Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಊರುಗಳ ಹೆಸರು ಬದಲಿಸಿದಂತೆ ಶಿಲಾಶಾಸನಗಳನ್ನೂ ಬದಲಾಯಿಸಲಾಗಿದೆ: ಪೇರೂರು ಜಾರು

ಉಡುಪಿ: ಊರುಗಳ ಮೂಲ ಹೆಸರುಗಳನ್ನು ಬದಲಾಯಿಸಿದಂತೆ ಶಿಲಾಶಾಸನಗಳನ್ನೂ ಬದಲಾಯಿಸಲಾಗಿದೆ. ‘ಆದಿ’ ಎಂಬ ಶಬ್ದದ ಮೂಲ ಅರ್ಥ ‘ಹೆಣ್ಣು’ ಎಂದಾಗಿದ್ದು, ತುಳುನಾಡಿನ ಮೂಲ ಸಂಸ್ಕೃತಿಯೂ ಹೆಣ್ಣು ಮೂಲದ ಸಂಸ್ಕೃತಿಯಾಗಿದೆ ಎಂದು ಹಿರಿಯ ತುಳು ಭಾಷಾ ವಿದ್ವಾಂಸ, ಜನಪದ ಸಂಶೋಧಕ, ಪತ್ರಕರ್ತ, ಲೇಖಕ, ಕವಿ ಪೇರೂರು ಜಾರು ಅವರು ಹೇಳಿದರು.

ಬೀಡಿನಗುಡ್ಡೆಯ ‘ಶ್ರೀ ಮುಖ್ಯಪ್ರಾಣ’ದಲ್ಲಿ ಸೆಪ್ಟೆಂಬರ್ 29ರಂದು ನಡೆದ ಜನಪರ ಚಿಂತನ ವೇದಿಕೆಯ ‘ತಿಂಗಳ ಬೆಳಕು’ ಕಾರ್ಯಕ್ರಮದಲ್ಲಿ ‘ತುಳು ಭಾಷೆ-ಸಂಸ್ಕೃತಿ’ ಎಂಬ ವಿಷಯದಲ್ಲಿ ಉಪನ್ಯಾಸ ನೀಡಿ ಅವರು ಮಾತನಾಡುತ್ತಿದ್ದರು.

ದೇಶದ ಶೇ. 80ರಷ್ಟು ಊರುಗಳ ಮೂಲ ಹೆಸರುಗಳು ನೀರಿಗೆ ಸಂಬಂಧಿಸಿದ್ದಾಗಿದೆ. ನೀರಿನ ಸಮೀಪ ಬದುಕು ಕಟ್ಟಿಕೊಂಡದ್ದು ಇದಕ್ಕೆಒಂದು ಕಾರಣ ಎಂದು ತಿಳಿಸಿದ ಪೇರೂರು ಜಾರು ಅವರು, ದಾಸ್ಯವನ್ನೂ, ದಾಸ್ಯತ್ವವನ್ನು ದಾಸ್ಯವೆಂದು ತಿಳಿದುಕೊಳ್ಳದೆ ಆನಂದಿಸುವುದು ಮತ್ತು ಕೀಳರಿಮೆಯಿಂದಾಗಿ ತುಳು ಜನರು ತಮ್ಮ ಮೂಲ ಸಂಸ್ಕೃತಿಯನ್ನು ಹಾಗೂ ನೈಜ ಇತಿಹಾಸವನ್ನು ಮರೆತುಬಿಡಲು ಕಾರಣವಾಯಿತೆಂದು ಅಭಿಪ್ರಾಯಪಟ್ಟರು.

ಹಿರಿಯ ಇತಿಹಾಸ ತಜ್ಙ, ನಿವೃತ್ತ ಶಿಕ್ಷಕ ಕೆ. ಶ್ರೀಧರ ಭಟ್ ಅವರು ಅಧ್ಯಕ್ಷತೆ ವಹಿಸಿದ್ದರು. ಜಾತಿ, ಮತ ಮರೆತು ಇತಿಹಾಸವನ್ನು ಓದಬೇಕು ಎಂದು ಹೇಳಿದ ಅವರು, ತುಳು ಜನರು ತಮ್ಮ ಮೂಲ ಸಂಸ್ಕೃತಿಯನ್ನು ಮರೆಯದೆ ಕೀಳರಿಮೆಯಿಂದ ಹೊರಬಂದು ಸ್ವಾಭಿಮಾನಧನರಾಗಬೇಕೆಂದು ಕರೆ ನೀಡಿದರು.

ಯೋಗೀಶ್ ಪೂಜಾರಿ ಅವರು ಅತಿಥಿ ಪೇರೂರು ಜಾರು ಅವರಿಗೆ ಸ್ಮರಣಿಕೆ ನೀಡಿದರು. ಕಾರ್ಯಕ್ರಮದಲ್ಲಿ ಗಾಂಧೀಜಿಯವರ ಕುರಿತಾದ ‘ನನ್ನ ಜೀವನವೇ ನನ್ನ ಸಂದೇಶ’ ಎಂಬ ಕಿರು ಹೊತ್ತಗೆಯನ್ನು ವಿತರಿಸಲಾಯಿತು. ಶ್ರೀರಾಮ ದಿವಾಣ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು. ಪ್ರಕಾಶ್ ಪೂಜಾರಿ ವಂದಿಸಿದರು.

Leave a Reply

Your email address will not be published. Required fields are marked *