Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಶ್ರೀನಿವಾಸನಾಗುವ ಮೊದಲು ವೆಂಕಟೇಶ್ವರ, ವೆಂಕಟನಾಥ, ಬಾಲಾಜೀ…

ಕುಕ್ಕೆ ಕ್ಷೇತ್ರದ ಚಾರಿತ್ರಿಕ ಹಿನ್ನೆಲೆ- ಭಾಗ 32

* ಡಾ. ಮ. ಸು. ಅಚ್ಚುತ ಶರ್ಮಾ

# ಉತ್ತರ ಆರ್ಕಾಟು ಜಿಲ್ಲಾ ಡಿಸ್ಟ್ರಿಕ್ಟ್ ಮೇನ್ಯುವೇಲ್ (1880ರಲ್ಲಿ ಮುದ್ರಿತವಾದದ್ದು) ತಿರುಪತಿ ದೇವಸ್ಥಾನದ ವಿಗ್ರಹವು ಅತಿ ಮೊದಲು ಶಿವನೆಂದೇ ಅರ್ಚಿಸಲ್ಪಟ್ಟಿದೆ. ಇದನ್ನು ಯಾರೂ ಅಲ್ಲಗಳೆದವರಿಲ್ಲ. ಈ ವಿಷಯದಲ್ಲಿ ಬಲವಂತವಾದ ತನಿಕೆ ನಡೆದಾಗ ಈ ರೀತಿ ತಿಳಿಯಬಂತು:

ಬೆಂಗಳೂರು ಹಿತಿಕ್ ಸೊಸೈಟಿಯ ಸಂಚಿಕೆಯಲ್ಲಿ ಶ್ರೀ ವಿ. ಶ್ರೀನಿವಾಸ ರಾಯರು ಬರೆದ ”ಸವಾಲ್ ಕೆ ಜವಾಬ್” (ಎಂಬ ಪ್ರಶ್ನೋತ್ತರ)ವೆಂಬುದರಿಂದ ತೆಗೆದುದಾಗಿದೆ. ನಮ್ಮ ದೇಶವು ಈಸ್ಟ್ ಇಂಡಿಯಾ ಕಂಪೆನಿಯ ಆಡಳಿತೆಗೆ ಬಂದೊಡನೆ ತಿರುಪತಿಯ ವೈಷ್ಣವ ಅರ್ಚಕರಾದ ಸ್ಥಾನಿಕರು ತಾವು ವೈಷ್ಣವರಾಗಿದ್ದರೂ ದೇವಸ್ಥಾನದ ವಿಚಾರದಲ್ಲಿ ಈ ರೀತಿಯ ಸತ್ಯತೆಯನ್ನು ತಿಳಿಸಿದ್ದರು.

ಈ ದೇವಸ್ಥಾನದ ದೇವರನ್ನು ಅಗಸ್ತ್ಯರು ಮತ್ತು ಇನ್ನಿತರ ಋಷಿಗಳು ವೆಂಕಟೇಶ್ವರನೆಂಬ ಹೆಸರಿನಿಂದ ಶಿವನೆಂದು ಶೈವಾಗಮ ಪ್ರಕಾರ ಪೂಜಿಸುತ್ತಿದ್ದರೆಂದೂ, ತೊಂಡಮಾನನ ನಂತರ ಅದನ್ನು ಬಾಲಾಜೀ ಅಂದರೆ ಸುಬ್ರಹ್ಮಣ್ಯನೆಂದು ಪೂಜಿಸುತ್ತಿದ್ದರೆಂದೂ, ರಾಮಾನುಜರು ಬಂದ ನಂತರ ಅದಕ್ಕೆ ಚಿನ್ನದ ಶಂಕ ಚಕ್ರಗಳನ್ನು ತೊಡಿಸಿ ಬಿಲ್ವಾರ್ಚನೆ ನಿಲ್ಲಿಸಿ ಅದರ ಮೇಲಿದ್ದ ನಾಗಾಭರಣವನ್ನು ತೆಗೆದು ಶ್ರೀನಿವಾಸ ಅಥವಾ ವೆಂಕಟರಮಣನೆಂಬ ಹೆಸರು ಇರಿಸಿ ವೈಖಾನಸ ಆಗಮ ಪ್ರಕಾರದ ಪೂಜೆ ಏರ್ಪಡಿಸಿದರೆಂದೂ ತಿಳಿಸಿದರು.

ಅಲ್ಲದೇ ಈ ದೇವಸ್ಥಾನಕ್ಕೆ ಶ್ರೀ ಆದಿ ಶಂಕರಾಚಾರ್ಯರು ದರ್ಶನವಿತ್ತ ಸಮಯದಲ್ಲಿ ಇಲ್ಲಿ ಆಕರ್ಷಣ ಚಕ್ರ ಒಂದನ್ನು ಸ್ಥಾಪಿಸಿ ದೇವಳದ ಮಹಿಮೆಯನ್ನು ಹೆಚ್ಚಿಸಿದ್ದರೆಂದೂ ಇಲ್ಲಿಯೇ ಶ್ರೀ ಶಂಕರರು, ಒಂದು ಗುಪ್ತ ಲಿಂಗವನ್ನು ಕೂಡ ಪ್ರತಿಷ್ಠಿಸಿದ್ದರೆಂದೂ ತಿಳಿಸಿದರು. ಅಲ್ಲಿಯ ದೇವರಿಗೆ ಶ್ರೀನಿವಾಸನೆಂಬ ಹೆಸರು ಬಹಳ ಇತ್ತೀಚೆಗೆ ಬಂದದ್ದೆಂದು ಕೂಡಾ ತಿಳಿಸಿದರು.

ಶ್ರೀ ಆದಿಶಂಕರರ ”ಶಿವಶೇಷಾದ್ರಿ ಶೈಲ”ವೆಂಬ ಅವರ ದ್ವಾದಶ ಸ್ತೋತ್ರದಲ್ಲಿ ಅಲ್ಲಿಯ ದೇವರನ್ನು ”ವೆಂಕಟನಾಥ”ನೆಂದೂ ಉಲ್ಲೇಖಿಸಿದ್ದಾರೆ. ತಮಿಳು ದೇಶದ ”ಶಿವಯೋಗಿ” ಎಂಬವರು ಕೂಡ ”ವೆಂಕಟನಾಥ”ನೆಂದು ಉಲ್ಲೇಖಿಸಿರುತ್ತಾರೆ. ಸ್ಕಾಂದ ಪುರಾಣ ಮತ್ತು ತಿರುಪತಿ ಸಹಸ್ರನಾಮದಲ್ಲೂ ಶಿವನ ಹೆಸರುಗಳು ಉಲ್ಲೇಖಿಸಲ್ಪಟ್ಟಿವೆ.

ಮುಂದುವರಿಯುವುದು

Leave a Reply

Your email address will not be published. Required fields are marked *