Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಉಡುಪಿ, ಕೊಲ್ಲೂರು, ಧರ್ಮಸ್ಥಳದಲ್ಲೂ ಶ್ರೀಚಕ್ರ !

ಕುಕ್ಕೆ ಕ್ಷೇತ್ರದ ಚಾರಿತ್ರಿಕ ಹಿನ್ನೆಲೆ- ಭಾಗ 33

* ಡಾ. ಮ. ಸು. ಅಚ್ಚುತ ಶರ್ಮಾ

# ಅದೇ ರೀತಿ ಶ್ರೀ ಶಂಕರರು ಕನ್ನಡ ಜಿಲ್ಲೆಯಲ್ಲಿಯೂ ಉಡುಪಿ, ಧರ್ಮಸ್ಥಳ, ಕೊಲ್ಲೂರು ಮತ್ತು ಸುಬ್ರಹ್ಮಣ್ಯ ಕ್ಷೇತ್ರಗಳನ್ನು ಸಂದರ್ಶಿಸಿ, ಅಲ್ಲಲ್ಲಿ ಕ್ಷೇತ್ರದ ಮಹಿಮೆಯನ್ನು ಹೆಚ್ಚಿಸಲು ಶ್ರೀ ಚಕ್ರ, ಶಿವಚಕ್ರಗಳನ್ನು ಸ್ಥಾಪಿಸಿ ಹೋಗಿರುವರೆಂಬ ಪ್ರತೀತಿ ಇದೆ.

ಈ ಕ್ಷೇತ್ರಗಳೊಳಗೆ ಕೊಲ್ಲೂರು ಮೂಕಾಂಬಿಕಾ ಕ್ಷೇತ್ರದಲ್ಲಿ ಇದನ್ನು ಈಗಲೂ ಕಾಣಬಹುದು. ಬಾಕಿ ಕ್ಷೇತ್ರಗಳಲ್ಲಿ ಮಾಧ್ವರ ಪ್ರವೇಶ ಆದೊಡನೆ ಅವೆಲ್ಲಾ ಗುಪ್ತವಾಗಿ ಇರಿಸಲ್ಪಟ್ಟಿರಬಹುದು. ಶ್ರೀ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಶ್ರೀ ಆದಿ ಶಂಕರರು ಬಂದುದರ ವಿಚಾರದಲ್ಲಿ ಈ ಮೊದಲೇ ಆಧಾರಕೊಟ್ಟು ವಿವರಿಸಿರುತ್ತೇನೆ. ಉಡುಪಿಗೆ, ಧರ್ಮಸ್ಥಳಕ್ಕೆ ಬಂದ ವಿವರವು ಈ ಕೆಳಗಿನ ಆಧಾರಗಳಿಂದ ತಿಳಿಯಬಹುದಾಗಿದೆ.

ಶ್ರೀ ಶೃಂಗೇರಿ ಮಠದ ‘ಗುರುವಂಶ ಕಾವ್ಯ’ ಎಂಬ ಪುಸ್ತಕದ 3ನೇ ಅಧ್ಯಾಯದ 10 ಶ್ಲೋಕ ”ಸತೌಲವ ಗ್ರಾಮವರಂ ಪ್ರತೀತಂ ಶ್ರೀ ರೌಪ್ಯ ಪೀಠಾಖ್ಯ ಪುರಂ ಪ್ರಪೇದೆ / ಶ್ರೀ ಮಾನನಂತೇಶ್ವರ ಮರ್ಚಯಿತ್ವಾ ಚಂದ್ರೇಶ್ವರಂ ಚಾರು ಮುನೀಂದ್ರ ಅರ್ಚತ್”. ಇದರಲ್ಲಿ ತುಳು ಗ್ರಾಮವಾದ ರೌಪ್ಯ ಪೀಠವೆಂಬ ಉಡುಪಿ ಪಟ್ಟಣದಲ್ಲಿ ಶ್ರೀ ಅನಂತೇಶ್ವರನನ್ನೂ, ಶ್ರೀ ಚಂದ್ರೇಶ್ವರನನ್ನೂ ಅರ್ಚಿಸಿದರೆಂದೂ ವ್ಯಕ್ತವಾಗುತ್ತದೆ.

ಅದೇ ರೀತಿ ಧರ್ಮಸ್ಥಳಕ್ಕೆ ಚಿತ್ತೈಸಿದ ಆದಿ ಶಂಕರರೇ ಮಂಜುನಾಥೇಶ್ವರನನ್ನು ಪ್ರತಿಷ್ಠಿಸಿರುತ್ತಾರೆಂದು, ಜಯಪುರ ಶ್ರೀ ವಿಶ್ವನಾಥ ರಾಜಗೋಪಾಲ ಶರ್ಮ ಎಂಬವರ ಸಂಪಾದಕತ್ವದಿಂದ ಪ್ರಕಟಿಸಲ್ಪಟ್ಟ ‘ಶ್ರೀ ಮಜ್ಜಗದ್ಗುರು ಶಂಕರ ಮಠಗಳ ವಿಮರ್ಶೆ’ ಎಂಬ ಪುಸ್ತಕದ ಪುಟ 63ರಲ್ಲಿ ಅಧ್ಯಾಯ 6ರಲ್ಲಿ ವಿವರಿಸಿದ ಹಿಂದೀ ವಿವರಣೆಯಲ್ಲಿ ಈ ರೀತಿ ವಿವರಿಸಲ್ಪಟ್ಟಿದ್ದು ಗಮನಾರ್ಹವಾಗಿದೆ.

ಮುಂದುವರಿಯುವುದು

Leave a Reply

Your email address will not be published. Required fields are marked *