Realtime blog statisticsweb statistics
udupibits.in
Breaking News
ಉಡುಪಿ: ಜಿಲ್ಲೆಯ 25 ಮಂದಿ ಪೊಲೀಸ್ ವಾಹನ ಚಾಲಕ ಸಿಬ್ಬಂದಿಗಳ ಪರಸ್ಪರ ವರ್ಗಾವಣೆ.

ಕುಕ್ಕೆ ಕ್ಷೇತ್ರದ ಚಾರಿತ್ರಿಕ ಹಿನ್ನೆಲೆ – ಭಾಗ 30

* ಡಾ. ಮ. ಸು. ಅಚ್ಚುತ ಶರ್ಮಾ

# ಶೃಂಗೇರಿ ಮಠೀಯು ಪ್ರಾಕ್ತನ ಲೇಖನಮಾಲಾ ಪುಸ್ತಕದ ಪುಟ: 144-145

134. ಲೇಖನ ಸರ್ವಾಧಾರಿ, ಕ್ರಿ. ಶ. 1828-29.

ಸರ್ವಧಾರಿ ಸಂವತ್ಸರದ ಜ್ಯೇಷ್ಠ ಬ. ೮ ಗುರುವಾರದಲ್ಲು ಶ್ರಿಮತ ಅರಮನೆ ಸೀಮೆ ಗಡಿಗಳ ಅಮೀಲ, ಕೆಲ್ಲೇದಾರರಿಗೆ ಬರೆಸಿ ಕಳುಹಿಸಿದ ನಿರೂಪ, ಅದಾಗಿ:-

ಶೃಂಗೇರಿ ಮಠದ ಶ್ರೀ ಸ್ವಾಮಿಗಳವರ ಆಜ್ಙಾನುಸಾರವಾಗಿ ನಡೆದುಕೊಳ್ಳತಕ್ಕ ರಾಮಚಂದ್ರಪುರ, ಹೊನ್ನೆಹಳ್ಳಿ, ತೀರ್ಥಹಳ್ಳಿ, ಹರಿಹರಪುರ, ಮುಳುಬಾಗಿಲು, ಮುಂತಾದ ತುಂಡು ಮಠದವರು ಬಿರುದು, ಬಾವಲಿ, ಶ್ವೇತಚ್ಛತ್ರ, ಮಕರತೋರಣ, ಮೊದಲಾದ ಹೆಚ್ಚುಕಟ್ಲೆ ಬಿರುದುಗಳು ಹೆಚ್ಚು ವ್ಯಾಸಂಗ ಮಾಡಿಕೊಂಡು ತಿರುಗುವದರಿಂದ ರಾಮಚಂದ್ರಾಪುರ ಮಠದ, ಬಿರುದುಬಾವಲಿ, ಶೃಂಗೇರಿ ಮಠಕ್ಕೆ ತೆಗೆದುಕೊಂಡು ಇರುವದು ಸರಿಯಷ್ಟೆ. ಆ ಬಿರುದು, ಬಾವಲಿಗಳು ಶ್ರೀ ಶೃಂಗೇರಿ ಮಠಕ್ಕೆ ಸಲ್ಲತಕ್ಕದ್ದೇ ಹೊರತು ಸದರಿ ಬಿರುದು ಇರುವ ತುಂಡು ಮಠಕ್ಕೆ ಎಂದೂ ಸಲ್ಲತಕ್ಕದ್ದಲ್ಲ.

ಶ್ರೀ ಶೃಂಗೇರಿ ಮಠದ ಶ್ರೀಪಾದ ಪೀಠಕ್ಕೆ ಕಾಣಿಕೆ, ಕಪ್ಪ ಕೊಟ್ಟು ಅಲ್ಲಿನ ಆಜ್ಙಾನುಸಾರ ನಡೆಯುತ್ತಾ ಇರುವಲ್ಲಿ ಈಗ ನೂತನ ಪದ್ಧತಿ ನಡೆಸಬಾರದಲ್ಲಾ. ಇನ್ನು ಯಾರಾದರೂ ಈ ತುಂಡು ಮಠದ ಸನ್ಯಾಸಿಗಳು ತಮ್ಮ ತಮ್ಮ ಆಶ್ರಮ ಧರ್ಮದಲ್ಲಿ ವಿಹಿತವಾಗಿ ಇರದೆ ಇಲ್ಲದ ಹವ್ಯಾಸ, ಬಿರುದು, ಬಾವಲಿಗಳು ಮಾಡಿಕೊಂಡು ಮನಸ್ವಿ ನಡೆದಲ್ಲಿ ಶ್ರೀ ಮಠದವರು ವಿಚಾರಿಸಿ ಅದಕ್ಕೆ ತಕ್ಕ ಬಂದೋಬಸ್ತು ಮಾಡಿಸಿಯಾರು.

ಈ ವಿಚಾರವಾಗಿ ಶ್ರೀ ಮಠದವರು ನಿಮ್ ನಿಮ್ಮ ಸಂಗಡ ಹೇಳಿದಲ್ಲಿ ಇದಕ್ಕೆ ತಕ್ಕ ಬಂದೋಬಸ್ತು ಮಾಡಿಸಿಕೊಟ್ಟು ಆ ಬಗ್ಗೆ ಹೆಚ್ಚು ಕಟ್ಟಡ, ಬಿರುದು, ಬಾವಲಿಗಳ ಶ್ರೀ ಮಠದ ಅಪ್ಪಣೆ ಪ್ರಕಾರ ನಡೆದುಕೊಳ್ಳುವಂತೆ ಹೇಳುವುದು.

ಮುಂದುವರಿಯುವುದು

Leave a Reply

Your email address will not be published. Required fields are marked *