Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ನಿಧನ: ರೇವತಿ ಅಣ್ಣಾಜೀ ರಾವ್ ದೇಹದಾನ

ಮಂಗಳೂರು: ನಗರದ ಕೆಪಿಟಿ ಹಿಂಬದಿಯ ವ್ಯಾಸನಗರದ ವಿಶ್ವಾಸ್ ಸಾಮ್ರಾಟ್ ಅಪಾರ್ಟ್ ಮೆಂಟ್ ನಿವಾಸಿ ಶ್ರೀಮತಿ ರೇವತಿ ಅಣ್ಣಾಜೀ ರಾವ್ (80) ಅವರು ಸೆಪ್ಟೆಂಬರ್ 15ರಂದು ಸ್ವಗೃಹದಲ್ಲಿ ಹೃದಯಾಘಾತದಿಂದ ನಿಧನರಾದರು.

ಮೃತರು, ಮಕ್ಕಳಾದ ಕಿರಣ್ ಕುಮಾರ್ (ಖಾಸಗೀ ಸಂಸ್ಥೆಯ ನಿವೃತ್ತ ಉದ್ಯೋಗಿ), ಶ್ರೀಮತಿ ಪೂರ್ಣಿಮಾ ಆರ್. ಶಾಸ್ತ್ರೀ (ಮುಂಬಯಿ ನಿವಾಸಿ) ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ರೇವತಿ ಅವರ ಮೃತದೇಹವನ್ನು ಅವರ ಸ್ವ ಇಚ್ಛೆಯಂತೆ ಎ.ಜೆ.ಶೆಟ್ಟಿ ಇನ್ಸ್ ಟಿಟ್ಯೂಟ್ ಆಫ್ ಮೆಡಿಕಲ್ ಸಯನ್ಸಸ್ ಆ್ಯಂಡ್ ರಿಸರ್ಚ್ ಸೆಂಟರ್ ಗೆ ಸೆಪ್ಟೆಂಬರ್ 17ರಂದು ದಾನಮಾಡಲಾಯಿತು. ರೇವತಿಯವರ ಪತಿ ಅಣ್ಣಾಜೀ ರಾವ್ ಅವರು ಏಳು ವರ್ಷಗಳ ಹಿಂದೆ ಮೃತರಾಗಿದ್ದು, ಅವರ ಮೃತದೇಹವನ್ನು ಸಹ ಅವರ ಸ್ವ ಇಚ್ಛೆಯಂತೆ ಎ.ಜೆ.ಶೆಟ್ಟಿ ರಿಸರ್ಚ್ ಸೆಂಟರ್ ಗೆ ದಾನಮಾಡಲಾಗಿತ್ತು.

ಇದೀಗ ಪತ್ನಿ ಶ್ರೀಮತಿ ರೇವತಿ ಅವರು ಸಹ ಪತಿಯ ಆದರ್ಶವನ್ನೇ ಮೆರೆದು ಸಮಾಜಕ್ಕೆ ಮಾದರಿಯಾಗಿದ್ದಾರೆ.

ಉಡುಪಿ ಅಣ್ಣಾಜಿ ರಾಯರು (ನಿಧನ: 30.08.2012)

Leave a Reply

Your email address will not be published. Required fields are marked *