Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಉಡುಪಿ: ಡಿ.ಎಚ್.ಒ ಡಾ. ಅಶೋಕ್ ಎಚ್.ಗೆ ಹುದ್ದೆ ತೋರಿಸದೆ ವರ್ಗಾವಣೆ- ಆರೋಪದ ಹಿನ್ನೆಲೆ !

ಉಡುಪಿ: ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಅಶೋಕ್ ಎಚ್. ಅವರನ್ನು ಮುಂದಿನ ಹುದ್ದೆ ತೋರಿಸದೆ ಹಿಂಭಡ್ತಿಯೊಂದಿಗೆ ವರ್ಗಾಯಿಸಲಾಗಿದೆ. ಇದನ್ನು ಶಿಕ್ಷಾರ್ಹ ವರ್ಗಾವಣೆ ಎಂದೂ ವಿಶ್ಲೇಷಿಸಲಾಗುತ್ತಿದೆ.

ಡಾ. ಅಶೋಕ್ ಎಚ್.  ಅವರಿಂದ ತೆರವಾಗಲಿರುವ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖಾಧಿಕಾರಿ ಸ್ಥಾನದ ಪ್ರಭಾರ ಅಧಿಕಾರಿಯಾಗಿ ಬಾರ್ಕೂರು ಪ್ರಾಥಮಿಕ ಆರೋಗ್ಯಾಧಿಕಾರಿಯಾಗಿದ್ದ ಡಾ. ಸುಧೀರ್ ಚಂದ್ರ ಸೂಡ ಅವರನ್ನು ನಿಯುಕ್ತಿಗೊಳಿಸಿ ನವೆಂಬರ್ 27ರಂದು ಸರಕಾರ ಆದೇಶಿಸಿದೆ.

ಗಂಭೀರ ಆರೋಪಗಳ ಹಿನ್ನೆಲೆಯಲ್ಲಿ ಡಾ. ಅಶೋಕ್ ಅವರನ್ನು ಉಡುಪಿ ಡಿ ಎಚ್ ಓ ಸ್ಥಾನದಿಂದ ತಕ್ಷಣದಿಂದ ಜ್ಯಾರಿಗೆ ಬರುವಂತೆ ವರ್ಗಾಯಿಸಿ ಆದೇಶಿಸಲಾಗಿದೆ. ಕೆಲವು ತಿಂಗಳುಗಳ ಹಿಂದೆಯಷ್ಟೇ ಡಾ. ಅಶೋಕ್ ಅವರನ್ನು ಉಡುಪಿ ಡಿ ಎಚ್ ಓ ಆಗಿ ನಿಯುಕ್ತಿಗೊಳಿಸಲಾಗಿತ್ತು.

ಉಡುಪಿಗೆ ಬರುವ ಮೊದಲು ಮಂಗಳೂರಿನಲ್ಲಿದ್ದ ಡಾ. ಅಶೋಕ್ ಅವರು ಆರೋಗ್ಯ ಇಲಾಖೆಯ  ವಿವಿಧ ವಿಭಾಗಗಳಲ್ಲಿ ಸೇವೆ ಸಲ್ಲಿಸುತ್ತಿದ್ದ ಮಹಿಳಾ ಸಿಬ್ಬಂದಿಗಳಿಗೆ ಅಶ್ಲೀಲ ಸಂದೇಶಗಳನ್ನು ರವಾನಿಸುತ್ತಿದ್ದ ಗಂಭೀರ ಆರೋಪದ ಹಿನ್ನೆಲೆಯಲ್ಲಿ ಅಮಾನತು ಮಾಡಲಾಗಿತ್ತು ಮತ್ತು ಬಳಿಕ ಅಮಾನತು ಹಿಂತೆಗೆದುಕೊಂಡು ಹುದ್ದೆ ನೀಡಲಾಗಿತ್ತು.

Leave a Reply

Your email address will not be published. Required fields are marked *