Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಮನೆಯೊಳಗಿನ ಹಲ್ಲಿಗೂ, ಪಶ್ಚಿಮಘಟ್ಟದ ಜೀವಜಗತ್ತಿಗೂ ನೇರ ಸಂಬಂಧ: ಉರಗ ವಿಜ್ಙಾನಿ ಗುರುರಾಜ್ ಸನಿಲ್

ಉಡುಪಿ: ಪ್ರಾಣಿ-ಪಕ್ಷಿಗಳು, ಸರಿಸೃಪ-ಕ್ರಿಮಿಕೀಟಗಳು ತಮಗರಿವಿಲ್ಲದ ರೀತಿಯಲ್ಲಿ ಮನುಷ್ಯನನ್ನು ರಕ್ಷಣೆ ಮಾಡುತ್ತಿವೆ. ಆದರೆ ಇದರ ಅರಿವು ಮನುಷ್ಯನಿಗೇ ಇಲ್ಲವಾಗಿದೆ. ಮನೆಯೊಳಗಿನ ಹಲ್ಲಿಗೂ, ಪಶ್ಚಿಮ ಘಟ್ಟಗಳ ಜೀವವೈವಿಧ್ಯತೆಗೂ ನೇರ ಸಂಬಂಧವಿದೆ. ಭಯ ಮತ್ತು ಮಾನಸಿಕತೆಯ ಕಾರಣ ಮನುಷ್ಯನ ತಿಳುವಳಿಕೆ ಸಂಕುಚಿತವಾಗಿದೆ. ಪರಿಸರ ಮತ್ತು ಜೀವ ಪ್ರೀತಿಯನ್ನು ಬೆಳೆಸಿಕೊಳ್ಳುವ ಮೂಲಕ ಮನುಷ್ಯ ನಿಸರ್ಗದ ಜೊತೆಗೆ ಬಾಳಲು ಕಲಿತುಕೊಳ್ಳಬೇಕು ಎಂದು ಖ್ಯಾತ ಉರಗ ವಿಜ್ಙಾನಿ, ಲೇಖಕ ಗುರುರಾಜ ಸನಿಲ್ ಅವರು ಹೇಳಿದರು.

ಕುರ್ಕಾಲು ಸುಭಾಸ್‌ನಗರದ ಫೆರ್ನಾಂಡಿಸ್ ಕಂಪೌಂಡ್‌ನಲ್ಲಿ ”ಚಿಂತನ ವೇದಿಕೆ”ಯು ಸೆಪ್ಟೆಂಬರ್ 22ರಂದು ಆಯೋಜಿಸಿದ ‘ಮಾಸದ ಮಾತು’ ಕಾರ್ಯಕ್ರಮದಲ್ಲಿ ‘ಹಾವು-ನಾವು’ ಎಂಬ ವಿಷಯದ ಮೇಲೆ ಉಪನ್ಯಾಸ ನೀಡಿ ಅವರು ಮಾತನಾಡುತ್ತಿದ್ದರು.

ಹಲ್ಲಿ, ಹಾವು ಇತ್ಯಾದಿಗಳ ಹೆಸರಲ್ಲಿ ಹಲವು ರೀತಿಯ ಮೌಢ್ಯವನ್ನು ಜನರಲ್ಲಿ ಬಿತ್ತಲಾಗಿದೆ. ಹಾವಾಡಿಗರಿಂದಾಗಿಯೂ ಮೌಢ್ಯ ದೊಡ್ಡ ಪ್ರಮಾಣದಲ್ಲಿ ಹಬ್ಬಿದೆ. ಭಯ ಮತ್ತು ಅಸಹ್ಯವನ್ನು ಬಿಟ್ಟು ನಮ್ಮಂತೆಯೇ ಅವುಗಳು ಎನ್ನುವುದನ್ನು ಅರ್ಥಮಾಡಿಕೊಂಡು ನಡೆದುಕೊಳ್ಳುವುದರಿಂದ ಮಾತ್ರ ಮನುಕುಲಕ್ಕೆ ಪ್ರಯೋಜನಕಾರಿ ಎಂದು ಗುರುರಾಜ ಸನಿಲ್ ಅವರು ತಿಳಿಸಿದರು. ಉಪನ್ಯಾಸದ ಬಳಿಕ ಹಾವುಗಳು ಕಚ್ಚಿದರೆ ಮೊತ್ತಮೊದಲು ಮಾಡಬೇಕಾದ ಪ್ರಾಥಮಿಕ ಚಿಕಿತ್ಸೆಗಳ ಬಗ್ಗೆ ಪ್ರಾತ್ಯಕ್ಷಿಕೆ ಮೂಲಕ ತಿಳಿಸಿಕೊಟ್ಟರು. ನಂತರ ನಡೆದ ಸಂವಾದದಲ್ಲಿ ಕೇಳುಗರ ಪ್ರಶ್ನೆಗಳಿಗೆ ಉತ್ತರಿಸಿದರು. ತೆರೆಝಾ ಮಚಾದೋ, ವಿಜಯ್ ಡಿ’ ಸೋಜಾ, ಮಾಧವ ಕಾಮತ್, ಸುರೇಶ್ ಕಾಮತ್, ವಿಶ್ವೇಶ್, ಕೀರ್ತೇಶ್ ಎಸ್. ಮೊದಲಾದವರು ಸಂವಾದದಲ್ಲಿ ಭಾಗಿಯಾಗಿದ್ದರು.

ಮನೋಹರ್ ಶಂಕರಪುರ ಅಧ್ಯಕ್ಷತೆ ವಹಿಸಿದ್ದರು. ಭಾರತ್ ಸೇವಾದಳದ ಉಡುಪಿ ಜಿಲ್ಲಾ ಸಂಯೋಜಕರಾದ ಕವಿ ಫಕೀರ್ ಗೌಡ ಸ್ವರಚಿತ ಕವನ ವಾಚಿಸಿದರು. ಆಶ್ರಿತ್ ರೋಡ್ರಿಗಸ್ ಸ್ವಾಗತಿಸಿದರು. ಶ್ರೀರಾಮ ದಿವಾಣ ಪ್ರಸ್ತಾವನೆಗೈದರು. ದೀಪಕ್ ಮಚಾದೊ ವಂದಿಸಿದರು. ರೋಶಿನಿ ದಿವ್ಯಾ ಕ್ಯಾಸ್ಟಲಿನೋ ಕಾರ್ಯಕ್ರಮ ನಿರ್ವಹಿಸಿದರು.

ಪ್ರಾಥಮಿಕ ಚಿಕಿತ್ಸೆಯ ಪ್ರಾತ್ಯಕ್ಷಿಕೆ ಮತ್ತು ಫಕೀರ್ ಗೌಡರಿಂದ ಸ್ವರಚಿತ ಕವನ ವಾಚನ

Leave a Reply

Your email address will not be published. Required fields are marked *