Realtime blog statisticsweb statistics
udupibits.in
Breaking News
ಉಡುಪಿ: ಜಿಲ್ಲೆಯ 25 ಮಂದಿ ಪೊಲೀಸ್ ವಾಹನ ಚಾಲಕ ಸಿಬ್ಬಂದಿಗಳ ಪರಸ್ಪರ ವರ್ಗಾವಣೆ.

ಕುಕ್ಕೆ ಕ್ಷೇತ್ರದ ಚಾರಿತ್ರಿಕ ಹಿನ್ನೆಲೆ- ಭಾಗ 28

* ಡಾ. ಮ. ಸು. ಅಚ್ಚುತ ಶರ್ಮಾ, ಮಂಗಳೂರು

# ಹಿಟ್ಲರ್, ಮುಸಲೋನಿಯಂತಹ ಫೆಸಿಸ್ಟ್ ಮುಖಂಡರ ಆಲ್ವಿಕೆ ಕಾಲದಲ್ಲೂ, ಕ್ರೈಸ್ತರ ಧರ್ಮಬೋಧಕ ಸ್ಥಳವಾದ ವೆಟಿಕಾನ್ ನ ಜಹಗೀರಿಯು ಅವರ ಸರ್ಕಾರದವರಿಂದ ಸ್ವಾಧೀನಪಡಿಸಿಕೊಳ್ಳಲ್ಪಡಲಿಲ್ಲ. ಅವರಲ್ಲಿದ್ದ ಧರ್ಮಶ್ರದ್ಧೆಯ ಸ್ವಲ್ಪ ಅಂಶವೂ ನಮ್ಮ ಭಾರತದ ಈಗಿನ ರಾಜಕಾರಣಿಗಳಲ್ಲಿ ಇಲ್ಲದೇ ಇದ್ದುದು ವ್ಯಸನಾಸ್ಪದವಾಗಿದೆ. ಅದರ ಬದಲಿಗೆ ಈ ನಾಲ್ಕು ಜಗದ್ಗರು ಮಠಗಳ ಸ್ಥಾನಮಾನಗಳನ್ನು ಕಾಪಾಡಿ ಜಗತ್ತಿಗೆ ಆದರ್ಶ ಮಠಗಳನ್ನಾಗಿ ಮಾಡಿ ಆ ಮಠಗಳ ಮುಖಾಂತರ ಈ ಜಗತ್ತಿನಲ್ಲಿರುವ ಜಾತಿ ಬೇಧಗಳನ್ನೂ ಮತ ಬೇಧಗಳನ್ನೂ ಗಡಿ ವ್ಯತ್ಯಾಸಗಳನ್ನೂಕಟ್ಟಿಕೊಂಡು ಅದಕ್ಕಾಗಿ ಹೊಡೆದಾಡಿಕೊಂಡು ತಮ್ಮ ನಾಶದ ಕಡೆಗೆ ಹೋಗುವ ಜನಾಂಗಕ್ಕೆ ಅಭೇದವಾದ ತತ್ವವನ್ನು ಸಾರಿ ಈ ಭೂಮಿಯಲ್ಲಿ ಹುಟ್ಟಿದ ಎಲ್ಲರಲ್ಲೂ ಮಾನವೀಯತೆಯ ಧರ್ಮದಿಂದ ಪ್ರೇಮವನ್ನು ಬೆಳೆಸುವಂತೆ ಮಾಡಿ ಐಕಮತ್ಯದಿಂದ ಜಗಳಾಡಿಕೊಳ್ಳದಂತೆ ಮಾಡಿಸಿ ಭಾರತಕ್ಕೆ ಒಂದು ದೊಡ್ಡ ಕೀರ್ತಿಯನ್ನೇ ತರಬಹುದಾಗಿತ್ತು.

ಶ್ರೀ ಶಂಕರರ ಅದ್ವೈತವು ಭಾರತದಲ್ಲಿ ಮಾತ್ರವಲ್ಲ ಜಗತ್ತಿನ ಇತರ ದೇಶಗಳಲ್ಲೂ ಕೀರ್ತಿಯನ್ನು ಘಳಿಸಿದ್ದು ಸರ್ವ ವಿದಿತವಾಗಿದೆ ಎಂಬುದು ಅವರಿಗೆ ಗೊತ್ತಿದೆ. ಈ ಧರ್ಮ ಬುದ್ದಿಯು ನಮ್ಮ ರಾಜಕಾರಣಿಗಳಿಗೆ ಇನ್ನಾದರೂ ಬರುವಂತೆ ಭಾರತ ಮಾತೆಯು ಪ್ರೇರೇಪಿಸಲಿ.

ಈಗ ಜಗದ್ಗುರುಗಳೆಂಬ ಹೆಸರು ಮನೆಮಾತಾಗಿದೆ. ಕಾಂಗ್ರೆಸ್ ಆಳ್ವಿಕೆ ಬಂದ ನಂತರ ಸಣ್ಣ ಮಠಾಧಿಪತಿಗಳೂ ಕೂಡ ಅವರ ಅಧಿಕಾರಕ್ಕೆ ಒಳಪಡದ ”ಜಗದ್ಗುರು” ಸರ್ವಜ್ಙ ಪೀಠವೆಂಬ ಅಂಕಿತಗಳನ್ನು ಹಾಕಿಕೊಂಡು ಮೇಲಿನ ಬಿರುದಾವಳಿಗಳನ್ನು ಉಪಯೋಗಿಸಿಕೊಂಡು ತಿರುಗುವುದು ಅಲ್ಲೆಲ್ಲಿಯೂ ಕಂಡುಬರುತ್ತದೆ.

ಮೈಸೂರು ರಾಜ್ಯಾಧಿಪತ್ಯವು ವೀಳುವ ವರೇಗೆ ಮುಂಚಿನ ರಾಜರುಗಳು ಶೃಂಗೇರಿ ಮಠಕ್ಕೆ ಸಲ್ಲತಕ್ಕ ಮೇಲಿನ ಬಿರುದು ಬಾವಲಿಗಳನ್ನು ಇತರ ಮಠದವರು ಅನುಕರಿಸಿದರೆ ಅಂತಹ ಮಠದವರಿಂದ ಆ ಬಿರುದು ಬಾವಲಿಗಳನ್ನು ಆಗಿನ ರಾಜರುಗಳು ತೆಗೆಸಿ ಅದನ್ನು ಶೃಂಗೇರಿ ಮಠಕ್ಕೆ ಕೊಡಿಸುತ್ತಿದ್ದರು. ಆ ರೀತಿ ವರ್ತಿಸಿದವರನ್ನು ಈಗ ಧರ್ಮಾತೀತ ರಾಜ್ಯವಾದುದರಿಂದ ಕೇಳುವವರಿಲ್ಲವೆಂದಾಗಿದೆ.

ದೃಂಷ್ಟಾಂತವಾಗಿ, ಮುಮ್ಮಡಿ ಕೃಷ್ಣರಾಜ ಒಡೆಯರವರು ೧೮೨೮ರಲ್ಲಿ ಕಿಲ್ಲೆದಾರರಿಗೆ ಬರೆದ ಪತ್ರದಲ್ಲಿ ಅನಧಿಕೃತ ಬಿರುದು ಬಾವಲಿಗಳನ್ನು ಉಪಯೋಗಿಸಿದ ಹರಿಹರಪುರ, ರಾಮಚಂದ್ರಾಪುರ, ಹೊನ್ನೆಹಳ್ಳಿ, ತೀರ್ಥಹಳ್ಳಿ ಮೊದಲಾದ ಮಠದ ಬಿರುದು ಬಾವಲಿಗಳನ್ನು ಅನುಕರಿಸುವ ಅಧಿಕಾರ ಅವರಿಗಿಲ್ಲವೆಂದೂ ಆ ಕಾರಣದಿಂದ ಅವರು ಉಪಯೋಗಿಸಿದ ಬಿರುದು ಬಾವಲಿಗಳನ್ನು ಅವರ ಮಠದಿಂದ ತೆಗೆದು ಶೃಂಗೇರಿ ಮಠಕ್ಕೆ ಕೊಡಿಸಿದ ವಿಚಾರವನ್ನು ಮೈಸೂರು ಆರ್ಚಿಯಲೋಜಿಕಲ್ ರಿಪೋರ್ಟು ಮತ್ತು ಆಗಿನ ಮೈಸೂರು ಮಹಾರಾಜ ಶ್ರೀ ಮುಮ್ಮಡಿ ಕೃಷ್ಣರಾಜ ಒಡೆಯರವರ ಪತ್ರದಿಂದ ತಿಳಿದುಬರುತ್ತದೆ.

ಮುಂದುವರಿಯುವುದು

Leave a Reply

Your email address will not be published. Required fields are marked *