Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಕಳಸ ಆಶ್ರಮವಾಸಿಯ ಶವ ಶಿರ್ವದ ಬಾವಿಯಲ್ಲಿ ಪತ್ತೆ

ಉಡುಪಿ: ಚಿಕ್ಕಮಗಳೂರು ಜಿಲ್ಲೆಯ ಕಳಸದ ಆಶ್ರಮವೊಂದರಲ್ಲಿ ವಾಸವಾಗಿದ್ದ ಸಂತಾನ ಡಿ’ಸೋಜ (60) ಎಂಬವರ ಮೃತದೇಹವು, ಉಡುಪಿ ತಾಲೂಕಿನ ಪಿಲಾರ್ ಗ್ರಾಮದ ಮಿತ್ತಬೆಟ್ಟು ಎಂಬಲ್ಲಿರುವ ಗ್ರೆಟ್ಟೋ ಒಂದರ ಪಕ್ಕದ ಬಾವಿಯಲ್ಲಿ ಪತ್ತೆಯಾಗಿದೆ.
ಶ್ರೀಮತಿ ಬೆನೆಡಿಕ್ಟ್ ಡಿ’ಸೋಜ ಎಂಬವರು ಪ್ರಾರ್ಥನೆ ಸಲ್ಲಿಸಲು ಮನೆ ಸಮೀಪದ ಕಾಲಿ ಜಾಗದಲ್ಲಿರುವ ಗ್ರೆಟ್ಟೊ ಬಳಿ ಬಂದಾಗ, ಗ್ರೆಟ್ಟೊದಲ್ಲಿ ಕೊಡೆ ಮತ್ತು ಕನ್ನಡಕ ಕಂಡುಬಂತು. ಸಂಶಯಗೊಂಡು ಪಕ್ಕದಲ್ಲಿರುವ ಬಾವಿಯನ್ನು ಇಣುಕಿ ನೋಡಿದಾಗ ಶವ
ತೇಲುತ್ತಿರುವುದು ಕಂಡುಬಂತು ಎನ್ನಲಾಗಿದೆ.
ಸಂತಾನ ಡಿ’ಸೋಜ ಅವರಿಗೆ ಮನೆಯವರು ಎಂದು ಯಾರೂ ಇಲ್ಲವೆನ್ನಲಾಗಿದೆ. ಅಸೌಖ್ಯದಿಂದಲೂ ಬಳಲುತ್ತಿದ್ದರು ಎಂದು ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ ಜೀವನದಲ್ಲಿ ಜುಗುಪ್ಸೆಗೊಂಡು ಬಾವಿಗೆ ಹಾರಿ ಆತ್ಮಹತ್ಯೆ ಮಡಿಕೊಂಡಿರಬಹುದೆಂದು ಊಹಿಸಲಾಗಿದೆ. ಈ ಬಗ್ಗೆ
ಮಿತ್ತಬೆಟ್ಟು ನಿವಾಸಿ ಡೋಲ್ಫಿ ರೆಬೆಲ್ಲೋ ನೀಡಿದ ದೂರಿನ ಪ್ರಕಾರ ಶಿರ್ವ ಠಾಣೆಯ ಪೋಲಿಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *