Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಬ್ರಿಟೀಷರ ವಿರುದ್ಧವಿದ್ದುದೇ ಸ್ಮಾರ್ತ ಬ್ರಾಹ್ಮಣರ ವಶದಲ್ಲಿದ್ದ ಶೈವಾಲಯಗಳು ಮಾಧ್ವರ ವಶವಾಗಲು ಕಾರಣ !

ಕುಕ್ಕೆ ಕ್ಷೇತ್ರದ ಚಾರಿತ್ರಿಕ ಹಿನ್ನೆಲೆ- ಭಾಗ 38

  • ಡಾ. ಮ. ಸು. ಅಚ್ಚುತ ಶರ್ಮಾ, ಮಂಗಳೂರು

# ವಿಜಯನಗರದ ಪತನದಿಂದ ಶ್ರೀ ಶೃಂಗೇರಿ ಮಠಕ್ಕೆ ರಾಜಾಶ್ರಯವು ಕಡಿಮೆಯಾದುದರಿಂದ ಕನ್ನಡ ಜಿಲ್ಲೆಗೆ ಬಂದು ಅವರ ಶಿಷ್ಯ ವರ್ಗದವರನ್ನು ಮತ್ತು ದೇವಾಲಯಗಳನ್ನು ರಕ್ಷಿಸಲು ಮಠದವರಿಂದ ಆಗ ಸಾಧ್ಯವಾಗಲಿಲ್ಲ. 18ನೇ ಶತಮಾನದ ಹೈದರಾಲಿ ಟಿಪ್ಪುವಿನ ಕಾಲದಲ್ಲೂ ಅವರು ಶೃಂಗೇರಿ ಮಠಕ್ಕೆ ಅನುಕೂಲರಾಗಿದ್ದರೂ ಕನ್ನಡ ಜಿಲ್ಲೆಗೆ ಶೃಂಗೇರಿ ಮಠದಿಂದ ಸಹಾಯವನ್ನು ಕಳುಹಿಸಲು ಹೆಚ್ಚಿನ ಮಟ್ಟಿಗೆ ಸಾಧ್ಯವಾಗಲಿಲ್ಲ.

ಆದರೆ ಕೆಳದಿಯ ಶಿವಪ್ಪ ನಾಯಕರು, ಬಸವಪ್ಪ ನಾಯಕರು ಮತ್ತು ಅವರ ಮಗ ಸೋಮಶೇಖರ ನಾಯಕರು, ಶ್ರೀ ಶೃಂಗೇರಿ ಗುರುಗಳ ಕನ್ನಡ ಜಿಲ್ಲೆಯ ಸಂಚಾರದ ಕಾಲದಲ್ಲಿ ಅಂದರೆ 18ನೇ ಶತಮಾನದ ಆದಿಯಲ್ಲಿ ಸಹಾಯ ನೀಡಿದ್ದು ಮುಂದಿನ ದಾಕ್ಲೆಗಳಿಂದ ತಿಳಿದುಬರುತ್ತದೆ. 19ನೇ ಶತಮಾನದಲ್ಲೂ ಕಡು ಮಾಧ್ವರಾದ ಮೈಸೂರು ದಿವಾನ್ ಪೂರ್ಣಯ್ಯನವರ ಒಲವು ಉಡುಪಿ ಮಾಧ್ವ ಮಠದವರಿಗೆ ಹೆಚ್ಚಾಗಿ ಇದ್ದುದರಿಂದಲೂ ಶೃಂಗೇರಿ ಮಠದವರಿಗೆ ಕನ್ನಡ ಜಿಲ್ಲೆಯ ಸಂಪರ್ಕವು ಸಾಧಾರಣ ಮೂರು ಶತಮಾನಗಳಿಂದ ತಪ್ಪಿಹೋಗಿ ಕನ್ನಡ ಜಿಲ್ಲೆಯ ಹೆಚ್ಚಿನವರಿಗೆ ಈ ಮಾಧ್ವರ ಅಪಪ್ರಚಾರದಿಂದಾಗಿ ಘಟ್ಟದ ಮೇಲೆ ಶೃಂಗೇರಿ ಮಠವೆಂಬುದು ಒಂದು ಇದೆ ಎಂಬ ವಿಚಾರವೂ, ಆ ಶೃಂಗೇರಿ ಮಠದಲ್ಲಿ ಆದಿಶಂಕರಾಚಾರ್ಯರ ಪರಂಪರೆಗೆ ಸೇರಿದ ಸ್ಮಾರ್ತ ಸಂಪ್ರದಾಯದ ಜಗದ್ಗುರುಗಳೊಬ್ಬರು ಅಲ್ಲಿ ಇದ್ದಾರೆಂದೂ ಕೂಡ ಮರೆತುಹೋಯಿತು.

ಅದರಲ್ಲೂ ಜಿಲ್ಲೆಯ ಶೈವಾಲಯಗಳೂ, ಅವುಗಳ ಅರ್ಚಕ ಮತ್ತು ಆಡಳಿತೆದಾರರಾದ ಸ್ಥಳೀಯ ಸ್ಮಾರ್ತ ಬ್ರಾಹ್ಮಣರು ಈ ಮಾಧ್ವರ ಹಿಂಸೆಗೆ ಬಲಿಬೀಳಬೇಕಾಯಿತು. ಹಾಗಿದ್ದರೂ ಶ್ರೀ ಸುಬ್ರಹ್ಮಣ್ಯ ಮೊದಲಾದ ಹೆಚ್ಚಿನ ದೇವಾಲಯಗಳು 1845ರ ನಂತರವೇ ಮಾಧ್ವರ ಸ್ವಾಧೀನವಾದದ್ದು. 1836ರಿಂದ ಕನ್ನಡ ಜಿಲ್ಲೆಯಲ್ಲಿ ನಡೆದ ಕಲ್ಯಾಣಪ್ಪನೆಂಬ ಕೊಡಗ ಅರಸನ ಸ್ವಾತಂತ್ರ್ಯ ಸಮರದಲ್ಲಿ ಜಿಲ್ಲೆಯ ಸ್ಥಳೀಯ ಸ್ಮಾರ್ತ ಬ್ರಾಹ್ಮಣರು ಸಹಕರಿಸಿದರೆಂಬ ಆಪಾದನೆಯಿಂದ ಅವರ ಹೆಚ್ಚಿನ ದೇವಾಲಯಗಳು ಬ್ರಿಟೀಷ್ ಸರಕಾರದ ಒಲವಿನಿಂದ ಮಾಧ್ವರ ಕೈಗೆ ಹೋಗಲು ಒಂದು ಕಾರಣವಾಯಿತು.

ಮುಂದುವರಿಯುವುದು

Leave a Reply

Your email address will not be published. Required fields are marked *