Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಕುಕ್ಕೆ ಕ್ಷೇತ್ರದ ಚಾರಿತ್ರಿಕ ಹಿನ್ನೆಲೆ- ಭಾಗ 34

* ಡಾ. ಮ. ಸು. ಅಚ್ಚುತ ಶರ್ಮಾ

# ”ಕರ್ನಾಟಕ ಮೆ ಧರ್ಮಸ್ಥಲ ಏಕ ಪವಿತ್ರ ತೀರ್ಥ ಸ್ಥಾನ ಹೈಯಹಾಂ ಕಾ ಪುರಾತನ ಪ್ರಸಿದ್ಧ ಮಂದಿರ ಮಂಜುನಾಥೇಶ್ವರ ಕಾ ಹೈ ಯಹ ದಕ್ಷಿಣ ಕನ್ನಡ ಜಿಲ್ಲೆ ಮೆ ಹೈ. ಪೂರ್ವ ಕಾಲ ಮೆ ಇಸ ಮಂದಿರ ಮೆ ಮಂಜುನಾಥೇಶ್ವರ ಲಿಂಗ ಕೀ ಸ್ಥಾಪನಾ ಆದಿ ಶಂಕರಾಚಾರ್ಯ ನೇ ಕೀ ಥೀಕಿಂತು 1635 ಮೆ ವಾದಿರಾಜ ಸ್ವಾಮಿ ಪಾದ ಜೋ ಉಡುಪಿ ಕೆ ಸೋದೆ ಮಠಸೇ ಆಯೆ ಥೆ. ಇನ್ ಕಿ ಉಪಾಸನಾ ಕೀ ಓರ ತಬಸೆ ಯಹಾಂ ಕೀ ಉಪಸನಾ ಶ್ರೀ ಮಧ್ವಾಚಾರ್ಯ ಕೆ ದ್ವೈತ ಮತಾನುಸಾರ ಹೋತಿ ಹೈಃ ವಹಾಂ ಸೆ ಅನೇಕ ಶಿಷ್ಯೋಂ ಸಹಿತ ಆಪ ಮಧ್ಯಾರ್ಜನ ಸೀಮಾ (ತಂಜಾವೂರು ಜಿಲ್ಲಾ) ಪಹುಂಚೆ”.

ಈ ಮೇಲಿನ ವಾಕ್ಯಗಳಿಂದ ಆದಿ ಶಂಕರರು ಧರ್ಮಸ್ಥಳದಲ್ಲಿ ಮಂಜುನಾಥೇಶ್ವರ ಲಿಂಗವನ್ನು ಪ್ರತಿಷ್ಠಿಸಿ ತಂಜಾವೂರು ಜಿಲ್ಲೆಯ ಮಧ್ಯಾರ್ಜುನ (ತಿರುಡಮರದೂರು) ಕ್ಷೇತ್ರಕ್ಕೆ ಚಿತ್ತೈಸಿದರು ಎಂದೂ, ಅಲ್ಲದೆ 1635ರಲ್ಲಿ ಉಡುಪಿಯ ಸೋದೆ ಮಠದ ವಾದಿರಾಜ ಸ್ವಾಮೀಗಳು ಧರ್ಮಸ್ಥಳಕ್ಕೆ ಬಂದು ಆ ಶಿವಾಲಯವನ್ನು ವೈಷ್ಣವ ಪದ್ಧತಿಯ ಉಪಾಸನಾ ಕ್ರಮಕ್ಕೆ ಪರಿವರ್ತಿಸಿ ಶ್ರೀ ಮಧ್ವಾಚಾರ್ಯರ ದ್ವೈತ ಸಂಪ್ರದಾಯವನ್ನು ಅಲ್ಲಿ ಬರುವಂತೆ ಮಾಡಿದರೆಂದೂ ಕೂಡಾ ವ್ಯಕ್ತವಾಗುತ್ತದೆ.

ಶ್ರೀ ಮಂಜುನಾಥೇಶ್ವರ ಲಿಂಗವನ್ನು ಆದಿ ಶಂಕರರೇ ಪ್ರತಿಷ್ಠಿಸಿದ್ದರಿಂದ ವಾದಿರಾಜರಿಗೆ ಆ ಲಿಂಗವನ್ನು ತೆಗೆದು ತನ್ನ ವೈಷ್ಣವ ಮೂರ್ತಿಯನ್ನು ಇಡಲು ಪ್ರತಿಷ್ಠಾ ಮಹತ್ವದಿಂದ ಸಾಧ್ಯವಾಗಲಿಲ್ಲ. ಅದರ ಬದಲಿಗೆ ಅವರು ತನ್ನ ಮಾಧ್ವ ಮತದವರನ್ನೇ ಅರ್ಚಕರನ್ನಾಗಿ ಅಲ್ಲಿ ಇಟ್ಟು ಲಿಂಗದ ಬದಿಯಲ್ಲಿ ಶಾಲಿಗ್ರಾಮಗಳನ್ನು ಇರಿಸಿ ಶೈವಾಗಮವನ್ನು ನಿಲ್ಲಿಸಿ ಈಶ್ವರನಿಗೆ ಪ್ರಿಯವಾದ ಬಿಲ್ವ, ವಿಭೂತಿಗಳ ಬಳಕೆಯನ್ನು ತಪ್ಪಿಸಿ, ತುಲಸೀ ಗಂಧ ಪ್ರಸಾದಗಳ ವಿತರಣಾ ಕ್ರಮವನ್ನು ಏರ್ಪಡಿಸಿ ಅಜ್ಙ ಭಕ್ತಾಧಿಗಳಿಗೆ ಮಂಜುನಾಥನ ಪ್ರಸಾದವೆಂದೇ ಹೇಳಿ ಜನತೆಯನ್ನು ವಂಚಿಸುವ ಪ್ರಕರಣವನ್ನು ಏರ್ಪಡಿಸಿದರೆಂದು ತಿಳಿಯಬೇಕಾಗುತ್ತದೆ. ಶ್ರೀ ವಾದಿರಾಜರ ಮೇಲಿನ ಕರ್ತವ್ಯದಿಂದ ಅವರೇ ಮಂಜುನಾಥನನ್ನು ಪ್ರತಿಷ್ಠಿಸಿದರೆಂದೂ ಕೂಡಾ ಆ ಮೇಲಿನ ಮಾಧ್ವ ಯತಿಗಳು ಪ್ರಚಾರಗೊಳಿಸಿದರು.

ಲಿಂಗ ಪೂಜಾ ಧ್ವೇಷಿಗಳೂ, ಶಿವನು ವಿಷ್ಣುವಿನ ಒಂಭತ್ತನೇ ತರಗತಿಯ ಕೆಳಮಟ್ಟದ ವಿಷ್ಣುವಿನ ಕಿಂಕರನೆಂದು ಹೇಳುವ ಶ್ರೀ ವಾದಿರಾಜರು ಧರ್ಮಸ್ಥಳದಲ್ಲಿ ಮಂಜುನಾಥೇಶ್ವರ ಲಿಂಗವನ್ನು ಪ್ರತಿಷ್ಠಿಸಿದರು ಎಂಬ ಮಾತಿಗೆ ಏನಾದರೂ ಅರ್ಥವಿದೆಯೇ ? ವಾಚಕರೇ ಊಹಿಸಿರಿ ! ಉಡುಪಿ ಸೋದೆ ಮಠದ ಸ್ವಾಮೀಗಳು ಹೇಳಿದ ಸಾಕ್ಷಿಯ ವಿವರ…

ಮುಂದುವರಿಯುವುದು

Leave a Reply

Your email address will not be published. Required fields are marked *