Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಪಾಪನಾಶಿನಿ ನದಿಯಲ್ಲಿ ಶವಪತ್ತೆ

ಉಡುಪಿ: ಬೆಳ್ಳೆ ಗ್ರಾಮದ ನೆಲ್ಲಿಕಟ್ಟೆಯ ತಬೈಲ್ ಎಂಬಲ್ಲಿ ಪಾಪನಾಶಿನಿ ನದಿಯಲ್ಲಿ ವ್ಯಕ್ತಿಯೋರ್ವರ ಶವ ಎ.6 ರಂದು ಬೆಳಗ್ಗೆ ನಿಗೂಢ ರೀತಿಯಲ್ಲಿ ಪತ್ತೆಯಾಗಿದ್ದು, ಕೆಲವೊಂದು ಸಂಶಯಗಳಿಗೆ ಕಾರಣವಾಗಿದೆ.
ಮೃತ ವ್ಯಕ್ತಿಯನ್ನು ಬೆಳ್ಳೆ ಗ್ರಾಮದ ಕಡಂಬಿಲ ನಿವಾಸಿ, ಬೆಳ್ಳೆ ಪೇಟೆಯಲ್ಲಿ ತಲೆ ಹೊರೆ ಕಾರ್ಮೀಕರಾಗಿರುವ ಶ್ರೀನಿವಾಸ ನಾಯಕ್ (35) ಎಂದು ಗುರುತಿಸಲಾಗಿದೆ. ತಾಯಿ, ಪತ್ನಿ ಹಾಗೂ ಮೂವರು ಮಕ್ಕಳೊಂದಿಗೆ ವಾಸವಾಗಿರುವ ಶ್ರೀನಿವಾಸ್ ನಾಯಕ್ ರವರಿಗೆ ಕುಡಿತದ ಚಟ ಬಿಟ್ಟರೆ ಬೇರೆ ಯಾವುದೇ ಚಟ ಇಲ್ಲವೆನ್ನಲಾಗಿದೆ. ಜೀವನದಲ್ಲಿ ಜಿಗುಪ್ಸೆ ಪಡುವಂತಹ ಯಾವುದೇ ಘಟನೆಯೂ ನಡೆದಿಲ್ಲ ಎಂದು ಮನೆಯವರು ಹಾಗೂ ಪರಿಸರವಾಸಿಗಳು ತಿಳಿಸಿದ್ದಾರೆ.
ಸ್ವಲ್ಪ ಜಮೀನು ಇದ್ದು, ಇದಕ್ಕೆ ಸಂಬಂಧಿಸಿದಂತೆ ಯಾವುದಾದರು ವಿವಾದ, ಸಮಸ್ಯೆ ಇದ್ದಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದ್ದು, ಇದೇ ಪ್ರಕರಣದಲ್ಲಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಅಥವಾ ಯಾರಾದರೂ ಅತ್ಯಂತ ವ್ಯವಸ್ಥಿತವಾಗಿ ಕೊಲೆ ಮಾಡಿರಬಹುದು ಎಂದು ಸಂಶಯ ವ್ಯಕ್ತಪಡಿಸಲಾಗಿದೆ.
ಶರ್ಟ್, ಪ್ಯಾಂಟ್ ಮತ್ತು ಚಪ್ಪಲಿಯನ್ನು ನದಿ ಕಿನಾರೆಯಲ್ಲಿ ಕಳಚಿಟ್ಟಿದ್ದು, ಇದರಲ್ಲಿ ಮೊಬೈಲ್, ಸ್ವಲ್ಪ ಹಣ, ಬಂಟಕಲ್ಲು ಶ್ರೀ ದುರ್ಗಾಪರಮೇಶ್ವರಿ ದೇವಾಲಯದ ಸೇವಾ ರಶೀದಿ, ಮೂರು ಮೊಬೈಲ್ ನಂಬರ್ ಗಳನ್ನು ಬರೆದಿರುವ ಸಣ್ಣ ಚೀಟಿ ಇತ್ತು.
ಎ.4 ರಂದು ಸಂಜೆ ಗಂಟೆ 7.30 ಕ್ಕೆ ಶ್ರೀನಿವಾಸ ನಾಯಕ್ ಅವರು ಮನೆಯಿಂದ
ನಾಪತ್ತೆಯಾಗಿದ್ದರು ಎಂದು ಮನೆಯವರು ಹೇಳಿದ್ದಾರೆ. ಶಿರ್ವ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಕೆ.ಆರ್.ನಾಯ್ಕ ಹಾಗೂ ಸಿಬ್ಬಂಧಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದು, ತನಿಖೆ ನಡೆಸಿದ್ದಾರೆ. ಮೃತದೇಹವನ್ನು ಅಜ್ಜರಕಾಡಿನಲ್ಲಿರುವ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಿ ಕುಟುಂಬದವರಿಗೆ ಬಿಟ್ಟುಕೊಡಲಾಗಿದೆ.

Leave a Reply

Your email address will not be published. Required fields are marked *