Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಅಂಶುಮಾಲಿಯವರ ಕಾದಂಬರಿಗೆ ಪಣಿಯಾಡಿ ಪ್ರಶಸ್ತಿ

ಉಡುಪಿ: ಕಡೆಂಗೋಡ್ಲು ಮತ್ತು ಮುದ್ದಣ ಕಾವ್ಯ ಪುರಸ್ಕಾರ ಪಡೆದಿರುವ ಖ್ಯಾತ ಕವಿ ಉಡುಪಿಯ ಅಂಶುಮಾಲಿ ಅವರು ಇತ್ತೀಚೆಗೆ ಬರೆದ ‘ಉಪ್ಪಡ್’ ಎಂಬ ತುಳು ಕಾದಂಬರಿಗೆ ಉಡುಪಿಯ ತುಳುಕೂಟವು ಕೊಡಮಾಡುವ 18 ನೇ ವರ್ಷದ ‘ಪಣಿಯಾಡಿ ಪ್ರಶಸ್ತಿ’ ಲಭಿಸಿದೆ.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸಹಕಾರದೊಂದಿಗೆ ತುಳುಕೂಟವು ಇಂದು ಸಂಜೆ ನಗರದ ಕಿದಿಯೂರು ಹೋಟೇಲಿನ ರೂಫ್ ಟಾಪ್ ನಲ್ಲಿ ಆಯೋಜಿಸಿದ ಸಮಾರಂಭದಲ್ಲಿ ಅಂಶುಮಾಲಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿ, ಸಮ್ಮಾನಿಸಲಾಯಿತು.
ತುಳು ಅಕಾಡೆಮಿ ರಿಜಿಸ್ಟ್ರಾರ್ ಚಂದ್ರಹಾಸ ರೈ, ಹಿರಿಯ ವಿಮರ್ಶಕ ಪ್ರೊ.ಮುರಳೀಧರ ಉಪಾಧ್ಯ ಹಿರಿಯಡ್ಕ, ಹಿರಿಯ ಲೇಖಕ ಬೋಲ ಚಿತ್ತರಂಜನ್ ದಾಸ್ ಶೆಟ್ಟಿ, ತುಳುಕೂಟದ ಅಧ್ಯಕ್ಷ ಡಾ.ಭಾಸ್ಕರಾನಂದ ಕುಮಾರ್, ಕಾರ್ಯದರ್ಶಿ ಯು.ಜೆ.ದೇವಾಡಿಗ ಹಾಗೂ ಪ್ರಶಸ್ತಿ ಸಮಿತಿ ಸಂಚಾಲಕ ಗಂಗಾಧರ ಕಿದಿಯೂರು ಸಮಾರಂಬದಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *