Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಕುಕ್ಕೆ ಕ್ಷೇತ್ರದ ಚಾರಿತ್ರಿಕ ಹಿನ್ನೆಲೆ- ಭಾಗ 27

* ಡಾ. ಮ. ಸು. ಅಚ್ಚುತ ಶರ್ಮಾ, ಮಂಗಳೂರು.

# ಈ ಜಗದ್ಗುರು ಎಂಬ ಪದದ ಅರ್ಥವನ್ನು ಶ್ರೀ ಶಂಕರರು ತನ್ನ ಗುರು ಶ್ರೀ ಗೋವಿಂದ ಭಗವತ್ಪಾದರನ್ನು ಪ್ರಥಮ ದರ್ಶನ ಮಾಡಿದ ಸಮಯದಲ್ಲಿ ಶ್ರೀ ಗೋವಿಂದ ಭಗವತ್ಪಾದರು ”ನೀನು ಯಾರು ?” ಎಂದು ಶ್ರೀ ಶಂಕರರನ್ನು ಪ್ರಶ್ನಿಸಿದುದಕ್ಕೆ ಶ್ರೀ ಶಂಕರರು ”ದಶಶ್ಲೋಕೀ” ಎಂಬ ನಿರ್ವಾಣ ದಶಕವೆಂಬ ಶ್ಲೋಕಗಳಿಂದ ನಾನು ಯಾರು ? ಎಂಬುದನ್ನು ಈ ರೀತಿ ವಿವರಿಸಿರುತ್ತಾರೆ.

ನ ಭೂಮಿ ರ್ನತೋಯಂ ನತೇಜೋ ನವಾಯು
ರ್ನಖಂ ನೇಂದ್ರಿಯಂ ವ ನ ತ್ವೇಷಾ, ಸಮೂಹಃ//
ಅನೈಕಾಂತಿ ಕತ್ವಾತ್ ಸುಶುಪ್ರೈಕಸಿದ್ಧಃ/
ತದೇಕೋವಶಿಷ್ಟಃ ಶಿವಃ ಕೇವಲೋಹಂ//
ಮನೋಬುದ್ಧ್ಯಹಂಕಾರ ಚಿತ್ತಾನಿನಾಹಂ//
ನಚಶ್ರೋತ್ರ ಜಿಹ್ವೆ ನಚಘ್ರಾಣನೇತ್ರೆ/
ನಚವ್ಯೋಮ ಭೂಮಿ ರ್ನತೇಜೋನವಾಯುಃ
ಚಿದಾನಂಸದ ರೂಪಃ ಶಿವೋಹಂ, ಶಿವೋಹಂ

ಅಂದರೆ ಪಂಚಭೂತಗಳು ನಮ್ಮ ಪಂಚ ಜ್ಞಾನೇಂದ್ರಿಯಳು, ಪಂಚ ಕರ್ಮೆಂದ್ರಿಯಗಳು, ಬುದ್ಧಿ, ಅಹಂಕಾರಾದಿಗಳು ನಾನಲ್ಲ. ನಾನು ಸುಷುಪ್ತಿ ಕಾಲದಲ್ಲಿ ಸಿದ್ಧಿಸಲ್ಪಡುವ ನಿರಾಕಾರನಾದ ಶಿವನೇ ನಾನು ಎಂದೂ, ಮಿಥ್ಯ ಜಗತ್ತು ನಾನಲ್ಲ ನಿತ್ಯ ವಸ್ತುವಾದ ನಿರಾಕಾರ ಬ್ರಹ್ಮವೇ ನಾನೆಂದೂ ತಿಳಿಸಿರುವುದರಿಂದ ”ಜಗದ್ಗುರು” ಎಂಬ ಪದದ ಅರ್ಥವನ್ನು ವ್ಯಕ್ತಪಡಿಸಿರುತ್ತಾರೆ.

ಈ ಅರ್ಥಬೋಧನೆಯು ಬರೇ ಹಿಂದುಗಳಿಗೆ ಮಾತ್ರವಲ್ಲ ಈ ಮಿಥ್ಯಾ ಜಗತ್ತಿನಲ್ಲಿ ಇರುವ ಮುಸಲ್ಮಾನ್, ಕ್ರೈಸ್ತ ಮೊದಲಾದ ಸರ್ವ ಮತದ ಮಾನವರಿಗೂ ಅನ್ವಯಿಸುವುದರಿಂದ ಶ್ರೀ ಆದಿ ಶಂಕರರು ಮತ ಭೇದವಿಲ್ಲದೆ ಜಗತ್ತಿನ ಎಲ್ಲಾ ಮಾನವರಿಗೂ ಗುರುಗಳಾಗಲು ಅರ್ಹರಾದರು. ಆದುದರಿಂದ ಅವರಿಗೆ ಆ ಜಗದ್ಗುರು ಎಂಬ ಬಿರುದು ಬಂದದ್ದಾಗಿದೆ. ಇದರಿಂದಾಗಿ ಆಗಿನ ರಾಜಾಧಿರಾಜರುಗಳು ”ಜಗದ್ಗುರು”ಗಳೆಂಬ ಅವರ ಅಂಕಿತದ ಅರಿವು ಜನತೆಗೆ ಉಂಟಾಗುವಂತೆ ನಾಲ್ಕು ಮಠಗಳ ಪರಂಪರಾಗತ ಯತಿವರ್ಯರಿಗೆ ಅಡ್ಡಪಾಲಕಿ, ಮಕರ ತೋರಣ, ಹಗಲು ದೀವಟಿಗೆ ಮೊದಲಾದ ಅನೇಕ ಬಿರುದು ಬಾವಲಿಗಳನ್ನು ಕೊಟ್ಟದ್ದು ಮಾತ್ರವಲ್ಲದೆ ಕ್ರೈಸ್ತ ಪೋಪು ಗುರುಗಳಿಗೆ ವೆಟಿಕಾನ್ ಎಂಬ ಜಹಗೀರ್ ಇದ್ದಂತೆ ಶೃಂಗೇರಿ ಜಗದ್ಗುರುಗಳಿಗೆ ಶೃಂಗೇರಿ ತಾಲೂಕನ್ನೇ ಜಹಗೀರಿಯಾಗಿ ಬಿಟ್ಟಿದ್ದರು.

ಆದರೆ ದೇಶದಲ್ಲಿ ರಾಮರಾಜ್ಯದಂತಹ ಪ್ರಜಾಹಿತವನ್ನು ಉಂಟುಮಾಡುವ ರಾಜ್ಯವನ್ನು ಸ್ಥಾಪಿಸಬೇಕೆಂದು ದೇಶಕ್ಕಾಗಿ ಮಡಿದ ಗಾಂಧೀಜಿಯವರ ಹೆಸರನ್ನು ಬಾಯಲ್ಲಿ ಉಚ್ಛರಿಸಿಕೊಂಡು ಅವರ ತತ್ವಗಳನ್ನು ಕೊಲೆಮಾಡಿಕೊಂಡು ಪ್ರಜಾಹಿತವನ್ನು ಬಿಟ್ಟು ಪ್ರಜಾಪ್ರಭುತ್ವ ಸಮಾಜವಾದದ ನೆಪದಿಂದ ಜಾತ್ಯಾತೀತ, ಧರ್ಮಾತೀತ, ನೀತ್ಯಾತೀತ ತತ್ವದಿಂದ ದೇಶವನ್ನು ಲಂಚ, ಕೊಲೆ ಸುಲಿಗೆಯ ದೇಶವನ್ನಾಗಿ ಮಾರ್ಪಡಿಸಿ ಮತ್ತು ಅಧಿಕಾರಕ್ಕಾಗಿ ಮಂತ ಸಂಗ್ರಹ ಮತ್ತು ಧನ ಸಂಗ್ರಹಗಳೆಂಬ ಸ್ವಾರ್ಥಕ್ಕೆ ಬಲಿಬಿದ್ದ ಈಗಿನ ರಾಜಕಾರಣಿಗಳು ಶೃಂಗೇರಿಯಂತಹ ವಿಶಾಲ ಧ್ಯೇಯದ, ಜಗತ್ತಿಗೆ ಆದರ್ಶವಾದ ಧರ್ಮ ಸಂಸ್ಥಾಪನೆಯ ಮಠದ ಜಹಗೀರುಗಳನ್ನು ಸ್ವಾಧೀನಪಡಿಸಿದುದು ನಮ್ಮ ದೇಶದ ದುರದೃಷ್ಟವೆಂದೇ ಹೇಳಬೇಕು.

ಮುಂದುವರಿಯುವುದು

Leave a Reply

Your email address will not be published. Required fields are marked *