Realtime blog statisticsweb statistics
udupibits.in
Breaking News
ಉಡುಪಿ: ಕೂಸಮ್ಮ ಶಂಭು ಶೆಟ್ಟಿ ಸ್ಮಾರಕ ಹಾಜಿ ಅಬ್ದುಲ್ಲಾ ತಾಯಿ-ಮಕ್ಕಳ ಆಸ್ಪತ್ರೆಯಲ್ಲಿ ಶಿಶು ಮರಣ ?

ಅಂಬೇಡ್ಕರ್ ರಂಥ ಮತ್ತೊಬ್ಬರನ್ನು ಬೆಳೆಸಲು ಸ್ವ ತಂತ್ರ ಭಾರತಕ್ಕೆ ಯಾಕೆ ಸಾಧ್ಯವಾಗಿಲ್ಲ: ಫಾ.ವಿಲಿಯಂ ಮಾರ್ಟಿಸ್

ಉಡುಪಿ: ಬ್ರಿಟಿಷ್ ಆಡಳಿತ ಕಾಲದಲ್ಲಿ ಅಸ್ಪೃಶ್ಯರ ಪರ ಹೋರಾಟಗಾರ ಡಾ.ಅಂಬೇಡ್ಕರ್ ಮಹಾನ್ ನಾಯಕರಾಗಲು ಸಾಧ್ಯವಾಯಿತು. ಆದರೆ ಸ್ವತಂತ್ರ ಭಾರತದಲ್ಲಿ ಮತ್ತೊಬ್ಬ ಅಂಬೇಡ್ಕರ್ ರಂಥ ನಾಯಕರನ್ನು ಹುಟ್ಟುಹಾಕಲು, ಬೆಳೆಸಲು ಯಾಕೆ ಯಾವ ಸರಕಾರಗಳಿಗೂ ಸಾಧ್ಯವಾಗಿಲ್ಲ ಎಂದು ಎಲ್ಲರೂ ಚಿಂತಿಸಬೇಕು ಎಂದು ಉದ್ಯಾವರ ಚರ್ಚ್ ಧರ್ಮಗುರು ಫಾ.ವಿಲಿಯಂ ಮಾರ್ಟಿಸ್ ಹೇಳಿದರು.
ಕರ್ನಾಟಕ ಕೋಮು ಸೌಹಾರ್ದ ವೇದಿಕೆ ಮತ್ತು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಇವುಗಳ ಜಂಟಿ ಆಶ್ರಯದಲ್ಲಿ ಬನ್ನಂಜೆ ಗಾಂಧಿ ಭವನದಲ್ಲಿ ಇಂದು ಸಂಜೆ ನಡೆದ
ಡಾ.ಬಿ.ಅರ್.ಅಂಬೇಡ್ಕರ್ ಪರಿನಿರ್ವಾಣ ದಿನಾಚರಣೆಯಲ್ಲಿ ಕೋಮು ಸೌಹಾರ್ದ ವೇದಿಕೆ ಪ್ರಕಟಿಸಿದ ಖ್ಯಾತ ವಿಮರ್ಶಕ ಜಿ.ರಾಜಶೇಖರ್ ಬರೆದ ‘ಬಾಬರಿ ಮಸೀದಿ ಧ್ವಂಸ’ (ಕಳೆದ 20 ವರ್ಷಗಳ ಭಾರತದ ಮತೀಯ ರಾಜಕಾರಣದ ವಿಶ್ಲೇಷಣೆ) ಎಂಬ ಪುಸ್ತಕ ಬಿಡುಗಡೆಗೊಳಿಸಿ ಅವರು ಮಾತನಾಡುತ್ತಿದ್ದರು.
ಪದವಿ ಪಡೆದ ದಲಿತ ಸಮುದಾಯದ ವಿದ್ಯಾವಂತರಿಗೆ ಉದ್ಯೋಗ ನೀಡಲು ಸರಕಾರಗಳಿಗೆ ಸಾಧ್ಯವಾಗುತ್ತಿಲ್ಲ ಎಂದು ಆರೋಪಿಸಿದ ವಿಲಿಯಂ ಮಾರ್ಟಿಸ್, 16 ಸಾವಿರ ಬ್ಯಾಗ್ ಲಾಗ್ ಹುದ್ದೆಗಳನ್ನು ಇನ್ನು ಸರಕಾರ ತುಂಬಿಲ್ಲವೆಂದು ಟೀಕಿಸಿದರು. ಯಾವ ಸರಕಾರವಿರಲಿ, ಯಾವ ಪಕ್ಷಗಳೇ ಇರಲಿ ದಲಿತರನ್ನು ಮೆಲೆ ಬರಲು ಬಿಡುತ್ತಿಲ್ಲವೆಂದೂ ದೂರಿದರು.
ಹಿರಿಯ ಸಾಹಿತಿ ಗೋಪಾಲ ಬಿ.ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಜಿ.ರಾಜಶೇಖರ್ ಹಾಗೂ ಜಯನ್ ಮಲ್ಪೆ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *