Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಕಾಪು ಹೋಬಳಿಯ ಪಹಣಿಗಳ ವಿತರಣೆ ಉಡುಪಿಯಲ್ಲಿ ಸ್ಥಗಿತ: ಸರಕಾರದಿಂದ ಜನರಿಗೆ ಹೊಸ ಸಮಸ್ಯೆಯ ಕೊಡುಗೆ !

ಉಡುಪಿ: ಕಾಪು ಹೋಬಳಿ (ತಾಲೂಕು)ಯ ಎಲ್ಲಾ ಗ್ರಾಮಗಳಿಗೆ ಸಂಬಂಧಿಸಿದ ಪಹಣಿ (ಆರ್.ಟಿ.ಸಿ.)ಗಳೂ ಇದುವರೆಗೂ ಉಡುಪಿ ತಾಲೂಕು ತಹಶೀಲ್ದಾರರ ಕಚೇರಿಯ ಭೂಮಿ ಕೇಂದ್ರದಲ್ಲಿ ಸಾರ್ವಜನಿಕರಿಗೆ ಲಭ್ಯವಾಗುತ್ತಿತ್ತು. ಆದರೆ, ಇದೇ ಜೂನ್ ಒಂದರಿಂದ ಕಾಪು ಹೋಬಳಿಗೆ ಸೇರಿದ ಗ್ರಾಮಗಳ ಪಹಣಿಗಳನ್ನು ಉಡುಪಿ ಭೂಮಿ ಕೇಂದ್ರದಲ್ಲಿ ನೀಡುವ ಪ್ರಕ್ರಿಯೆಯನ್ನು ಕಂದಾಯ ಸ್ಥಗಿತಗೊಳಿಸಲಾಗಿದೆ. ಇದರಿಂದಾಗಿ ಹಲವರಿಗೆ ಸಮಸ್ಯೆ ಸೃಷ್ಟಿಯಾಗಿದೆ.

ಇನ್ನು ಮುಂದೆ ಕಾಪು ಹೋಬಳಿಗೆ ಸೇರಿದ ಎಲ್ಲಾ ಗ್ರಾಮಗಳ ಜನರೂ ತಮ್ಮ ಪಹಣಿಗಳನ್ನು ಕಾಪು ಭೂಮಿ ಕೇಂದ್ರದಿಂದ ಪಡೆದುಕೊಳ್ಳಬೇಕು ಮತ್ತು ಯಾವುದೇ ಅರ್ಜಿಗಳನ್ನು ಕಾಪು ಭೂಮಿ ಕೇಂದ್ರದಲ್ಲಿಯೇ ಸಲ್ಲಿಸಬೇಕು ಎಂದು ಕಂದಾಯ ಇಲಾಖೆ ಸಾರ್ವಜನಿಕ ಪ್ರಕಟಣೆ ನೀಡಿದೆ.

ಸಾರ್ವಜನಿಕರಿಗೆ ಸಮಸ್ಯೆ

ಕಂದಾಯ ಇಲಾಖೆಯ ಈ ಜನವಿರೋಧಿ ನಿರ್ಧಾರದಿಂದಾಗಿ ಕಾಪು ಹೋಬಳಿಯ ಬೆಳ್ಳೆ ಮತ್ತು ಇತರ ಕೆಲವು ಗ್ರಾಮಗಳ ಜನರಿಗೆ ತೀವ್ರ ತೊಂದರೆ ಪರಿಣಮಿಸಿದೆ. ಬೆಳ್ಳೆ ಸಹಿತ ಇತರ ಕೆಲವು ಗ್ರಾಮಗಳನ್ನು ಉಡುಪಿ ತಾಲೂಕಿನಿಂದ ಬೇರ್ಪಡಿಸಿ ನೂತನ ಕಾಪು ತಾಲೂಕಿಗೆ ಸೇರಿಸುವ ಮೂಲಕ ಹಿಂದಿನ ಕಾಂಗ್ರೆಸ್ ಸರಕಾರ ಮತ್ತು ಅಂದಿನ ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಮಾರ್ ಸೊರಕೆ ನಾಗರೀಕರಿಗೆ ತೊಂದರೆಯನ್ನು ಉಂಟುಮಾಡಿದ್ದರು. ಈ ಜನ ವಿರೋಧಿ ಕ್ರಮ ತೆಗೆದುಕೊಂಡ ಬಳಿಕ ನಡೆದ ಚುನಾವಣೆಯಲ್ಲಿ ಸೊರಕೆಯವರು ಸೋತರು ಎನ್ನುವುದು ಬೇರೆ ವಿಷಯ.

ಸರ್ವರ್ ಸಮಸ್ಯೆ

ಕಾಪು ಹೋಬಳಿಗೆ ಸೇರಿದ ಪಹಣಿಗಳನ್ನು ಉಡುಪಿ ಭೂಮಿ ಕೇಂದ್ರದಲ್ಲಿ ನೀಡುವುದನ್ನು ಸ್ಥಗಿತಗೊಳಿಸಿದರೆ ಹಲವರಿಗೆ ತೊಂದರೆಯಾಗುತ್ತದೆ ಎಂದು ಹೇಳಿದಾಗ ಉಡುಪಿಯ ಸೈಬರ್ ಗಳಲ್ಲಿ ಪಹಣಿಗಳು ಲಭ್ಯ, ಸೈಬರ್ ಗೆ ಹೋಗಿ ಅಲ್ಲಿಂದಲೂ ಪಡೆದುಕೊಳ್ಳಬಹುದಲ್ವ ಎಂಬ ುತ್ತರ ರೂಪದ ಪ್ರಶ್ನೆ ಸಂಬಂಧಿಸಿದವರಿಂದ ಥಟ್ಟನೆ ಬಂದುಬಿಡುತ್ತದೆ. ಆದರೆ, ಸೈಬರ್ ಗಳಲ್ಲಿ ಪಹಣಿಗಳನ್ನು ಪಡೆದುಕೊಳ್ಳಲು ಯಾವತ್ತೂ ಸರ್ವರ್ ಸಮಸ್ಯೆ ಕಾಡುತ್ತಿರುವುದು ಪಹಣಿ ಪಡೆದುಕೊಳ್ಳಲು ಸೈಬರ್ ಗಳಿಗೆ ಹೋದ, ಹೋಗುವವರ ಸ್ವಂತ ಅನುಭವವಾಗಿದೆ.

ರಾಜ್ಯ ಸರಕಾರ ಮತ್ತು ಉಡುಪಿ ಜಿಲ್ಲಾಡಳಿತ ದಿನ ಕಳೆದಂತೆ ಜನಸ್ನೇಹಿಯಾಗುವ ಬದಲು ಜನವಿರೋಧಿಯಾಗುತ್ತಿರುವುದಂತೂ ಸತ್ಯ. ನಾಗರೀಕರ ಸಮಸ್ಯೆಗಳನ್ನು ಪರಿಹರಿಸಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕಾದ ಸರಕಾರ, ಜಿಲ್ಲಾಡಳಿತ ನಾಗರೀಕರಿಗೆ ಹೊಸ ಹೊಸ ಸಮಸ್ಯೆಗಳನ್ನು ಕೊಡುಗೆಯಾಗಿ ನೀಡುತ್ತಿದ್ದು ಸಾರ್ವಜನಿಕರ ಹಿಡಿಶಾಪಕ್ಕೆ ಗುರಿಯಾಗುತ್ತಿದೆ. ಆದರೆ ಅಧಿಕಾರಿಗಳು ಜನರಿಂದ ದೂರವಾಗಿ, ಜನರ ಕಷ್ಟಗಳನ್ನು ಅರ್ಥ ಮಾಡಿಕೊಳ್ಳದೆ ಎಸಿ ರೂಮಿನಲ್ಲಿ ಕುಳಿತು ನಿಷ್ಕಾಳಜಿ ಪ್ರದರ್ಶನ ಮುಂದುವರಿಸಿದ್ದಾರೆ.

Leave a Reply

Your email address will not be published. Required fields are marked *