Realtime blog statisticsweb statistics
udupibits.in
Breaking News
ಉಡುಪಿ: ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಹಾಗೂ ಬಿಜೆಪಿ ಬೆಂಬಲಿಸಿ ವರದಿ ಪ್ರಕಟಿಸಿದ ಉದಯವಾಣಿ ವಿರುದ್ಧ ಶ್ರೀರಾಮ ದಿವಾಣರಿಂದ ಚುನಾವಣಾ ಆಯೋಗಕ್ಕೆ ದೂರು

ಬಸ್ ಅಪಘಾತ: ಹಲವರಿಗೆ ಗಾಯ

ಉಡುಪಿ: ಉಡುಪಿಯಿಂದ ಕಟಪಾಡಿ- ಅಲೆವೂರು ಮಾರ್ಗವಾಗಿ ಮಣಿಪಾಲಕ್ಕೆ ಸಂಚರಿಸುವ ಖಾಸಗಿ ಸವರ್ಿಸ್ ಬಸ್ ಅಲೆವೂರು- ಮಣಿಪಾಲ ನಡುವಿನ ಮಂಚಿ ಪದವು ಎಂಬಲ್ಲಿ 20 ಮೀಟರ್ ಹಿಮ್ಮುಖವಾಗಿ ಸಂಚರಿಸಿ, ಚಾಲಕನ ನಿಯಂತ್ರಣ ತಪ್ಪಿ ಚರಂಡಿಗೆ ಬಿದ್ದ ಪರಿಣಾಮವಾಗಿ ಹಲವಾರು ಮಂದಿ ಪ್ರಯಾಣಿಕರು ಗಾಯಗೊಂಡ ಘಟನೆ ಇಂದು ಸಂಭವಿಸಿದೆ.
ಬಸ್ ಹಿಮ್ಮುಖವಾಗಿ ಚಲಿಸಿದ ಕಾರಣ, ಬಸ್ ನ ಹಿಂಬದಿಯಿಂದ ಬರುತ್ತಿದ್ದ ಸೈಕಲ್ ಗೆ ಡಿಕ್ಕಿ ಹೊಡೆದಿದೆ. ಇದರಿಂದಾಗಿ ಸೈಕಲ್ ಜಖಂಗೊಂಡಿದೆ. ಬಸ್ ಹಿಮ್ಮುಖವಾಗಿ ಚಲಿಸುತ್ತಿರುವುದನ್ನು ಗಮನಿಸಿದ ಸೈಕಲ್ ಸವಾರ ಕ್ಷಣಾರ್ಧದಲ್ಲಿಯೇ ಸೈಕಲ್ ಬಿಟ್ಟು ಓಡಿದ ಕಾರಣ ಸೈಕಲ್ ಸವಾರ ಬಚಾವಾಗಿದ್ದಾನೆ.

Leave a Reply

Your email address will not be published. Required fields are marked *