Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಶ್ರೀರಾಮ ದಿವಾಣರ ಕೆಲವು ರಾಜಕೀಯ ಚುಟುಕುಗಳು

# ಇಂದಿರಾ ಗಾಂಧಿ
ತುರ್ತು ಪರಿಸ್ಥಿತಿ ಘೋಷಿಸಿ
ಬ್ಯಾಂಕ್ ರಾಷ್ಟ್ರೀಕರಣಗೈದು
ಚರಿತ್ರೆ ನಿರ್ಮಿಸಿದರು
ನರೇಂದ್ರ ಮೋದಿ
ತುರ್ತುಸ್ಥಿತಿ ಘೋಷಿಸದೇ
ರಿಸರ್ವ್ ಬ್ಯಾಂಕಿನ
ರಿಸರ್ವ್ ಫಂಡ್
ಕಸಿದುಕೊಂಡು
ದೇಶದ ಚರಿತ್ರೆಗೆ
ಕಳಂಕತಂದರು !

# ರಾಜಕೀಯ ಇತಿಹಾಸದಲ್ಲೇ ಪ್ರಥಮ
ರಾಜ್ಯಕ್ಕೆ ಮೂವರು ಉಪಮುಖ್ಯಮಂತ್ರಿ
ಬಿಜೆಪಿಯ ಅಧಿಕಾರ ಲಾಲಸೆ
ಭ್ರಷ್ಟತನಕ್ಕೆ ಸಾಕ್ಷಿ
ಜನಕ್ಕೆ ಮೋದಿ ಭ್ರಾಂತಿ !

# ವಿಧವಿಧ ಕಲ್ಪನೆ
ಭಕ್ತರಿಗೆ ಭ್ರಮೆಯಲ್ಲೇ
ಮೋದಿ ವಿಶ್ವಗುರು
ಅದಕ್ಷತೆಗೆ ದೇಶ
ದಿವಾಳಿಯಾದಾಗ ಹೇಳ್ತಾರೆ
ಕಾರಣ ನೆಹರು !

# ಹೊಗಳೀ ಹೊಗಳಿ
ಹೊನ್ನಶೂಲಕ್ಕೇರಿಸ್ತಾರೆ
ವ್ಯಾಪಾರೀ ಲಾಭಬಡುಕರು
ಉಬ್ಬೀ ಉಬ್ಬಿ
ಖರೀದಿ, ಆಮದುವಿಗೆ
ಸಹಿ ಹಾಕ್ತಾರೆ
ನಾಯಕರು !

# ದೇವಸ್ಥಾನಗಳಲ್ಲಿ
ಬ್ರಾಹ್ಮಣರಿಗೆ ಮಾತ್ರ
ವಿವಿಧ ವಿಶೇಷ
ಸ್ಥಾನಮಾನ
ಬ್ರಾಹ್ಮಣತ್ವದ
ರಕ್ಷಕ ಪೋಷಕ
ಸಂಘ ಪರಿವಾರದ
ಜಾಣಮೌನ !

# ಮಾತು ಮಾತಿಗೂ
ಸಂಘ ಪರಿವಾರ
ಪ್ರತಿಪಾದಿಸುವುದು ‘ಏಕ’
ಸುಳ್ಳು ಅಪಪ್ರಚಾರ
ವದಂತಿ ಹಬ್ಬಿಸಿ
ಅಜೆಂಡಾ ಸಾಧಿಸಲು
ಉಪ ಸಂಘಟನೆಗಳು ‘ಅನೇಕ’ !

# ಆರೆಸ್ಸೆಸ್, ಬಿಜೆಪಿ
ಪರಿವಾರದ್ದು
ಯಾವತ್ತೂ ಸ್ವದೇಶಿ
ಚಿಂತನೆಯ ಮಾತು
ಕೃತಿಗೆ ಬಂದಾಗ
ಶೇ. ನೂರು ವಿದೇಶಿ
ನೇರ ಬಂಡವಾಳ
ಹೂಡಿಕೆಗೆ ಅಸ್ತು !

– ಶ್ರೀರಾಮ ದಿವಾಣ

Leave a Reply

Your email address will not be published. Required fields are marked *