Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ತಿರುಪತಿಯು ಶಂಕರಾಚಾರ್ಯರಿಂದ ಆಕರ್ಷಣಚಕ್ರ ಸ್ಥಾಪಿಸಿಲ್ಪಟ್ಟ ಶೈವ ಕ್ಷೇತ್ರ

ಕುಕ್ಕೆ ಕ್ಷೇತ್ರದ ಚಾರಿತ್ರಿಕ ಹಿನ್ನೆಲೆ- ಭಾಗ 31

* ಡಾ. ಮ. ಸು. ಅಚ್ಚುತ ಶರ್ಮಾ

# ತಾರೀಕು ೫ನೇ ಮಾಹೆ ಜೂನ್, ಸನ್ 1828ನೇ ಇಸವಿ.

ಶ್ರೀ ಆದಿ ಶಂಕರರು ಸಂಚರಿಸಿದ ಭಾರತದ ಹೆಚ್ಚಿನ ದೊಡ್ಡ ಕ್ಷೇತ್ರಗಳಲ್ಲಿ ಅಲ್ಲಿಯ ದೇವತೆಗಳ ಶಕ್ತಿಗೆ ಸರಿಯಾಗಿ ಅಲ್ಲಿಯ ಮಹಿಮೆಯು ಹೆಚ್ಚುವಂತೆ ಅಲ್ಲಲ್ಲಿ ಶ್ರೀಚಕ್ರ, ಶಿವಚಕ್ರ, ಆಕರ್ಷಣ ಚಕ್ರ ಇತ್ಯಾದಿಗಳನ್ನು ಸ್ಥಾಪಿಸಿ ಹಿಂದೂ ಜನತೆಯು ಕ್ಷೇತ್ರಗಳ ಮಹಿಮೆಯಿಂದ ಆಕರ್ಷಿಸಲ್ಪಟ್ಟು ಆಸ್ತಿಕ ಮನೋಭಾವನೆಯನ್ನು ಬಿಡದಂತೆ ಮಾಡಿದ್ದರು.

ಶ್ರೀ ಶಂಕರರು ಸಂಚರಿಸಿದ ಭಾರತದ ಹೆಚ್ಚಿನ ಎಲ್ಲಾ ಕ್ಷೇತ್ರಗಳಲ್ಲೂ ಇವರು ಸಂದರ್ಶಿಸಿದ ಗುರುತಿಗಾಗಿ ಇವರ ಶಾಖಾ ಮಠಗಳು ಈಗಲೂ ಇರುವುದು ನಿದರ್ಶನವಾಗಿದೆ. ಇವುಗಳಲ್ಲಿ ಶ್ರೀ ಶೃಂಗೇರಿ ಮಠದ ಶಾಖಾ ಮಠವೊಂದು ಅತಿ ದಕ್ಷಿಣದಲ್ಲಿ ಕಾಂಚಿ ಕಾಮಕೋಟಿ ಪೀಠವೆಂಬ ಹೆಸರಿನಿಂದ ಅದ್ವೈತ ತತ್ವದ ಅಭೇದವಾದದಿಂದ ಹಿಂದೂ ಸನಾತನ ಧರ್ಮದ ಸೇವೆಯನ್ನು ಮಾಡುತ್ತಿದೆ. ಈ ಶಾಖಾ ಮಠವನ್ನು ಕುಂಭಕೋಣ ಮಠವೆಂದೂ ಹೇಳುವುದು ವಾಡಿಕೆಯಲ್ಲಿದೆ.

ಭಾರತದ ಪ್ರಸಿದ್ಧ ಕ್ಷೇತ್ರವಾದ ತಿರುಪತಿಯಲ್ಲಿ ಶ್ರೀ ರಾಮಾನುಜರ ಪ್ರವೇಶಕ್ಕೆ ಮುಂಚೆ ವೆಂಕಟೇಶ್ವರ ವ ಬಾಲಾಜಿಯೆಂದು ಮೆರೆಯುತ್ತಿದ್ದ ಶ್ರೀ ಸುಬ್ರಹ್ಮಣ್ಯನ ಸನ್ನಿಧಿಯಲ್ಲಿ ಆದಿ ಶಂಕರರು ಆಕರ್ಷಣ ಚಕ್ರವನ್ನು ಸ್ಥಾಪಿಸಿದುದರಿಂದ ಶ್ರೀ ರಾಮಾನುಜರ ನಂತರ ಆ ತಿರುಪತಿ ಕ್ಷೇತ್ರವು ವೆಂಕಟ್ರಮಣ ವ ಶ್ರೀನಿವಾಸ ದೇವರೆಂಬ ಹೆಸರಿನಿಂದ ವೈಷ್ಣವ ಕ್ಷೇತ್ರವಾಗಿ ಪರಿವರ್ತಿಸಲ್ಪಟ್ಟರೂ ಈಗಲೂ ಸಹಸ್ರ ಸಂಖ್ಯೆಯ ಜನರು ನಾನಾ ದೇಶಗಳಿಂದ ಅಲ್ಲಿಗೆ ಬಂದು ಲಕ್ಷಗಟ್ಟಳೆ ಹಣ ಸುರಿಯುವುದು ಆ ಆಕರ್ಷಣ ಚಕ್ರದ ಪ್ರಭಾವದ ದ್ಯೋತಕವಾಗಿದೆ. ತಿರುಪತಿಯು ಶೈವ ಕ್ಷೇತ್ರವೆಂಬುದನ್ನು ಈ ಕೆಳಗಿನ ದಾಕ್ಲೆಯಿಂದ ತಿಳಿಯಬಹುದು.

ಮುಂದುವರಿಯುವುದು

Leave a Reply

Your email address will not be published. Required fields are marked *