Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಬಿ.ಆರ್.ಲೈಫ್ ಕಾನೂನು ಉಲ್ಲಂಘನೆ: ಉಡುಪಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕಾಮಗಾರಿಗೆ ತಡೆ !

ಉಡುಪಿ: ಉಡುಪಿ ನಗರದ ಹೃದಯ ಭಾಗದಲ್ಲಿ ಅನಿವಾಸಿ ಉದ್ಯಮಿ ಬಿ. ಆರ್. ಶೆಟ್ಟಿಯವರು ನಿರ್ಮಿಸುತ್ತಿರುವ ‘ಕೂಸಮ್ಮ ಶಂಭು ಶೆಟ್ಟಿ ಸ್ಮಾರಕ ಹಾಜಿ ಅಬ್ದುಲ್ಲಾ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ’ಯ ನಿರ್ಮಾಣ ಕಾಮಗಾರಿಯನ್ನು ಸ್ಥಗಿತಗೊಳಿಸುವಂತೆ ಉಡುಪಿ ನಗರಸಭೆಯು ಆಗಸ್ಟ್ 26ರಂದು ಆದೇಶಿಸಿದೆ.

ಉದ್ಯಮಿ ಬಿ. ಆರ್. ಶೆಟ್ಟಿಯವರ ‘ಬಿ. ಆರ್. ಲೈಫ್’ ಸಂಸ್ಥೆಯು ನಿರ್ಮಿಸುತ್ತಿರುವ ಖಾಸಗೀ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ವಾಹನ ನಿಲುಗಡೆಗಾಗಿ ಬಳಸಲು ನೆಲದ ತಳದಲ್ಲಿ ಎರಡು ಮಹಡಿಗಳಿಗಾಗಿ ನೆಲ ಅಗೆತ ಮಾಡಲು ನಗರಸಭೆಯು ನಿರಕ್ಷೇಪಣಾ ಪತ್ರ ನೀಡಿತ್ತು. ಆದರೆ, ಬಿ. ಆರ್. ಸಂಸ್ಥೆಯು ಕಾನೂನು ಮತ್ತು ನಿಯಮಾವಳಿಗಳನ್ನು ಮೀರಿ/ ಉಲ್ಲಂಘಿಸಿ ಮೂರು ತಳ ಮಹಡಿಗಳನ್ನು ನಿರ್ಮಿಸಲು ನೆಲ ಅಗೆತ ಮಾಡಿದ್ದರಿಂದ, ನಗರಸಭೆಯು ಕಾಮಗಾರಿಯನ್ನು ಸ್ಥಗಿತಗೊಳಿಸುವಂತೆ ಆದೇಶಿಸಿದೆ.

ನೆಲದಿಂದ ಮೂರು ತಳ ಮಹಡಿ ನಿರ್ಮಿಸಲು ಕಾನೂನು ನಿಯಮಾವಳಿಗಳಲ್ಲಿ ಅವಕಾಶ ಇಲ್ಲವಾಗಿದ್ದರೂ, ಬಿ. ಆರ್. ಶೆಟ್ಟಿ ಅವರು ಕಾನೂನಿನ ಕಣ್ಣಿಗೆ ಮಣ್ಣೆರಚಿ ಕಾಮಗಾರಿ ನಡೆಸುತ್ತಿದ್ದರು. ಉಡುಪಿ ನಗರಸಭೆಯ ಆದೇಶದಿಂದಾಗಿ ಕಾನೂನಿಗಿಂತ ದೊಡ್ಡವರು ಯಾರೂ ಇಲ್ಲ ೆನ್ನುವುದು ಸ್ಪಷ್ಟವಾಗಿದೆ.

ಬಿ. ಆರ್. ಲೈಫ್ ಸಂಸ್ಥೆಯು ನೆಲದಿಂದ ತಳದಲ್ಲಿ ಸ್ಲೋಪಡ್ ಲೆನ್ತ್ (sloped length) 13.00 ಮೀ. ಮತ್ತು (riveted length) 11.20 ಮೀ ಅಂದರೆ ಮೂರು ತಳ ಮಹಡಿಗಾಗಿ ಮಣ್ಣಿನ ಅಗೆತ ಮಾಡಿತ್ತು. ಈ ಬಗ್ಗೆ ನಗರಸಭೆಯ ಅಭಿಯಂತರರು ಸ್ಥಳ ಪರಿಶೀಲನೆ ನಡೆಸಿ ಆಗಸ್ಟ್ 26ರಂದು ನಗರಸಭೆಗೆ ವರದಿ ಸಲ್ಲಿಸಿದ್ದರು. ಈ ವರದಿಯ ಆಧಾರದಲ್ಲಿ ಪೌರಾಯುಕ್ತರು ಕಾಮಗಾರಿ ಸ್ಥಗಿತಗೊಳಿಸಿ ಆದೇಶ ಹೊರಡಿಸಿದ್ದರು.

ಆದೇಶದಲ್ಲಿ ಈಗಾಗಲೇ ಅಗೆದ ಮೂರನೇ ತಳ ಮಹಡಿಯನ್ನು ಮುಚ್ಚಬೇಕು ಎಂದು ಸ್ಪಷ್ಟವಾಗಿ ತಿಳಿಸಿರುವ ನಗರಸಭೆ ಪೌರಾಯುಕ್ತರು, ಮುಂದೆ ನಗರಸಭೆಯಿಂದ ಕಟ್ಟಡ ಪರವಾನಿಗೆ ಪಡೆದ ಬಳಿಕವೇ ಕಾಮಗಾರಿ ಮುಂದುವರಿಸಬಹುದಾಗಿದ್ದು, ಅಲ್ಲಿಯವರೆಗೆ ಕಾಮಗಾರಿ ನಡೆಸಕೂಡದು ಎಂದು ಎಚ್ಚರಿಕೆ ನೀಡಿದೆ.

ಮಹಾದಾನಿ ಹಾಜಿ ಅಬ್ದುಲ್ಲಾ ಸಾಹೇಬರು ದಾನವಾಗಿ ನೀಡಿದ ಭೂಮಿಯಲ್ಲಿ ಸರಕಾರ ಶತಮಾನದ ಹಿಂದೆ ಸರಕಾರಿ ಮಹಿಳೆಯರ ಮತ್ತು ಮಕ್ಕಳ ಆಸ್ಪತ್ರೆಯನ್ನು ನಿರ್ಮಿಸಿತ್ತು. ಸಿದ್ಧರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ, ಪ್ರಮೋದ್ ಮಧ್ವರಾಜ್ ಶಾಸಕರಾಗಿದ್ದ ಅವಧಿಯಲ್ಲಿ ತಮ್ಮ ಸ್ವಾರ್ಜಿತ ಆಸ್ತಿ ಎಂಬಂತೆ ಬಹುಕೋಟಿ ಬೆಲೆಬಾಳುವ ಈ ಸರಕಾರೀ ಆಸ್ಪತ್ರೆಯನ್ನು ಜಮೀನು ಸಹಿತವಾಗಿ ಬಿ. ಆರ್. ಶೆಟ್ಟಿಯವರಿಗೆ ನೀಡಿ ಅಕ್ಷಮ್ಯ ಅಕ್ರಮವೆಸಗಿದದ್ದರು.

 

Leave a Reply

Your email address will not be published. Required fields are marked *