Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಶ್ರೀರಾಮ ದಿವಾಣರ ಕೆಲವು ಹನಿಗಳು

# ಪುರಾಣಗಳಲ್ಲಿ

ರಾಕ್ಷಸರೆಂದು

ಬಿಂಬಿಸಲ್ಪಟ್ಟವರು

ರಾಕ್ಷಸರಲ್ಲ.

ಈಗ ಸಾವನ್ನು

ಸಂಭ್ರಮಿಸುವವರು

ಧ್ವೇಷವನ್ನೇ

ಉಸಿರಾಡುವವರು

ಇದಾರಲ್ಲ

ಇವರೇ ನಿಜ ರಾಕ್ಷಸರು

ಅನುಮಾನವೇ ಇಲ್ಲ !

# ತಂದೆಯ

ಆಜ್ಙೆಯಂತೆ

ತಾಯಿಯನ್ನೇ

ಕೊಂದ

ಅನಾಗರೀಕ

ಜನರಿಗೆ

ದೇವರಾದ !

# ಭೂಮಿಯೊಳಗೆ ಹೂತ್

ಹಾಕಿದೆವು ಪ್ಲಾಸ್ಟಿಕ್ ವಿಷ

ಆಗ್ನಿಗೂ ಆಹುತಿ ಕೊಟ್ಟೆವು

ಪ್ಲಾಸ್ಟಿಕ್ ವಿಷ

ನೀರಿಗೂ ಬೆರೆಸಿದೆವು

ಪ್ಲಾಸ್ಟಿಕ್ ವಿಷ

ಗಾಳಿಗೂ, ಆಕಾಶಕ್ಕೂ

ನೀಡಿದ್ದು ವಿಷ

ವರುಣನ ಮುನಿಸು

ಆಗಲಿದೆ ರಾಕ್ಷಸ

ಮಾನವಗೆ ಪಾಷ !

# ಮಂಗನ ಕೈಲಿ

ಮಾಣಿಕ್ಯ ಕೊಟ್ರಿ !

ಪ್ರಕೃತಿಯ

ಮುನಿಸ್ರಿ ?

# ಹೆಚ್ಚು ಹೆಚ್ಚು ಅಂಕ

ಗಳಿಸೋದೆ ಇಂದು

ಶಿಕ್ಷಣದ ಉದ್ಧೇಶ

ಜೀವನ ಕೌಶಲ್ಯ, ಆತ್ಮವಿಶ್ವಾಸ

ಧೈರ್ಯವೇ ಹಿಂದೆ

ಶಿಕ್ಷಣದ ಸದುದ್ಧೇಶ

# ವೀರಪ್ಪನ್ ಸಹ

ಮಾಡಿದ್ದಾನೆ

ದಂತ ಕಳ್ಳತನ, ಕೊಲೆಗಳ

ಜೊತೆ ಸಮಾಜಸೇವೆ !

ದುರುದ್ಧೇಶದ

ಸಮಾಜಸೇವೆಯ

ಅರಿಯದೇ

ಕೊಂಡಾಡಿದೊಡೆ

ಮಾರಕವಾದೀತು

ದೇಶದ ಹವೆ !

# ಹಿಂಸೆ

ಧ್ವೇಷಗಳ

ಬೀಜ ಬಿತ್ತಿದೆಡೆ

ಇವುಗಳದೇ

ಮರ ಬೆಳೆದೀತು

ಪ್ರೀತಿ ವಿಶ್ವಾಸಗಳ

ಬೀಜ ಬಿತ್ತಿದೊಡೆ

ಸೌಹಾರ್ದ ಭಾರತ

ಉಳಿದೀತು !

# ಮಹಾತ್ಮಾ ಗಾಂಧೀಜಿಯವರ

ಸ್ವದೇಶಿ-ಸ್ವರಾಜ್ಯ ಚಿಂತನೆ

ಒಪ್ಪಿ ನಡೆದರೆ

ದೇಶದಲ್ಲಿ ಶಾಂತಿ

ಜನಕ್ಕೆ ನೆಮ್ಮದಿ

ಸಂಘ ದಕ್ಷದ

ವಿದೇಶೀ ಪ್ರಣೀತ

ರಾಷ್ಟ್ರೀಯತಾ ನೀತಿ

ಬೆಂಬಲಿಸಿ ಗೆಲ್ಲಿಸಿದರೆ

ಅಶಾಂತಿ-ಹಿಂಸಾ

ಬದುಕಿಗೆ ನಾಂದಿ.

# ಕೇಂದ್ರದ ಮೋದಿ

ಸರಕಾರದಿಂದ

ದೇಶದಲ್ಲಿ ಹಿಂದಿ ಹೇರಿಕೆ

ಹುನ್ನಾರ ವಿಫಲ

ವಿವಿಧ ಭಾಷೆ,

ವೈವಿಧ್ಯ ಸಂಸ್ಕೃತಿಯ

ಒಕ್ಕೂಟದ ದೇಶವೆಂಬ

ಅರಿವಿನ ಕೊರತೆಯ ಫಲ !

# ಶೋಭಾಯಾತ್ರೆಯಲಿ

ಕಲಶ ಹಿಡಿದು

ನಡೆಯಲು

ಭಜನೆ ಮಾಡುತ್ತಾ

ಕುಣಿದಾಡಲು

ನಾವೆಲ್ಲರೂ ರೆಡಿ

ಕುಡಿಯುವ ನೀರಿನ

ಹಕ್ಕಿನ  ಹೋರಾಟಕ್ಕೆ

ಮಾತ್ರ

ಅದೆಲ್ಲ ಬೇಡ ಬಿಡಿ !

# ಧ್ವೇಷವನ್ನೇ

ಉಸಿರಾಡುವ ಜನರಿಗೆ

ಬೇರೇನೂ ಕಾಣುವುದಿಲ್ಲ

ಬೇರೇನೂ ಕೇಳುವುದಿಲ್ಲ

ವಾಸ್ತವದ ಅರಿವಾಗುವುದಿಲ್ಲ

ಸತ್ಯ ಬೇಡವೇ ಬೇಡ

ಪರಿಣಾಮ, ದೇಶದ

ಅಭಿವೃದ್ಧಿ ರಥ ಹಿಂದಕ್ಕೆ

ಎಳೆಯುವವರಿಗೆ ಜನಬೆಂಬಲ !

  • ಶ್ರೀರಾಮ ದಿವಾಣ

Leave a Reply

Your email address will not be published. Required fields are marked *