Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಉಡುಪಿ: ವಿವಿಧೆಡೆ ನೆರೆ, ಅಪಾಯ ಸ್ಥಿತಿಯಲ್ಲಿ ಮನ ೆಗಳು

ಉಡುಪಿ: ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಜಿಲ್ಲೆಯ ವಿವಿಧ ಗ್ರಾಮಗಳು ನೆರೆನೀರಿನಿಂದಾವೃತವಾಗಿದ್ದು, ಲಕ್ಷಾತರ ರು. ನಾಶ – ನಷ್ಟ ಉಂಟಾಗಿದೆ. ನಾಶ – ನಷ್ಟ ಉಂಟಾದ ಗ್ರಾಮಗಳಿಗೆ ಸರಕಾರಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಭೆಟಿ ನೀಡಿದ್ದು, ಸೂಕ್ತ ವ್ಯವಸ್ಥೆ ಕಲ್ಪಿಸಿಕೊಡುವ ನಿಟ್ಟಿನಲ್ಲಿ ತುರ್ತು ಕ್ರಮಗಳನ್ನು ಕೈಗೊಂಡಿದ್ದಾರೆ.
ಉಡುಪಿ ತಾಲೂಕಿನ ಉಪ್ಪೂರು, ಜಾಥಬೆಟ್ಟು, ಉಗ್ಗೇಲ್ ಬೆಟ್ಟು, ಹೇರೂರು, ಆರೂರು, ಬೆಳ್ಮಾರು, ಹಾವಂಜೆ, ಬೆಣ್ಣೆಕುದ್ರು, ಕಳವಿನಬಾಗಿಲು ಮೊದಲಾದ ಊರುಗಳು ನೆರೆ ನೀರಿನೀಮದ ಸುತ್ತುವರಿಯಲ್ಪಟ್ಟಿವೆ.
ಹೇರೂರಿನಲ್ಲಿನ ತೂಗು ಸೇತುವೆಯೊಂದು ಭಾಗಶಃ ಹಾನಿಗೀಡಾಗಿದ್ದು, 10 ಲಕ್ಷ ರು. ನಷ್ಟ ಅಂದಾಜಿಸಲಾಗಿದೆ. ಬೆಳ್ಮಾರಿನಲ್ಲಿ 25 ಮನೆಗಳು ನೆರೆ ನೀರಿನಿಂದ
ಸುತ್ತುವರಿಯಲ್ಪಟ್ಟಿದ್ದು, ಅಪಾಯಕಾರಿ ಸ್ಥಿತಿಯಲ್ಲಿವೆ. ಇವುಗಳಲ್ಲಿ 13
ಕುಟುಂಬಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಉಳಿದ ಕುಟುಂಬಗಳನ್ನು ಸ್ಥಳಾಂತರಿಸುವ ಪ್ರಕ್ರಿಯೆ ನಡೆಸಲಾಗುತ್ತಿದೆ. ಹಾವಂಜೆ ಗ್ರಾಮದ 4 ಕುಟುಂಬಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ.
ಉಗ್ಗೇಲ್ ಬೆಟ್ಟುವಿನ ಪ್ರಾಥಮಿಕ ಶಾಲೆಯಲ್ಲಿ ಸಂತ್ರಸ್ತರಿಗಾಗಿ ಗಂಜಿ ಕೇಂದ್ರ ಆರಂಭಿಸಲಾಗಿದೆ. ಇಲ್ಲೆಲ್ಲಾ ಬೋಟ್ ಮತ್ತು ದೋಣಿಗಳನ್ನು ಸನ್ನದ್ಧ ಸ್ಥತಿಯಲ್ಲಿ ಇರಿಸಲಾಗಿದೆ.

Leave a Reply

Your email address will not be published. Required fields are marked *