Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಅರ್ಚಕರ ಸಮ್ಮೇಳನದಲ್ಲಿ ಮಾತಿನ ಪೆಟ್ಟು ಕೊಟ್ಟ ಕ ೋಟ !

ಉಡುಪಿ: ರಾಜ್ಯದ 123 ತಾಲೂಕುಗಳಲ್ಲಿ ತೀವ್ರ ಬರಗಾಲ ತಾಂಡವವಾಡುತ್ತಿದ್ದಾಗ ಮುಜರಾಯಿ ಸಚಿವನಾಗಿ ಮುಜರಾಯಿ ದೇವಾಲಯಗಳಲ್ಲಿ ಮಳೆಗಾಗಿ ಪ್ರಾರ್ಥನೆ ಸಲ್ಲಿಸುವಂತೆ
ಆದೇಶಿಸಿದ್ದು ತಪ್ಪೇ ? ಶಾಲಾ ಪಠ್ಯದಲ್ಲಿ ಭಗವದ್ಗೀತೆಯನ್ನು ಅಳವಡಿಸಲು ಮುಂದಾದಾಗ ಬ್ರಾಹ್ಮಣ್ಯದ ಅಳವಡಿಕೆ ಎಂದರಲ್ಲವೇ ಕೆಲವರು, ಕೃಷ್ಣ- ಅಜರ್ುನರು ಬ್ರಾಹ್ಮಣರೇ ಎಂದು ಖಾರವಾಗಿ ಪ್ರಶ್ನಿಸಿದ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರು, ಇದನ್ನೆಲ್ಲಾ ವಿರೋಧಿಸುವವರಿಗೆ ತಲೆಯಲ್ಲಿ ಮಿದುಳಿಲ್ಲವೆಂದು ಕಾಣುತ್ತದೆ ಎಂದು ವ್ಯಂಗ್ಯವಾಡಿದ ಪ್ರಸಂಗ ಇಂದು ಬೆಳಗ್ಗೆ ಉಡುಪಿ ರಾಜಾಂಗಣದಲ್ಲಿ ಜರುಗಿದ ಜಿಲ್ಲಾ ಮಟ್ಟದ ಅರ್ಚಕರ ಸಮ್ಮೇಳನದಲ್ಲಿ ನಡೆಯಿತು.
ಉಡುಪಿ ಜಿಲ್ಲಾ ಧಾರ್ಮಿಕ ಪರಿಷತ್ತು ಮತ್ತು ಮುಜರಾಯಿ ದೇವಾಲಯಗಳ ಅರ್ಚಕರ ಸಂಘದ ಸಂಯುಕ್ತ ಆಶ್ರಯದಲ್ಲಿ ನಡೆದ ಅರ್ಚಕರ ಸಮ್ಮೇಳನದಲ್ಲಿ ಅಧ್ಯಕ್ಷತೆವಹಿಸಿ ಅವರು ಮಾತನಾಡುತ್ತಿದ್ದರು.
ಮಳೆಗಾಗಿ ಪ್ರಾರ್ಥನೆ ಮಾಡುವಂತೆ ದೇವಾಲಯಗಳ ಅರ್ಚಕರಿಗೆ ಆದೇಶಿಸಿದಾಗ ಕೆಲವರು ಬೆಂಗಳೂರಿನಲ್ಲಿ ತನ್ನನ್ನು ಬಂಧಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು. ಆಗ ತನ್ನನ್ನು ಬೆಂಬಲಿಸದೆ ನಿಷ್ಕ್ರೀಯರಾಗಿದ್ದ ದೇವಾಲಯ – ಮಠಗಳ ಅರ್ಚಕ ಸಮುದಾಯದ ವಿರುದ್ಧ ಸಚಿವರು ನೇರವಾಗಿ ಅಸಮಾಧಾನ ವ್ಯಕ್ತಪಡಿಸಿದ ವಿದ್ಯಾಮಾನವೂ ಅರ್ಚಕರ ಸಮ್ಮೇಳನದಲ್ಲಿ ನಡೆಯಿತು. ತನ್ನನ್ನು ಬೆಂಬಲಿಸಿ ಒಂದು ಪತ್ರಿಕಾ ಹೇಳಿಕೆಯನ್ನಾದರೂ ಕೊಡಬಹುದಿತ್ತಲ್ಲ ಎಂದು ಪ್ರಶ್ನಿಸಿ ಅರ್ಚಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಮುಜರಾಯಿ ದೇವಾಲಯಗಳಿಂದ ಗ್ರಾಮಾಭಿವೃದ್ಧಿ, ಹರಿಕಥೆ, ಭಗವದ್ಗೀತೆ, ಮಹಾಭಾರತ, ರಾಮಾಯಣಗಳ ಬಗ್ಗೆ ಪ್ರವಚನ, ಭಜನೆ ಇತ್ಯಾದಿಗಳ ಪುನರಾರಂಭಕ್ಕೆ ಇಲಾಖೆ ಚಿಂತನೆ ನಡೆಸಿದೆ ಎಂದು ಸಚಿವ ಕೋಟ ತಿಳಿಸಿದರು.
ದೇವಾಲಯಗಳು ಅರ್ಚಕರಿಂದಾಗಿ ಉಳಿದಿವೆಯೇ ಹೊರತು, ಆಡಳಿತ ಮಂಡಳಿಗಳಿಂದಾಗಲಿ, ವ್ಯವಸ್ಥಾಪನಾ ಸಮಿತಿಗಳಿಂದಾಗಲಿ, ಖಾಸಗಿ ಟ್ರಸ್ಟ್ ಗಳಿಂದಾಗಲಿ ಉಳಿದಿಲ್ಲ. ಇವುಗಳಿಂದಾಗಿ ದೇವಾಲಯಗಳ ಕೊಟ್ಯಂತರ ರು. ಹಣ ಸೋರಿಕೆಯಾಗಿದೆ ಅಷ್ಟೆ ಎಂದು ಹೇಳಿದ ಮುಜರಾಯಿ ದೇವಾಲಯಗಳ ಅರ್ಚಕರ ಸಂಘದ ರಾಜ್ಯಾಧ್ಯಕ್ಷರಾದ ಶ್ರೀವತ್ಸ ಅವರು, ಅರ್ಚಕರನ್ನು ಸರಕಾರಿ ನೌಕರರೆಂದು ಘೋಷಿಸಿ, ಅವರಿಗೂ ಸರಕಾರಿ ವೇತನ ಮತ್ತು ಸೌಲಭ್ಯಗಳನ್ನು ನೀಡಬೇಕೆಂದು ಆಗ್ರಹಿಸಿದರು.
ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಕೃಷ್ಣಾಪುರ ಮಠದ ವಿದ್ಯಾಸಾಗರ ತೀರ್ಥ
ಸ್ವಾಮೀಜಿಯವರು, ಈ ಹಿಂದೆ ಮುಜರಾಯಿ ಅಧೀನದಲ್ಲಿದ್ದ ಕೆಲವು ಮಠಗಳಿಗೆ ಈಗ
ಸ್ವಾತಂತ್ರ್ಯ ಸಿಕ್ಕಿದೆ. ಆದರೆ, ಈಗ ಕೆಲವು ಮಠಗಳ ಚಟುವಟಿಕೆಗಳನ್ನು ನೋಡಿದರೆ ಯಾಕಾಗಿ ಮಠಗಳಿಗೆ ಸ್ವಾತಂತ್ರ್ಯ ಸಿಕ್ಕಿದೆಯೋ ಎಂದು ಅನಿಸುತ್ತಿದೆ ಎಂದು ಖೇದ ವ್ಯಕ್ತಪಡಿಸಿದರು. ದೇವಾಲಯಗಳು ವ್ಯಾಪಾರಿ ಕೇಂದ್ರಗಳಾಗಬಾರದು, ಬದಲಾಗಿ
ಧಾರ್ಮಪ್ರಜ್ಞೆ ಬೆಳೆಸುವ ಕೇಂದ್ರಗಳಾಗಬೇಕು ಎಂದು ಆಶಯ ವ್ಯಕ್ತಪಡಿಸಿದರು. ಸಮಾರಂಬದಲ್ಲಿ ಬೆಂಗಳೂರಿನ ಗುರೂಜಿ ರಾಮಸ್ವಾಮಿ ದೇವೆಶ್ರೀ, ಅಪರ ಜಿಲ್ಲಾಧಿಕಾರಿಗಳೂ, ಉಡುಪಿ ಜಿಲ್ಲಾ ಧಾರ್ಮಿಕ ಪರಿಷತ್ತಿನ ಅಧ್ಯಕ್ಷರೂ ಆದ ಕುಮಾರ್, ರಾಜ್ಯ ಧಾರ್ಮಿಕ ಪರಿಷತ್ತಿನ ಸದಸ್ಯರಾದ ಪಂಜ ಭಾಸ್ಕರ ಭಟ್, ನಗರಸಭಾದ್ಯಕ್ಷ ಕಿರಣ್ ಕುಮಾರ್, ವಿಹಿಂಪ ಜಿಲ್ಲಾಧ್ಯಕ್ಷ ಬೈಕಾಡಿ ಸುಪ್ರಸಾದ್ ಶೆಟ್ಟಿ, ಹಟ್ಟಿಯಂಗಡಿ ದೇಗುಲದ ಪ್ರಧಾನ ಅರ್ಚಕರಾದ ರಾಮಚಂದ್ರ ಭಟ್, ಪಡುಬಿದ್ರಿ ವೈ.ಎನ್.ರಾಮಚಂದ್ರ ರಾವ್ ಮೊದಲಾದವರು ಮುಖ್ಯ ಅತಿಥಿಗಳಾಗಿ ಭಗವಹಿಸಿದ್ದರು.
ಅರ್ಚಕರ ಸಂಘದ ಪ್ರಮುಖರಾದ ಸೂರ್ಯನಾರಾಯಣ ಉಪಾಧ್ಯಾಯ, ರಾಮದಾಸ ಆಚಾರ್ಯ ಮುಂಡ್ಕೂರು, ಪ್ರೊ.ಶ್ರೀಪತಿ ಉಪಾಧ್ಯಾಯ, ಕೆ.ಶ್ರೀಶ ಉಪಾಧ್ಯ ಮುಂತಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *