನು ವ್ಯಕ್ತಪಡಿಸಿರುತ್ತಾರೆ. ಮಾಧವೀಯ ಶಂಕರ ವಿಜಯದ ಸ್ವಲ್ಪ ಅಂಶವನ್ನು ಇಲ್ಲಿ ಪ್ರಕಟಿಸಲ್ಪಟ್ಟಿದೆ.

”ಸ್ನಾತ್ವಾ ಕುಮಾರಧಾರಾಯಾಂ ನದ್ಯಾಂ ಶಿಷ್ಯ ಸಮನ್ವಿತಃ
ಭಕ್ತ್ಯಾ ಸಂಪೂಜಯಾಮಾಸ ಷಣ್ಮುಖಂ ಶೇಷರೂಪಿಣಂ
ಕಾಷಾಯ ವಸ್ತ್ರ ದಂಡಾಢ್ಯಃ ಕಮಂಡಲು ಲಸತ್ಕರಃ
ಭೂತಿ ಭೂಷಿತ ಸರ್ವಾಂಗೋ ಬಭೌರುದ್ರ ಇವಸ್ವಯಂ
ನಾನಾ ದೇಶಸ್ಥ ವಿಪ್ರೌಘಾಃ ಸುಬ್ರಹ್ಮಣ್ಯಂ ಸಮಾಗತಾಃ
ದೃಷ್ಟ್ವಾತಂ ಶಂಕರಾಚಾರ್ಯಂ ಇದಮೂಚುಃ ಸುವಿಸ್ಮಿತಾಃ

ದ್ವಿಜಾಃ ವಯಂ ಬ್ರಹ್ಮಕುಲೋದ್ಭವಾಃಪ್ರಭೋ ಮನುಪ್ರಭೃತ್ಯುಕ್ತ ಸುಕರ್ಮ ತತ್ಪರಾಃ ಹಿರಣ್ಯ ಗರ್ಭ ಅರ್ಚನ ಲಬ್ದ ಮಾನಸ ಪ್ರಶುದ್ಧಯಃ ಸ್ಥೈರ್ಯ ಮುಪಾಗತಾಸ್ತಥಾಹಿ
”ಹಿರಣ್ಯಗರ್ಭಃ ಸಮವರ್ತತಾಗ್ರೇಭೂತಸ್ಯ ಜಾತಃಪತಿರೇಕ ಆಸೀತ್
ಸದಾಧಾರ ಪ್ರಥಿವೀಂ ದ್ಯಾಮುತೇಮಾಂ ಕಸ್ಮೈ ದೇವಾಯ ಹವಿಷಾವಿಧೇಮ”
ಇತ್ಯಾದಿ ಮಂತ್ರಾತ್ಸಕಲಸ್ಯ ಕರ್ತಾ ಬ್ರಹ್ಮಾ ತಥಾಪಾಲಕಃ ಏಷ ಏವ
ಲಯಸ್ಯ ಕರ್ತಾ ನಿಖಿಲೋತ್ತಮಶ್ಚ ಸರ್ವಾಧಿಕಾನಂದಕ ರೂಪ ಉಕ್ತಃ
ಸೇವಸೃಷ್ಟಾ ನಿಖಿಲಂ ಜಗತ್ಪ್ರಭು ಪ್ರವಿಶ್ಯ ಸರ್ವಾತ್ಮತಯಾ ಸ್ಥಿತೋವೈ
ತದೈಕ್ಷತೇತ್ಯಾದಿವಚೋಭಿರೀತಃ ಕರೋತಿ ವಿಷ್ಣುಂಚ ಶಿವಂ ಭುಜಾಭ್ಯಾಂ
ತದೀಯ ಭಕ್ತಾಃ ಕಿಲಯೋ ಗಿನಷ್ಠಾಃ ಕರ್ಮಸ್ಥಿತಾಃ ಕೂರ್ಚಕಮಂಡಲು ಶ್ರಿತಾಃ
ವಯಂ ಯತಿಂ ವೀಕ್ಷ್ಯ ಭವಂತ ಮದ್ಧಾ ಜಾತಾಃ ಕೃತಾರ್ಥಃ ಶ್ರುಣು ಭೋಸ್ಥಥಾಪಿ
ವಚೋಸ್ಮದೀಯಂ ಭಗವನ್ ಪ್ರಯೋಜನಂ ಕಿಮಸ್ತ್ಯಭೇದೇನ ಯತಶ್ಚತುರ್ಮುಖಾತ್
ಜನಿಂಗತೋ ಜೀವಗಣಾಃ ಸ್ವಕರ್ಮಣಾಃ ಪುನಃ ಪುನಃ ಸಂಸೃತಿ ಮೇತಿ ದುಃಖದಾಂ
ತತೋಲಯೇ ಬ್ರಹ್ಮಣ ಏವ ಕುಕ್ಷೌ ಲಯಂ ಪ್ರಯಾತ್ಯೇಷಲಯಸ್ಯಕಾಲೇ
ಮೋಕ್ಷೆನ್ಯಥಾ ಬ್ರಹ್ಮವಿ ದೇಷ ಯಾತಿ ಪರಂಪದಂ ಬ್ರಹ್ಮಣ ಏವಲೋಕಂ
ತಸ್ಮಾದ್ಭವಾನ್ದಂಡ ಕಮಂಡುಲುಶ್ರಿತಸ್ತಲ್ಲೋಕ ಯೋಗ್ಯೋಯತಿ ಶೇಖರೋಗುರುಃ
ಇತ್ಯುಕ್ತ ಆಚಾರ್ಯ ಉವಾಚ ಶಂಕರೋ ಬ್ರಹ್ಮಾದಿ ಭೂತಾನಿಯತೋ ಭವಂತಿ ತಂ
ಜ್ಞಾತಾತ್ವಾ ವಿಮುಕ್ತಿರ್ಭವತೀತಿ ಹಿ ಶ್ರುತೌ ಪ್ರೋಕ್ತಂತತಸ್ತಸ್ಯ ವಿಬೋಧಕಾರಣಂ
ವೇದಾಂತ ವಾಕ್ಯ ಶ್ರವಣಾದಿಕಂ ಸದಾಕಾರ್ಯಂ ವಿಮೋಕ್ಷೆಹಿ ಲಯೋನ ಕೀರ್ತಿತಃ
ಸುಷುಪ್ತಿ ತುಲ್ಯೋ ನಚಲಭ್ಯತೇ ಪರಃ ಕಾರ್ಯಸ್ಯಹಿ ಬ್ರಹ್ಮಣ ಏವ ಸೇವನಾತ್
ಶ್ರುತ್ವೇವಮಾಚಾರ್ಯ ಮುಖಾದ್ವಿಹಾಯ ತೇ ಚಿಹ್ನಾನಿ ಶುದ್ಧಾತ್ಮ ವಿಬೋಧ ತತ್ಪರಾಃ
ಶಿಷ್ಯಾ ಬಭೂವುಸ್ತತ ಅಗತಾಸ್ತಂ ಪ್ರೋಚುರ್ಗರುಂ ರ್ವಹ್ನಿಮತಾನುವರ್ತಿನಃ”

ಇತ್ಯಾದಿ ಮಾಧವಿಯ ಅಂದರೆ ವಿದ್ಯಾರಣ್ಯ ವಿರಚಿತ ಶಂಕರ ವಿಜಯದಲ್ಲೂ ಅಲ್ಲದೆ ಶ್ರೀ ಸುಬ್ರಹ್ಮಣ್ಯಕ್ಕೆ ಆದಿ ಶಂಕರರು ಬಂದ ವಿಷಯ ಶ್ರೀ ಶೃಂಗೇರಿ ಮಠೀಯ ಕಾಶೀ ಶ್ರೀ ಲಕ್ಷ್ಮಣ ಶಾಸ್ತ್ರೀಗಳವರಿಂದ ವಿರಚಿತ ಗುರುವಂಶು ಕಾವ್ಯವೆಂಬ ಗ್ರಂಥದಲ್ಲೂ

ತತಃ ಸುಬ್ರಹ್ಮಣ್ಯಾದ್ಯಮರ ನಿಲಯೇಷು ಪ್ರವಿಚರನ್
ತತಃ ಸ್ವೈರಂ ಹರ್ಷಾದಪಿ ಜನಪದಾನ್ ತೌಲವಮುಖಾನ್
ಪವಿತ್ರೀ ಕುರ್ಮಾಣಃ ಪರಶಿವ ಇವಾತೇಷ ವಿನುತೋ
ಮತಿಃ ಶ್ರೀ ಸಾಮ್ರಾಜ್ಯೆ ವ್ಯಜಯತ ಮಹಾನ್ ಶಂಕರಗುರುಃ

ತೌಲವ ದೇಶದ ಸುಬ್ರಹ್ಮಣ್ಯ ಮೊದಲಾದ ಸ್ಥಳಗಳಲ್ಲಿ ಶ್ರೀ ಶಂಕರ ಗುರುಗಳು ಪರಶಿವನಂತೆ ಸಂಚರಿಸಿದರೆಂತಲೂ ಉಲ್ಲೇಖಿಸಿರುವುದರಿಂದ ಆದಿ ಶಂಕರರು ಆ ಕ್ಷೇತ್ರಕ್ಕೆ ಬಂದು ಆ ಕ್ಷೇತ್ರದಲ್ಲಿ ಆಗ ವಾಸವಾಗಿದ್ದ ಮತ್ತು ಹತ್ತಿರದ ಸ್ಥಳಗಳಿಂದ ಅಲ್ಲಿಗೆ ಬಂದಿದ್ದ ಬ್ರಾಹ್ಮಣರನ್ನು ತನ್ನ ಶುದ್ಧಾದ್ವೈತ ಜ್ಞಾನ ಬೋಧನೆಯಿಂದ ಅದ್ವೈತಿಗಳನ್ನಾಗಿ ಮಾಡಿದರೆಂದೂ, ಅಲ್ಲದೆ ಅವರು ಸ್ಮಾರ್ತಾಚಾರ ಪ್ರಕಾರದ ಪಂಚಪೂಜಾವಿಧಿಯನ್ನು ಒಪ್ಪಿಕೊಂಡು ಅವರು ಆದಿ ಶಂಕರರ ಶಿಷ್ಯರಾದರೆಂದೂ ಸ್ಪಷ್ಟವಾಗುತ್ತದೆ.

ಇದಕ್ಕೆ ನಿದರ್ಶನವಾಗಿ ಶ್ರೀ ಸುಬ್ರಹ್ಮಣ್ಯ ದೇವರ ಒಳ ಅಂಗಣದ ಎಡಭಾಗದಲ್ಲಿ ಅಂದರೆ ಶ್ರೀ ಶೃಂಗೇರಿ ಶಾಖಾ ಮಠಕ್ಕೆ ಎದುರಾಗಿ ಇರುವ ಉಮಾಮಹೇಶ್ವರ ಗುಡಿಯಲ್ಲಿ ಈಗಲೂ ಆದಿತ್ಯ, ಅಂಬಿಕಾ, ವಿಷ್ಣು, ಗಣಾನಾಥ, ಮತ್ತು ಮಹೇಶ್ವರರೆಂಬ ಐದು ದೇವತೆಗಳ ವಿಗ್ರಹಗಳನ್ನು ಪಂಚ ಪೂಜಾ ವಿಧಾನದಿಂದ ಅರ್ಚಿಸುವುದನ್ನು ನಾವು ಈಗಲೂ ಕಾಣಬಹುದು. ಅಲ್ಲದೆ ಈ ಶಾಖಾ ಮಠದಲ್ಲಿ ಯತಿಗಳೊಬ್ಬರು ಪೂರ್ವದಲ್ಲಿ ಇದ್ದರೆಂದೂ ಪ್ರತೀತಿ ಇದೆ.

ಮುಂದುವರಿಯುವುದು

Leave a Reply

Your email address will not be published. Required fields are marked *