Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಸಾಮಾಜಿಕ ಜಾಲತಾಣ ಸದ್ಬಳಕೆ ಮಾಡಿದರೆ ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆ: ದೇವಿಪ್ರಸಾದ್ ಶೆಟ್ಟಿ

ಉಡುಪಿ: ವಾಟ್ಸಾಪ್, ಫೇಸ್ ಬುಕ್ ಇತ್ಯಾದಿ ಸಾಮಾಜಿಕ ಜಾಲತಾಣಗಳನ್ನು ಆರೋಗ್ಯ, ಶಿಕ್ಷಣ, ಉದ್ಯೋಗವೇ ಮೊದಲಾದ ಜನೋಪಯೋಗಿ ವಿಷಯಗಳಿಗೆ ಸದ್ವಿನಿಯೋಗ ಮಾಡಿದರೆ ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆ ತರಲು ಸಾಧ್ಯವಾದೀತು. ದುರ್ಬಳಕೆ ಮಾಡುವ ಮೂಲಕ ಅಪಾಯಕ್ಕೆರವಾಗಬಾರದು. ಎಚ್ಚರಿಕೆಯಿಂದ, ಮಿತಿಯಲ್ಲಿ ಇವುಗಳನ್ನೆಲ್ಲ ಬಳಸುವಂತಾಗಬೇಕು ಎಂದು ಸಾಮಾಜಿಕ ಕಾರ್ಯಕರ್ತರಾದ ದೇವಿಪ್ರಸಾದ್ ಶೆಟ್ಟಿ ನಿಟ್ಟೆ ಅವರು  ಹೇಳಿದರು.

ಕುರ್ಕಾಲು ಸುಭಾಸ್ ನಗರದ ಫೆರ್ನಾಂಡಿಸ್ ಕಂಪೌಂಡಿನಲ್ಲಿ ನಡೆದ ಚಿಂತನ ವೇದಿಕೆಯ ನವೆಂಬರ್ವ ‘ಮಾಸದ ಮಾತು’ ವಿನಲ್ಲಿ ‘’ಸಾಮಾಜಿಕ ಜಾಲತಾಣಗಳು : ಸದ್ಬಙಳಕೆ ಮತ್ತು ದುರ್ಬಳಕೆ’’ ಎಂಬ ವಿಷಯದಲ್ಲಿ ದೇವಿಪ್ರಸಾದ್ ಶೆಟ್ಟಿ ಅವರು ಉಪನ್ಯಾಸ ನೀಡಿ ಮಾತನಾಡುತ್ತಿದ್ದರು.

ಸದ್ಬಳಕೆಯಿಂದಾಗುವ ಲಾಭಗಳನ್ನು ಮತ್ತು ದುರ್ಬಳಕೆಯಿಂದಾಗುವ ನಷ್ಟಗಳನ್ನು ಅವರು ಉದಾಹರಣೆಗಳೊಂದಿಗೆ ವಿವರಿಸಿದರು. ಉಪನ್ಯಾಸದ ಬಳಿಕ ಸಂವಾದ ನಡೆಯಿತು. ರಿಚರ್ಡ್ ದಾಂತಿ ಪಡುಬೆಳ್ಳೆ, ರಾಯನ್ ಮಥಾಯಸ್, ರಾಯನ್ ಫೆರ್ನಾಂಡಿಸ್,  ಶ್ರೀರಾಮ ದಿವಾಣ, ಮಾಲಿನಿ ಶೆಟ್ಟಿ, ಪ್ರವೀಣ್ ಪೂಜಾರಿ ಮೊದಲಾದವರು ಸಂವಾದದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು.

ಶ್ರೀಮತಿ ಆ್ಯಗ್ನೇಸ್ ಡೇಸಾ ಅಧ್ಯಕ್ಷತೆ ವಹಿಸಿದ್ದರು. ದೀಪಕ್ ಮಚಾದೋ ಸ್ವಾಗತಿಸಿದರು. ಕೀರ್ತೇಶ್ ಬ್ರಹ್ಮಾವರ ಕಾರ್ಯಕ್ರಮ ನಿರ್ವಹಿಸಿದರು.

Leave a Reply

Your email address will not be published. Required fields are marked *