Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಫೆ.1: ದುಬೈನಲ್ಲಿ ಮೊದಲ ಬಡಗುತಿಟ್ಟು ಯಕ್ಷಗಾನ

ಉಡುಪಿ: ದುಬೈನ ‘ಯಕ್ಷಕಲಾ ವೃಂದ’ವು ಇದೇ ಮೊದಲ ಬಾರಿಗೆ ಬಡಗುತಿಟ್ಟು ಯಕ್ಷಗಾನ ಕಲಾವಿದರ ತಂಡವನ್ನು ದುಬೈಗೆ ಕರೆಸಿ ಪ್ರದರ್ಶನವನ್ನು ಹಮ್ಮಿಕೊಳ್ಳುವ ಮೂಲಕ ಕರಾವಳಿಯ ಉನ್ನತವಾದ ಸಾಂಸ್ಕೃತಿಕ ಪರಂಪರೆಯೊಂದನ್ನು ಕಲಾ ರಸಿಕರಿಗೆ ಉಣಬಡಿಸಲು
ನಿರ್ಧರಿಸಲಾಗಿದೆ ಎಂದು ಯಕ್ಷಕಲಾ ವೃಂದದ ಸಂಚಾಲಕರಾದ ಪದ್ಮರಾಜ್ ಎಕ್ಕಾರ್ ಹಾಗೂ ಪರಮಾನಂದ ಸಾಲ್ಯಾನ್ ತಿಳಿಸಿದ್ದಾರೆ.
ಉಡುಪಿ ಪ್ರೆಸ್ ಕ್ಲಬ್ ನಲ್ಲಿ ಸೆ.17 ರಂದು ನಡೆಸಿದ ಮಾಧ್ಯಮಗೋಷ್ಟಿಯಲ್ಲಿ ಅವರು ಈ ವಿಷಯವನ್ನು ತಿಳಿಸಿದರು. ತೆಂಕುತಿಟ್ಟು ಯಕ್ಷಗಾನ ಕಲಾವಿದರು ದುಬೈ ನಲ್ಲಿ ಹಲವು ಸಲ ಪ್ರದರ್ಶನ ನೀಡಿದ್ದಾರಾದರೂ, ಬಡಗುತಿಟ್ಟು ಕಲಾವಿದರ ಯಕ್ಷಗಾನ ಪ್ರದರ್ಶನ ಇದುವರೆಗೆ ನಡೆದಿರಲಿಲ್ಲ. ಈ ಕೊರತೆಯನ್ನು ನೀಗಿಸುವ ನಿಟ್ಟಿನಲ್ಲಿ ಕಲಾ ರಸಿಕರ
ಬೇಡಿಕೆಯನ್ನನುಸರಿಸಿ ಈ ಯಕ್ಷಗಾನ ಪ್ರದರ್ಶನವನ್ನು ಆಯೋಜಿಸಲಾಗಿದೆ ಎಂದು ಅವರು ಹೇಳಿದರು.
2013 ರ ಫೆಬ್ರವರಿ 1 ರಂದು ದುಬೈ ನ ಇಂಡಿಯನ್ ಸ್ಕೂಲ್ ರಾಸಿಡ್ ಅಡಿಟೋರಿಯಂನಲ್ಲಿ ಯಕ್ಷಗಾನ ಪ್ರದರ್ಶನ ನಡೆಯಲಿದೆ. ಹಿಮ್ಮೇಳ ಮತ್ತು ಮುಮ್ಮೇಳವೂ ಸೇರಿ, ಅತಿಥಿ ಕಲಾವಿದರ ಸಹಿತ, ಕುಂದಾಪುರ ತಾಲೂಕಿನ ಶ್ರೀ ಪೂರ್ಣಚಂದ್ರ ಯಕ್ಷಕಲಾ ಪ್ರತಿಷ್ಠಾನ (ರಿ) ಕೊಂಡದಕುಳಿ, ಕುಂಭಾಶಿ ಇದರ 15 ಮಂದಿ ಕಲಾವಿದರು ದುಬೈನಲ್ಲಿ ‘ಮಧುರಾ ಮಹೀಂದ್ರ’ ಯಕ್ಷಗಾನವನ್ನು ಪ್ರದರ್ಶಿಸಲಿದ್ದಾರೆ.
ಕಲಾವಿದರಿಗೆ ಪ್ರಯಾಣವೆಚ್ಚ, ವಸತಿ ವೆಚ್ಚ ಭರಿಸುವುದಲ್ಲದೆ, ಆರ್ಥಿಕ ಸಂಭಾವನೆ ನೀಡಲಾಗುವುದು. ಮಾತ್ರವಲ್ಲ, ಕಾರ್ಯಕ್ರಮದ ಸಂದರ್ಭದಲ್ಲಿ ಕಲಾವಿದರನ್ನು
ಗೌರವಿಸಲಾಗುವುದು. ಈ ಕಾರ್ಯಕ್ರಮವನ್ನು ಎಂದು ಸಂಘಟಕರು ಮಾಹಿತಿ ನೀಡಿದರು. ಯಕ್ಷಗಾನದ ಮೇಲಿನ ವಿಶೇಷ ಅಭಿಮಾನದಿಂದ ಈ ಪ್ರದರ್ಶನವನ್ನು ಆಯೋಜಿಸಲಾಗಿದೆ. ಇದರಲ್ಲಿ ಬೇರೆ ಯಾವುದೇ ರೀತಿಯ ಲಾಭ ಮಾಡುವ ಉದ್ದೇಶವಿಲ್ಲ. ಹಾಗಾಗಿ ಒಂದೇ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಪದ್ಮರಾಜ್ ಎಕ್ಕಾರಿ ಸ್ಪಷ್ಟಪಡಿಸಿದರು.
ಹಿಮ್ಮೇಳದಲ್ಲಿ ಕೇಶವ ಹೆಗಡೆ ಕೊಳಗಿ, ಶಂಕರ ಭಾಗವತ ಯಲ್ಲಾಪುರ, ಲಕ್ಷ್ಮೀನಾರಾಯಣ ರಾವ್ ಸಂಪ, ಮುಮ್ಮೇಳದಲ್ಲಿ ರಾಮಚಂದ್ರ ಹೆಗಡೆ ಕೊಂಡದಕುಳಿ, ಶಂಕರ ಹೆಗಡೆ ನೀಲ್ಕೋಡು, ನಾಗೇಂದ್ರ ಮುರೂರು, ಸಂಜಯ ಬೆಳೆಯೂರು, ಶ್ರೀಧರ ಹೆಗಡೆ ಚಪ್ಪರಮನೆ, ಗಣಪತಿ ಹೆಗಡೆ ತೋಟಿಮನೆ, ಅಶೋಕ್ ಭಟ್ ಸಿದ್ದಾಪುರ ಹಾಗೂ ದುಬೈ ನಲ್ಲಿಯೇ ನೆಲೆಸಿರುವ ಗಿರಿಧರ ನಾಯಕ್ ಮೊದಲಾದವರು ಪ್ರದರ್ಶನ ನೀಡಲಿದ್ದಾರೆ ಎಂದು ಪರಮಾನಂದ ಸಾಲ್ಯಾನ್ ಹಾಗೂ ಪದ್ಮರಾಜ್ ಎಕ್ಕಾರ್ ವಿವರ ನೀಡಿದರು.

Leave a Reply

Your email address will not be published. Required fields are marked *